ತಿಮ್ಮಪ್ಪನ ಹುಂಡಿಗೆ ಹರಿದುಬಂತು 6.93 ಕೋಟಿ ರೂ.: ಇತಿಹಾಸದಲ್ಲೇ ಇದು 2ನೇ ಭಾರಿ ಅತೀ ದೊಡ್ಡ ಕಲೆಕ್ಷನ್

ಕಲಿಯುಗದ ವೈಕುಂಠ ಎಂದು ಕರೆಯಲ್ಪಡುವ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಗೆ ನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರ ಇಷ್ಟಾರ್ಥಗಳನ್ನ ಈಡೇರಿಸುವ ತಿಮ್ಮಪ್ಪನಿಗೆ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಹಣ ಹರಿದುಬರುವುದು ಸಾಮಾನ್ಯ. ಆದರೆ, ಗುರುವಾರ (ಸೆಪ್ಟೆಂಬರ್ 10, 2026) ಶ್ರೀವಾರಿ ಹುಂಡಿಗೆ ಬರೋಬ್ಬರಿ 6.93 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದ್ದು, ಇದು ತಿರುಮಲ ತಿರುಪತಿ ದೇವಸ್ಥಾನದ ಇತಿಹಾಸದಲ್ಲಿಯೇ ಒಂದೇ ದಿನದಲ್ಲಿ ಸಂಗ್ರಹವಾದ ಎರಡನೇ ಅತಿ ದೊಡ್ಡ ಮೊತ್ತವಾಗಿದೆ.

ಸಾಲು ಸಾಲು ರಜೆಗಳು ಮತ್ತು ವಿಕೆಂಡ್‌ ಬೇರೆ, ಈ ಹಿನ್ನೆಲೆಯಲ್ಲಿ ಭಕ್ತರ ದಟ್ಟಣೆ ವಿಪರೀತವಾಗಿ ಹೆಚ್ಚಾಗಿದ್ದು, ಹುಂಡಿ ಸಂಗ್ರಹದಲ್ಲಿ ಈ ಹೊಸ ದಾಖಲೆ ನಿರ್ಮಾಣವಾಗಿದೆ.

Tirupati Balaji Temple Hundi Records Historic 6 93 Crore Collection in a Single Day Get Latest Update

ತಿರುಪತಿ ತಿಮ್ಮಪ್ಪನ ಹುಂಡಿಗೆ ಒಂದೇ ದಿನ 6 ಕೋಟಿ ರೂಪಾಯಿಗಿಂತ ಅಧಿಕ ಕಾಣಿಕೆ ಹರಿದುಬರುತ್ತಿರುವುದು ಇದು ಏಳನೇ ಬಾರಿ. ಈ ಹಿಂದಿನ ದಾಖಲೆಗಳನ್ನ ಗಮನಿಸುವುದಾದರೆ, 2023ರ ಜನವರಿ 2ರಂದು ವೈಕುಂಠ ಏಕಾದಶಿಯ ಪರ್ವದಿನದಂದು ದಾಖಲಾದ 7.68 ಕೋಟಿ ರೂಪಾಯಿಗಳ ಸಂಗ್ರಹವೇ ಈವರೆಗಿನ ಅತಿ ದೊಡ್ಡ ಗರಿಷ್ಠ ಮೊತ್ತವಾಗಿದೆ.

ಉಳಿದಂತೆ, 2018ರ ಏಪ್ರಿಲ್ 1ರಂದು 6.45 ಕೋಟಿ ರೂ., 2022ರ ಆಗಸ್ಟ್ 23ರಂದು 6.31 ಕೋಟಿ ರೂ., 2018ರ ಜುಲೈ 26ರಂದು 6.28 ಕೋಟಿ ರೂ., 2022ರ ಜುಲೈ 4ರಂದು 6.18 ಕೋಟಿ ರೂ., ಹಾಗೂ ಇತ್ತೀಚೆಗೆ 2026ರ ಆಗಸ್ಟ್ 18ರಂದು 6.12 ಕೋಟಿ ರೂ. ಕಾಣಿಕೆ ಸಂಗ್ರಹವಾಗಿತ್ತು. ಸಾಲು ರಜೆಗಳಿರುವುದರಿಂದ ಮುಂದಿನ ದಿನಗಳಲ್ಲೂ ಹುಂಡಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಬೆಂಗಳೂರು ಭಕ್ತನಿಂದ ಬರೋಬ್ಬರಿ 1 ಕೋಟಿ ರೂ. ದೇಣಿಗೆ

