Tirupati: ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ದಾಖಲೆ ಬರೆದ ಭಕ್ತ
ತಿರುಪತಿ ಶ್ರೀವಾರಿಯ ಮೇಲೆ ಅಪಾರ ಭಕ್ತಿ ಹೊಂದಿದ್ದ ಭಕ್ತರೊಬ್ಬರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾರೆ. ಅಷ್ಟಕ್ಕೂ ಆ ಭಕ್ತ ಮಾಡಿದ ಸಾಧನೆ ಏನು ಅಂತ ತಿಳಿದರೆ ನೀವು ಕೂಡ ಅಚ್ಚರಿಪಡುವಿರಿ. ಹಾಗಾದರೆ ತಿಮ್ಮಪ್ಪನ ಭಕ್ತನ ಸಾಧನೆ ಏನೆಂದು ತಿಳಿಯೋಣ.
ಮಹಂತಿ ಶ್ರೀನಿವಾಸ ರಾವ್ ಶ್ರೀಕಾಕುಳಂ ಮೂಲದವರು. ಇವರು ತಿರುಪತಿ ತಿಮ್ಮಪ್ಪನ ಪರಮ ಭಕ್ತರು. ಇವರು ಆಯುರ್ವೇದ ಔಷಧಿ ಅಂಗಡಿ ನಡೆಸುತ್ತಿದ್ದಾರೆ. ಇವರಿಗೆ ಏಳು ಪರ್ವತಗಳ ಒಡೆಯನ ದರ್ಶನ ಪಡೆಯುವುದು ಅಂದರೆ ತುಂಬಾ ಇಷ್ಟ. ಹೀಗಾಗಿ ಈವರೆಗೆ 449 ಬಾರಿ ತಿರುಪತಿಗೆ ಪಾದಯಾತ್ರೆ ಮೂಲಕ ಸಾಗಿ ತಿರುಪತಿ ತಿರುಮಲನ ದರ್ಶನ ಪಡೆದು ದಾಖಲೆ ಬರೆದಿದ್ದಾರೆ.

ಪ್ರತಿ ಬಾರಿಯೂ ಮೆಟ್ಟಿಲು ಹತ್ತಿ ದರ್ಶನ ಪಡೆಯುತ್ತಿದ್ದರಿಂದ ಅವರಿಗೆ ಈ ಮನ್ನಣೆ ಸಿಕ್ಕಿದೆ. ಇದಲ್ಲದೆ ಅವರು ಪ್ರತಿದಿನ 2 ಗಂಟೆಗಳ ಕಾಲ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕೆಲಸ ಕೂಡ ಮಾಡುತ್ತಾರೆ. ಶ್ರೀನಿವಾಸ ರಾವ್ ಅವರು 1997 ರಲ್ಲಿ ತಿರುಪತಿಗೆ ತಮ್ಮ ಮೊದಲ ಕಾಲ್ನಡಿಗೆಯನ್ನು ಪ್ರಾರಂಭಿಸಿದರು.
ಅಂದಿನಿಂದ ಅವರು 26 ಜುಲೈ 2018 ರವರೆಗೆ 175 ಬಾರಿ ಶ್ರೀವಾರಿ ದರ್ಶನವನ್ನು ಪಡೆದಿದ್ದಾರೆ. 1997 ರಿಂದ 2004 ರವರೆಗೆ ಒಮ್ಮೆ ಮಾತ್ರ ಭೇಟಿ ನೀಡಿದ್ದರು. 2004 ರಿಂದ 2009 ರವರೆಗೆ ಅವರು 28 ಬಾರಿ ಏಳು ಬೆಟ್ಟಗಳ ಒಡೆಯನ ದರ್ಶನ ಪಡೆದಿದ್ದಾರೆ.
ಅಲ್ಲದೆ 2010-2014ರಲ್ಲಿ 21 ಬಾರಿ, 2015ರಲ್ಲಿ 20 ಬಾರಿ ಹಾಗೂ 2016ರಲ್ಲಿ 15 ಬಾರಿ ಶ್ರೀವಾರಿ ದರ್ಶನ ಪಡೆದಿದ್ದಾರೆ. ಅದರಂತೆ 2017ರಲ್ಲಿ ತಮ್ಮ 50ನೇ ವಯಸ್ಸಿನಲ್ಲಿ 50 ಬಾರಿ ಸ್ವಾಮಿಯ ದರ್ಶನ ಪಡೆದ ಶ್ರೀನಿವಾಸ ರಾವ್ ಅಂದಿನಿಂದ ಈ ವರ್ಷ ಜೂನ್ 26ರವರೆಗೆ 40 ಬಾರಿ ಒಟ್ಟು 449 ಬಾರಿ ಕಾಲ್ನಡಿಯ ಮೂಲಕ ತಿರುಪತಿ ತಿರುಮಲ ದರ್ಶನ ಪಡೆದಿದ್ದಾರೆ.

