Tirumala Tirupati: ಬ್ಲ್ಯಾಕ್‌ ಮಾರ್ಕೆಟ್‌ನಲ್ಲಿ ಸಿಗುತ್ತಿವೆ ವಿಐಪಿ ದರ್ಶನದ ಟಿಕೆಟ್‌ಗಳು- ಟಿಟಿಡಿ ಸಿಬ್ಬಂದಿಯ ಕರಾಳ ದಂಧೆ

ತಿರುಪತಿ, ಜುಲೈ 07: ದೇಶದ ಅತ್ಯಂತ ಪ್ರತಿಷ್ಠಿತ ದೇವಾಲಯಗಳಲ್ಲಿ ಒಂದಾದ ತಿರುಪತಿ ಬಾಲಾಜಿ ದರ್ಶನಕ್ಕೆ ಪ್ರತಿ ದಿನ ಲಕ್ಷಾಂತರ ಜನರು ಆಗಮಿಸುತ್ತಾರೆ. ದೇವರ ದರ್ಶನ ಪಡೆಯಲು ದಿನಗಟ್ಟಲೇ ಸಾಲುಗಳಲ್ಲಿ ಭಕ್ತರು ನಿಲ್ಲುತ್ತಾರೆ. ಆದರೆ, ಈ ದೇವಾಲಯದಲ್ಲಿ ವಿಐಪಿಗಳಿಗೆ ವಿಶೇಷ ದರ್ಶನದ ಅವಕಾಶವಿದೆ. ಅವರು ಹೆಚ್ಚು ದುಡ್ಡು ನೀಡಿ ಆದಷ್ಟು ಬೇಗ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಆದರೆ, ವಿಐಪಿ ಟಿಕೆಟ್‌ ಮಾರಾಟವು ಕರಾಳ ದಂಧೆಯ ಸ್ವರೂಪ ಪಡೆದಿರುವ ಸುದ್ದಿಯೊಂದು ಹೊರಬಿದ್ದಿದೆ.

ವಿಐಪಿ ದರ್ಶನ ಟಿಕೆಟ್‌ಗಳನ್ನು ಬ್ಲ್ಯಾಕ್‌ ಮಾರ್ಕೆಟ್‌ನಲ್ಲಿ ಮರಾಟ ಮಾಡಿದ್ದಕ್ಕಾಗಿ ಟಿಟಿಡಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

Tirumala Tirupati: TTD staffer booked for black marketing VIP break darshan tickets

ತಿರುಪತಿ ನಗರದಲ್ಲಿ ವಿಐಪಿ ದರ್ಶನದ ಟಿಕೆಟ್‌ಗಳನ್ನು ಬ್ಲ್ಯಾಕ್‌ ಮಾರ್ಕೆಟಿಂಗ್‌ ಮಾರಾಟದಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಿಬ್ಬಂದಿಯನ್ನು ಗುರುವಾರ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಆರೋಪಿಯನ್ನು ಶಂಕರ್ ಎಂದು ಗುರುತಿಸಲಾಗಿದ್ದು, ಹೈದರಾಬಾದ್‌ನ ಭಕ್ತರ ತಂಡವೊಂದಕ್ಕೆ ಆರು ಟಿಕೆಟ್‌ಗಳನ್ನು 42,000 ರೂ.ಗಳ ಬೆಲೆಯಲ್ಲಿ ಮಾರಾಟ ಮಾಡಿದ್ದಾನೆ. ನಿಜವಾದ ಟಿಕೆಟ್‌ ಬೆಲೆ 3,000 ರೂ. ಆಗಿದ್ದು, ಈತ ಒಂದು ಟಿಕೆಟ್‌ಗೆ 7000 ರೂ.ಗೆ ಮಾರಾಟ ಮಾಡಿದ್ದಾನೆ.

Tirumala Tirupati: TTD staffer booked for black marketing VIP break darshan tickets

ಟಿಟಿಡಿಯ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಭಾಗಕ್ಕೆ ಈ ಅಕ್ರಮದ ಬಗ್ಗೆ ಮಾಹಿತಿ ಸಿಕ್ಕಿದ್ದು, ವೈಕುಂಟಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿರುವ ದರ್ಶನ ಟಿಕೆಟ್ ಕೌಂಟರ್‌ನಲ್ಲಿ ತನಿಖೆ ನಡೆಸಲಾಗಿದೆ. ಶಂಕರ್ ಎಂಬ ವ್ಯಕ್ತಿ ಹೈದರಾಬಾದ್ ಮೂಲದ ಭಕ್ತ ಸಮೂಹದ ಟಿಕೆಟ್‌ಗಳನ್ನು 42,000 ರೂ.ಗೆ ಮಾರಾಟ ಮಾಡಿರುವುದು ಬಹಿರಂಗವಾಗಿದೆ.

ಸ್ಥಳೀಯ ಎಂಎಲ್‌ಸಿಯ ಶಿಫಾರಸು ಪತ್ರವನ್ನು ದುರುಪಯೋಗಪಡಿಸಿಕೊಂಡು ಶಂಕರ್ ಟಿಕೆಟ್ ಪಡೆದಿದ್ದರು ಎಂದು ವರದಿಯಾಗಿದೆ. ನಂತರ ವಿಜಿಲೆನ್ಸ್ ವಿಭಾಗವು ತಿರುಮಲ 2 ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

Tirumala Tirupati: TTD staffer booked for black marketing VIP break darshan tickets

ಟಿಕೆಟ್ ಖರೀದಿಸಲು ಭಕ್ತರು ಮಧ್ಯವರ್ತಿಗಳನ್ನು ಸಂಪರ್ಕಿಸುವುದನ್ನು ನಿಲ್ಲಸಬೇಕು. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಟಿಟಿಡಿ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸುವಂತೆ ಟಿಟಿಡಿ ಅಧಿಕಾರಿಗಳು ಕೇಳಿಕೊಂಡಿದ್ದಾರೆ.

ತಿರುಪತಿಯಲ್ಲಿ ಹೆಚ್ಚುತ್ತಿರುವ ಭಕ್ತರ ಸಂಖ್ಯೆ

ತಿರುಮಲ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಭಾರೀ ಹೆಚ್ಚುತ್ತಿದೆ. ಟೋಕನ್ ರಹಿತ ದರ್ಶನಕ್ಕಾಗಿ ತಿರುಮಲದಲ್ಲಿ 21 ಕಂಪಾರ್ಟ್‌ಮೆಂಟ್‌ಗಳಲ್ಲಿ ಕಾಯುತ್ತಿರುವ ಭಕ್ತರ ನೂಕುನುಗ್ಗಲು ಇಂದಿಗೂ ಮುಂದುವರೆದಿದೆ.

ದರ್ಶನ ಪೂರ್ಣಗೊಳ್ಳಲು 12 ಗಂಟೆ ಬೇಕು ಎಂದು ತಿಳಿದು ಬಂದಿದೆ. ಬುಧವಾರ, 77,299 ಭಕ್ತರು ತಿರುಮಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರೆ, 30,479 ಭಕ್ತರು ತಮ್ಮ ಮುಡಿಯನ್ನು ಅರ್ಪಿಸಿದರು.

ಭಕ್ತರ ಕಾಣಿಕೆಗಳ ಮೂಲಕ ದೇವಾಲಯಕ್ಕೆ 3.93 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಬಹಿರಂಗಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+