Tirupati: ಡಿ.23 ರಿಂದ ಜ.1ರವರೆಗೆ ವೈಕುಂಠ ದರ್ಶನಕ್ಕೆ ಅವಕಾಶ: 21 ನಿಮಿಷದಲ್ಲಿ 2.25 ಲಕ್ಷ ಟಿಕೆಟ್ ಖಾಲಿ.. ಭಾರೀ ಆದಾಯ!
ವೈಕುಂಠ ಏಕಾದಶಿಯಂದು ತಿರುಮಲ ಶ್ರೀವಾರಿ ದರ್ಶನಕ್ಕಾಗಿ ಆನ್‌ಲೈನ್‌ನಲ್ಲಿ ಟಿಟಿಡಿ ನೀಡಿದ 300 ರೂಪಾಯಿಯ ಎಸ್‌ಇಡಿ ಟಿಕೆಟ್‌ಗಳಿಗೆ ಭಕ್ತರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀವಾರಿ ವೈಕುಂಠದ ಮೂಲಕ ದರ್ಶನ ಟಿಕೆಟ್ ಖರೀದಿಸಲು ಭಕ್ತರು ಪೈಪೋಟಿ ನಡೆಸಿದ್ದು ಕಂಡುಬಂದಿದೆ.
ತಿರುಮಲ ಶ್ರೀವಾರಿ ದರ್ಶನಕ್ಕಾಗಿ ಟಿಟಿಡಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತಿದ್ದಂತೆ ಎಲ್ಲವೂ 21 ನಿಮಿಷಗಳಲ್ಲಿ ಖಾಲಿಯಾಗಿವೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ವೈಕುಂಠ ದರ್ಶನದ ಟಿಕೆಟ್ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ 21 ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳನ್ನು ಭಕ್ತರು ಬುಕ್ ಮಾಡಿದ್ದಾರೆ. ಇವುಗಳ ಮಾರಾಟದ ಮೂಲಕ ಟಿಟಿಡಿಗೆ 6.75 ಕೋಟಿ ರೂಪಾಯಿ ಆದಾಯ ಬಂದಿದೆ.

ಡಿಸೆಂಬರ್ 23 ರಿಂದ ಜನವರಿ 1 ರವರೆಗೆ ವೈಕುಂಠ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಉದ್ದೇಶಕ್ಕಾಗಿ ಟಿಟಿಡಿ ಆನ್‌ಲೈನ್‌ನಲ್ಲಿ 2.25 ಲಕ್ಷ ಎಸ್‌ಇಡಿ ಟಿಕೆಟ್‌ಗಳನ್ನು ಬಿಡುಗಡೆ ಮಾಡಿತ್ತು. ಈ ಟಿಕೆಟ್‌ಗಳ ಖರೀದಿಗೆ ಭಕ್ತರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ಟಿಕೆಟ್‌ಗಳು ಭಕ್ತರಿಗೆ ಸಾಕಾಗಲಿಲ್ಲ. ಕೇವಲ 21 ನಿಮಿಷದಲ್ಲಿ ಈ ಟಿಕೆಟ್‌ಗಳು ಖಾಲಿಯಾಗಿದ್ದು ಇದು ತಿರುಪತಿ ತಿಮ್ಮಪ್ಪನ ಮೇಲೆ ಭಕ್ತರಿಗಿರುವ ನಂಬಿಕೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ.
ಪ್ರಸ್ತುತ ಆನ್‌ಲೈನ್ ಟಿಕೆಟ್ ನೀಡಲು ಕ್ಲೌಡ್ ತಂತ್ರಜ್ಞಾನವನ್ನು ಬಳಸಲಾಗುತ್ತಿರುವುದರಿಂದ ಯಾವುದೇ ತೊಂದರೆಯಿಲ್ಲದೆ ಭಕ್ತರು ಬುಕ್ ಮಾಡಿದ್ದಾರೆ ಎಂದು ಟಿಟಿಡಿ ಐಟಿ ಜಿಎಂ ಸಂದೀಪ್ ರೆಡ್ಡಿ ತಿಳಿಸಿದ್ದಾರೆ. ಮತ್ತೊಂದೆಡೆ ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಸಂಬಂಧಿಸಿದಂತೆ ಒಂಬತ್ತು ಪ್ರದೇಶಗಳಲ್ಲಿ ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು ಮತ್ತು ಹಿಂದಿನ ದಿನದಿಂದ 4.25 ಲಕ್ಷ ಸರ್ವದರ್ಶನಂ ಟೈಮ್ ಸ್ಲಾಟ್ ಟೋಕನ್‌ಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