ಮಾತ್ರವಲ್ಲದೆ ಒಂದೇ ದಿನದಲ್ಲಿ ಒಮ್ಮೆ 3 ಬಾರಿ ಬೆಟ್ಟ ಹತ್ತಿ ಸ್ವಾಮಿಯ ದರ್ಶನ ಮಾಡಿದ್ದಾರೆ. ಈ ತೀವ್ರ ಭಕ್ತಿಗೆ ಮೆಚ್ಚಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ನೀಡಿದೆ. 27ನೇ ವಯಸ್ಸಿನಿಂದಲೂ ತಿರುಪತಿ ಬೆಟ್ಟ ಹತ್ತುತ್ತಾ ಶ್ರೀನಿವಾಸ ರಾವ್ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಅವರು ವೈಕುಂಠ ಏಕಾದಶಿ ಮತ್ತು ದ್ವಾದಶಿಯಂದು ತಪ್ಪದೆ ತಿರುಪತಿಗೆ ತೆರಳುತ್ತಾರೆ.
ಈ ಬಗ್ಗೆ ಮಾತನಾಡಿದ ಶ್ರೀನಿವಾಸ ರಾವ್ ಅವರು, 'ನಾನು ಈ ಸಾಧನೆ ಮಾಡಲು ಪತ್ನಿ ಮಾಕಂತಿ ಸರಸ್ವತಿ ಹಾಗೂ ಮಗ ಮಾಕಂತಿ ಆಂಜನೇಯ ರಾಕೇಶ್ ಕಾರಣ' ಎಂದು ಹೇಳಿದ್ದಾರೆ. ನನ್ನ ದೇಹ ಸಹಕರಿಸುವವರೆಗೆ ಏಳು ಬೆಟ್ಟದ ಒಡೆಯನ ದರ್ಶನ ನಡೆದೇ ಮಾಡುತ್ತೇನೆ. ಜೊತೆಗೆ ಶ್ರೀವಾರಿಗೆ ಪೂಜೆ ಸಲ್ಲಿಸುತ್ತೇನೆ ಎಂದಿದ್ದಾರೆ.
ತಿರುಮಲ ತಿರುಪತಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅದೇ ರೀತಿ ಹಬ್ಬ ಹರಿದಿನಗಳು ಮತ್ತು ಬ್ರಹ್ಮೋತ್ಸವದ ದಿನಗಳಲ್ಲಿ ಈ ಸಂಖ್ಯೆ ಒಂದು ಲಕ್ಷವನ್ನು ಮೀರುತ್ತದೆ. ಸರ್ವ ದರ್ಶನ, ದಿವ್ಯ ದರ್ಶನ, 300 ರೂಪಾಯಿ ವಿಶೇಷ ದರದ ದರ್ಶನ ಇತ್ಯಾದಿಗಳ ಮೂಲಕ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ತಮಗೆ ಬೇಕಾದವರು ವಸತಿಯನ್ನು ಕಾಯ್ದಿರಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ.












Click it and Unblock the Notifications