Tirumala November Ticket: ತಿರುಪತಿ ನವೆಂಬರ್ ದರ್ಶನ ಟಿಕೆಟ್ ಬಿಡುಗಡೆ

ತಿರುಮಲ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಆಧ್ಯಾತ್ಮಿಕ ಸ್ಥಳವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಟಿಟಿಡಿ ನವೆಂಬರ್ ತಿಂಗಳ ತಿರುಮಲ ಶ್ರೀವಾರಿ ವಿಶೇಷ ದರ್ಶನ ಟಿಕೆಟ್‌ಗಳನ್ನು ಆಗಸ್ಟ್ 24ರಂದು ಅಂದರೆ ಇಂದು ಬಿಡುಗಡೆ ಮಾಡಲಿದೆ. ಬೆಳಿಗ್ಗೆ 10 ಗಂಟೆಗೆ ಟಿಕೆಟ್ ಲಭ್ಯವಿರಲಿದೆ.

ಟಿಕೆಟ್‌ಗೆ ಒಬ್ಬರಿಗೆ 300 ರೂಪಾಯಿ ಇರುತ್ತದೆ. ಇದೇ ದಿನ ಮಧ್ಯಾಹ್ನ 3 ಗಂಟೆಯಿಂದ ತಿರುಪತಿಯಲ್ಲಿ ಉಳಿದುಕೊಳ್ಳಲು ವಸತಿ ಬುಕಿಂಗ್ ಲಭ್ಯವಿರುತ್ತದೆ. ಒಂಬತ್ತು ದಿನಗಳ ಕಾಲ ಶ್ರೀವಾರಿ ಬ್ರಹ್ಮೋತ್ಸವ ಇರುವುದರಿಂದ ಅಕ್ಟೋಬರ್ 4 ರಿಂದ 12ರವರೆಗೆ ಕೆಲವು ಆರ್ಜಿತ ಸೇವೆಗಳು ಮತ್ತು ದರ್ಶನಗಳನ್ನು ಟಿಟಿಡಿ ರದ್ದುಗೊಳಿಸಿದೆ. ಈ ಸಂದರ್ಭದಲ್ಲಿ ಚಿಕ್ಕಮಕ್ಕಳು, ಹಿರಿಯ ಪೋಷಕರ ದರ್ಶನ ಸೇರಿದಂತೆ ಎಲ್ಲಾ ವಿಶೇಷ ದರ್ಶನಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ರದ್ದುಗೊಳಿಸಿದೆ.

Tirumala Tirupati November Darshan Ticket Released

ಒಂಬತ್ತು ದಿನಗಳ ಬ್ರಹ್ಮೋತ್ಸವದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳಿಗೆ ಆರಾಮದಾಯಕ ಮತ್ತು ತೃಪ್ತಿಕರ ದರ್ಶನಗಳಿಗೆ ಅನುಕೂಲವಾಗುವಂತೆ ನಾಗರಿಕರು ಮತ್ತು ದೈಹಿಕವಾಗಿ ಅಶಕ್ತರು ಹಾಗೂ ವಿಐಪಿ ದರ್ಶನಗಳನ್ನು ರದ್ದುಗೊಳಿಸಲಾಗಿದೆ.

ಇದಲ್ಲದೆ ಆನ್‌ಲೈನ್ ದರ್ಶನದ ಬುಕಿಂಗ್‌ಗೆ ಸಂಬಂಧಿಸಿದಂತೆ ಟಿಟಿಡಿ ಭಕ್ತರಿಗೆ ವಿನಂತಿಸಿದೆ. ಬುಕಿಂಗ್ ಪಡೆಯಲು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದಂತೆ ಸಂಸ್ಥೆ ವಿನಂತಿಸಿದೆ. ತಿರುಪತಿಯಲ್ಲಿ ಮದ್ಯವರ್ತಿಗಳಿಂದ ಮೋಸ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

Tirumala Tirupati November Darshan Ticket Released

ಬಹುಬೇಗ ದರ್ಶನ ಕೊಡಿಸುವ ನೆಪದಲ್ಲಿ ಭಕ್ತರಿಂದ ಅಧಿಕ ಹಣವನ್ನು ಪಡೆದು ನಕಲಿ ಟಿಕೆಟ್ ಮಾರಾಟ ಮಾಡುವುದು ಕಂಡು ಬಂದಿದೆ. ಹೀಗಾಗಿ ತಿರುಪತಿ ವಿಜಿಲೆನ್ಸ್‌ ಪೊಲೀಸರು ಅಂಥಹ ಮದ್ಯವರ್ತಿಗಳ ಬಗ್ಗೆ ಎಚ್ಚರದಿಂದ ಇರುವಂತೆ ಭಕ್ತರಿಗೆ ಮನವಿ ಮಾಡಿದ್ದಾರೆ. ಯಾವುದೇ ಅನುಮಾನ ಬಂದಲ್ಲಿ ತಮಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಈ ಸಂಬಂಧ 545 ಬಳಕೆದಾರರಿಂದ ಸುಮಾರು 14,449 ಸಂಶಯಾಸ್ಪದ ವಹಿವಾಟುಗಳು ನಡೆದಿವೆ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಇಂಥಹ ಮದ್ಯವರ್ತಿಗಳ ವಿರುದ್ಧ ನಿಗಾ ಇರಿಸಲಾಗಿದೆ.

ಕೆಲವು ಬಳಕೆದಾರರು ಒಂದೇ ಹೆಸರಿನಲ್ಲಿ ಸುಮಾರು 225 ಶ್ರೀವಾರಿ ದರ್ಶನ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ. ಇದು ಭಕ್ತರಿಗೆ ಪ್ರೀಮಿಯಂ ದರ್ಶನ ಸೇವೆಯಾಗಿದೆ. ಇಂಥಹ ಟಿಕೆಟ್‌ಗಳನ್ನು ಬೇರೆಯವರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂಥವರ ವಿರುದ್ಧ ಪೊಲೀಸರು ನಿಗಾ ಇಟ್ಟಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನಗಳು ನಕಲಿ ಗುರುತಿನ ಚೀಟಿಯೊಂದಿಗೆ ದರ್ಶನಕ್ಕೆ ಬರುವ ಯಾತ್ರಾರ್ಥಿಗಳನ್ನು ಗುರುತಿಸಲು ಸಕ್ರಿಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅನೇಕ ಯಾತ್ರಾರ್ಥಿಗಳು ವಸತಿ ಮತ್ತು ಇತರ ಸೇವೆಗಳನ್ನು ನಕಲಿ ಐಡಿಗಳೊಂದಿಗೆ ಬುಕ್ ಮಾಡುತ್ತಾರೆ ಎಂದು ಸಂಸ್ಥೆ ಉಲ್ಲೇಖಿಸಿದೆ. ಮದ್ಯವರ್ತಿಗಳೇ ಇಂತಹ ಕೆಲಸಗಳನ್ನು ಮಾಡುತ್ತಾರೆ.

ಹೀಗಾಗಿ ಜನರು ತಮ್ಮ ಸೇವೆಗಳನ್ನು ಮದ್ಯವರ್ತಿಗಳ ಮೂಲಕ ಪಡೆಯುವುದನ್ನು ತಪ್ಪಿಸಿ, ಅವರೇ ದರ್ಶನವನ್ನು ಕಾಯ್ದಿರಿಸುವಂತೆ ವಿನಂತಿಸಿದರು. ಇಂತಹ ಅಕ್ರಮ ಎಸಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿರುಮಲ ತಿರುಪತಿ ದೇವಸ್ಥಾನ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+