ಹುಂಡಿ ಕಲೆಕ್ಷನ್ ಜೊತೆಗೆ ಭಕ್ತರು ನೇರವಾಗಿಯೂ ಟಿಟಿಡಿ ಟ್ರಸ್ಟ್‌ಗಳಿಗೆ ದೊಡ್ಡ ಮಟ್ಟದ ದೇಣಿಗೆ ನೀಡುತ್ತಿದ್ದಾರೆ. ಬೆಂಗಳೂರಿನ ನಿವಾಸಿ ಗಿರಿಯಪ್ಪ ದಯಾನಂದ ಎಂಬುವವರು ಶುಕ್ರವಾರ ಟಿಟಿಡಿ ಆಡಳಿತ ಮಂಡಳಿಗೆ ಬರೋಬ್ಬರಿ 1 ಕೋಟಿ ರೂಪಾಯಿಗಳನ್ನ ದೇಣಿಗೆಯಾಗಿ ನೀಡಿದ್ದಾರೆ.

ಗಿರಿಯಪ್ಪ ಅವರು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಯ್ಯ ಚೌಧರಿ ಅವರನ್ನ ಖುದ್ದಾಗಿ ಭೇಟಿಯಾಗಿ ದೇಣಿಗೆಯ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಹಸ್ತಾಂತರಿಸಿದರು. ಈ ಮೊತ್ತದಲ್ಲಿ 50 ಲಕ್ಷ ರೂಪಾಯಿಗಳನ್ನ ಭಕ್ತರಿಗೆ ಉಚಿತ ಊಟ ಒದಗಿಸುವ 'ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್'ಗೆ ಮತ್ತು ಉಳಿದ 50 ಲಕ್ಷ ರೂಪಾಯಿಗಳನ್ನು ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ 'ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್'ಗೆ ಬಳಸಿಕೊಳ್ಳಲು ಸೂಚಿಸಲಾಗಿದೆ.

ಪ್ರಾಣದಾನ ಟ್ರಸ್ಟ್ ಮೂಲಕ ಕ್ಯಾನ್ಸರ್, ಹೃದಯ, ಮೂತ್ರಪಿಂಡ ಮತ್ತು ಮೆದುಳಿನ ಸಮಸ್ಯೆಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ.

ತಿರುಪತಿ ದರ್ಶನ ಕುರಿತ ವಿವರ

ತಿರುಮಲದಲ್ಲಿ ಸದ್ಯ ಭಕ್ತರ ದಟ್ಟಣೆ ಮಿತಿಮೀರಿದೆ. ಟಿಟಿಡಿ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 12ರಂದು ಒಟ್ಟು 81,724 ಭಕ್ತರು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಅಂದು 38,361 ಭಕ್ತರು ತಲೆಕೂದಲು ನೀಡಿ ಹರಕೆ ತೀರಿಸಿದ್ದು, ಕೇವಲ ಗುರುವಾರ ಒಂದೇ ದಿನ 4.04 ಕೋಟಿ ರೂ. ಹುಂಡಿ ಕಾಣಿಕೆ ಸಂಗ್ರಹವಾಗಿದೆ. ಜೊತೆಗೆ 4.39 ಲಕ್ಷ ಲಡ್ಡುಗಳ ಮಾರಾಟವಾಗಿದ್ದು, 2.58 ಲಕ್ಷ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಅಶ್ವಿನಿ ಆಸ್ಪತ್ರೆಯಲ್ಲಿ 3,839 ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಸೆಪ್ಟೆಂಬರ್ 13ರ ಭಾನುವಾರದ (ಇಂದು) ಪರಿಸ್ಥಿತಿಯನ್ನು ಗಮನಿಸಿದರೆ, ವೈಕುಂಟಂ ಕ್ಯೂ ಕಾಂಪ್ಲೆಕ್ಸ್‌ನ ಎಲ್ಲಾ ಕಂಪಾರ್ಟ್‌ಮೆಂಟ್‌ಗಳು ಭರ್ತಿಯಾಗಿ, ಶಿಲಾತೋರಣದವರೆಗೂ ಭಕ್ತರ ಸರತಿ ಸಾಲು ಬೆಳೆದಿದೆ. ಟೋಕನ್ ರಹಿತ ಸರ್ವದರ್ಶನಕ್ಕೆ ಸುಮಾರು 24 ಗಂಟೆಗಳ ಕಾಲಾವಕಾಶ ಬೇಕಾಗುತ್ತಿದ್ದು, ಭಕ್ತರು ಕಾದು ದರ್ಶನ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+