Tirupati: ಹೈದರಾಬಾದ್ ದಮ್ ಬಿರಿಯಾನಿ ತಿಂದ.. ದುಬಾರಿ ಕಾರು ಗೆದ್ದ..!
ಬಟ್ಟೆ, ಆಭರಣ ಮಳಿಗೆಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಆಕರ್ಷಿಸಲು ಮತ್ತು ವ್ಯಾಪಾರವನ್ನು ಹೆಚ್ಚಿಸಲು ವಿವಿಧ ಯೋಜನೆಗಳು ಮತ್ತು ಲಕ್ಕಿ ಡ್ರಾಗಳನ್ನು ನಡೆಸುತ್ತವೆ. ಅಂತಹ ಸಂದರ್ಭಗಳಲ್ಲಿ ಕೆಲವರಿಗೆ ಮಾತ್ರ ಅದೃಷ್ಟದ ದೇವತೆ ಆಶೀರ್ವದಿಸುತ್ತಾಳೆ. ಅಂಥವರು ಕಾರುಗಳು ಮತ್ತು ದುಬಾರಿ ವಸ್ತುಗಳನ್ನು ಗೆಲ್ಲುತ್ತಾರೆ.
ಹೀಗೆ ಹೊಟೇಲ್‌ನಲ್ಲಿ ಬಿರಿಯಾನಿ ತಿಂದ ಅದೃಷ್ಟಶಾಲಿಯೊಬ್ಬ ಲಕ್ಷ ಬೆಲೆ ಬಾಳುವ ಕಾರು ಗೆದ್ದಿದ್ದಾನೆ. ತಿರುಪತಿ ನಗರದ ರೋಬೋ ಹೋಟೆಲ್ ನಲ್ಲಿ ನಡೆದ ಬಿರಿಯಾನಿ ಲಕ್ಕಿ ಡ್ರಾದಲ್ಲಿ ರಾಹುಲ್ ಎಂಬ ವ್ಯಕ್ತಿ ನಿಸ್ಸಾನ್ ಮ್ಯಾಗ್ನೇಟ್ ಕಾರು ಗೆದ್ದಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ರೋಬೋ ಹೋಟೆಲ್ ವಿನೂತನ ಯೋಜನೆಯನ್ನು ಪರಿಚಯಿಸಿತ್ತು.

ಇಲ್ಲಿ ಹೈದರಾಬಾದ್ ದಮ್ ಬಿರಿಯಾನಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರತಿ ಬಿರಿಯಾನಿ 275 ರೂ.ಗೆ ಮಾರಾಟವಾಗಿತ್ತು. ತಮ್ಮ ಹೋಟೆಲ್ ನಲ್ಲಿ ಬಿರಿಯಾನಿ ತಿಂದರೆ ಕಾರು ಗೆಲ್ಲಬಹುದು ಎಂದು ಘೋಷಿಸಿತ್ತು. ಇದರಿಂದಾಗಿ ಜನರು ಹೋಟೆಲ್‌ನಲ್ಲಿ ಸರತಿ ಸಾಲಿನಲ್ಲಿ ನಿಂತು ಬಿರಿಯಾನಿ ತಿಂದಿದ್ದರು. ಬಿರಿಯಾನಿ ತಿಂದ ಎಲ್ಲರಿಗೂ ಕೂಪನ್ ನೀಡಲಾಗಿತ್ತು. 23,000ಕ್ಕೂ ಹೆಚ್ಚು ಕೂಪನ್‌ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗಿತ್ತು. ಹೊಸ ವರ್ಷ ಆಚರಣೆ ವೇಲೆ ಭಾನುವಾರ ರಾತ್ರಿ ಡ್ರಾ ನಡೆಸಲಾಯಿತು.
ಹೋಟೆಲ್ ಮುಖ್ಯಸ್ಥ ಭರತ್ ಕುಮಾರ್ ರೆಡ್ಡಿ ಮತ್ತು ನೀಲಿಮಾ ದಂಪತಿ ಹೋಟೆಲ್ ಆವರಣದಲ್ಲಿ ಆಯೋಜಿಸಿದ್ದ ಲಕ್ಕಿ ಡಿಪ್ ನಲ್ಲಿ ತಿರುಪತಿಯ ಯುವಕ ರಾಹುಲ್ ವಿಜೇತರಾದರು. ಅವರು ನಿಸ್ಸಾನ್ ಮ್ಯಾಗ್ನೆಟ್ ಕಾರನ್ನು ಬಹುಮಾನವಾಗಿ ಗೆದ್ದಿದ್ದಾರೆ.
ಸ್ವತಃ ಹೋಟೆಲ್ ಮುಖ್ಯಸ್ಥ ಭರತ್ ಕುಮಾರ್ ರೆಡ್ಡಿ ವಿಜೇತ ರಾಹುಲ್ ಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಭರತ್ ಕುಮಾರ್ ರೆಡ್ಡಿ, ನಗರವಾಸಿಗಳನ್ನು ತಲುಪುವ ಉದ್ದೇಶದಿಂದ ಈ ವಿನೂತನ ಯೋಜನೆ ಜಾರಿಗೆ ತರಲಾಗಿದೆ. ರೋಬೋ ಹೋಟೆಲ್ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಖಾದ್ಯಗಳನ್ನು ನೀಡುತ್ತಿದ್ದು, ಮುಂದೆಯೂ ಇಂತಹ ವಿನೂತನ ಯೋಜನೆಗಳನ್ನು ಮಾಡಲಿದೆ ಎಂದು ಭರತ್ ಕುಮಾರ್ ರೆಡ್ಡಿ ಹೇಳಿದರು. ಹೋಟೆಲ್ ಆರಂಭವಾಗಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.












Click it and Unblock the Notifications