ತಿರುಚಾನೂರು ಶ್ರೀ ಪದ್ಮಾವತಿ ಅಮ್ಮನವರ ಕಾರ್ತಿಕ ಬ್ರಹ್ಮೋತ್ಸವ
ತಿರುಪತಿಯಲ್ಲಿ ಶುಕ್ರವಾರ ತಿರುಚಾನೂರು ಶ್ರೀ ಪದ್ಮಾವತಿ ಅಮ್ಮನವರ ಕಾರ್ತಿಕ ಬ್ರಹ್ಮೋತ್ಸವ ನಡೆಸಲಾಯಿತು. ಪದ್ಮಾವತಿ ಅಮ್ಮನವರ ಕಾರ್ತಿಕ ಬ್ರಹ್ಮೋತ್ಸವದ ಮೊದಲ ದಿನವಾದ ಶುಕ್ರವಾರ ರಾತ್ರಿ ಶ್ರೀ ಪದ್ಮಾವತಿ ಅಮ್ಮನವರು ವೆನ್ನಮುದ್ಧಕೃಷ್ಣ ದೇವರಿಂದ ಅಲಂಕರಿಸಲ್ಪಟ್ಟ ಚಿಕ್ಕ ಶೇಷ ವಾಹನದಲ್ಲಿ ಭಕ್ತರಿಗೆ ಆಶೀರ್ವಾದ ನೀಡಿದರು. ಗಜರಾಜರು ಮುಂದೆ ಸಾಗುತ್ತಿದ್ದರೆ ಈ ವೇಳೆ ಕಲಾತಂಡಗಳ ಅಬ್ಬರ, ಭಕ್ತರು ಕರ್ಪೂರ ಉರಿಸುವ ಮೂಲಕ ವಾಹನಸೇವೆ ಅದ್ಧೂರಿಯಾಗಿ ನಡೆಯಿತು.
ತಿರುಚಾನೂರು ಶ್ರೀ ಪದ್ಮಾವತಿ ಅಮ್ಮನವರ ಕಾರ್ತಿಕ ಬ್ರಹ್ಮೋತ್ಸವದಲ್ಲಿ ವಾಹನಸೇವೆಯೊಂದಿಗೆ ವಿವಿಧ ವೇದಿಕೆಗಳಲ್ಲಿ ನಡೆದ ಧಾರ್ಮಿಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡಿವೆ. ಟಿಟಿಡಿ ಹಿಂದೂ ಧಾರ್ವಿುಕ ಯೋಜನೆಗಳ ಆಶ್ರಯದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಶುಕ್ರವಾರ ಮೊದಲ ದಿನ ನಡೆದ ಕಾರ್ಯಕ್ರಮಗಳ ವಿವರಗಳಿವೆ.
ಶುಕ್ರವಾರದ ಬ್ರಹ್ಮೋತ್ಸವ...
ಬ್ರಹ್ಮೋತ್ಸವದ ಮೊದಲ ದಿನ ಚಿನ್ನಶೇಷ ವಾಹನ ಸೇವೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಕಲಾವಿದರು ಸುಂದರ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಎಸ್.ವಿ.ಸಂಗೀತ ಮತ್ತು ನೃತ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರೀದೇವಿ ಭೂದೇವಿ, ಶ್ರೀನಿವಾಸುಡು, ಗರುತ್ಮಂತುಡು, ಆಂಜನೇಯ ಸ್ವಾಮಿ ವೇಷ ಧರಿಸಿದರೆ, ಇತರೆ ವಿದ್ಯಾರ್ಥಿಗಳು ವಿವಿಧ ಅನ್ನಮಯ್ಯ ಸಂಕೀರ್ತನೆಗಳ ತಾಳಕ್ಕೆ ತಕ್ಕಂತೆ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಅದೇ ರೀತಿ ಲಂಬಾಡಿ ನೃತ್ಯ, ದಿಮ್ಸ ನೃತ್ಯ, ಕರಗಂ, ವೀರನಾಟ್ಯ, ಭರತನಾಟ್ಯ, ತಿರುಮೊಳಿ ನೃತ್ಯ, ಕೋಲಾಟ, ಕೇರಳದ ಕಲಾವಿದರ ಡೋಲು ವಾದನ ಭಕ್ತರನ್ನು ವಿಶೇಷವಾಗಿ ಆಕರ್ಷಿಸಿತು.












Click it and Unblock the Notifications