Tirumala August Darshan Ticket: ತಿರುಪತಿ ಆಗಸ್ಟ್ ದರ್ಶನ ಟಿಕೆಟ್ ಬಿಡುಗಡೆ: ಕೊಠಡಿ ಬುಕ್ಕಿಂಗ್ ಹೀಗೆ ಮಾಡಿ..

ತಿರುಪತಿ ಭಕ್ತರಿಗೆ ಸಿಹಿ ಸುದ್ದಿಯೊಂದನ್ನು ಟಿಟಿಡಿ ನೀಡಿದೆ. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ಅನ್ನು ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ಬಿಡುಗಡೆ ಮಾಡಿದೆ. ಆಗಸ್ಟ್ ತಿಂಗಳಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಭಕ್ತಾದಿಗಳ ಅನುಕೂಲಕ್ಕಾಗಿ ಆಗಸ್ಟ್ ತಿಂಗಳ ದರ್ಶನ, ಆರ್ಜಿತಸೇವಾ ಮತ್ತು ಶ್ರೀವಾರಿ ಸೇವಾ ಕೋಟಾ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವುದಾಗಿ ಟಿಟಿಡಿ ತಿಳಿಸಿದೆ.

Tirumala August Darshan Ticket Release How to do Room Booking

ಮೇ 18 ರಂದು ಬೆಳಿಗ್ಗೆ 10 ಗಂಟೆಗೆ ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಆಗಸ್ಟ್ ಕೋಟಾವನ್ನು ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20 ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್ ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತೊಂದೆಡೆ, ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹೋತ್ಸವ, ಸಹಸ್ರದೀಪಾಲಂಕರ ಸೇವೆ, ವಾರ್ಷಿಕ ಪವಿತ್ರೋತ್ಸವ ಸೇವಾ ಟಿಕೆಟ್‌ಗಳನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15 ರಿಂದ 17 ರವರೆಗೆ ನಡೆಯಲಿದೆ. ಈ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಭಕ್ತರಿಗೆ ಲಭ್ಯವಾಗಲಿದೆ.

Tirumala August Darshan Ticket Release How to do Room Booking

ಮೇ 21 ರಂದು ಶ್ರೀವಾರಿ ವರ್ಚುವಲ್ ಸೇವಾ ಕೋಟಾ ಬಿಡುಗಡೆ

ಅಲ್ಲದೆ, ತಿರುಮಲ ಶ್ರೀವಾರಿ ವರ್ಚುವಲ್ ಸೇವೆಗಳಿಗೆ ಸಂಬಂಧಿಸಿದ ಆಗಸ್ಟ್ ತಿಂಗಳ ಕೋಟಾ ಮತ್ತು ಅವುಗಳ ಸ್ಲಾಟ್‌ಗಳನ್ನು ಮೇ 21 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆಗಸ್ಟ್ ತಿಂಗಳ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಮೇ 23 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ ಮೇ 23ರಂದು ಬೆಳಿಗ್ಗೆ 11 ಗಂಟೆಗೆ ಅಂಗಪ್ರದಕ್ಷಿಣಂ ಟೋಕನ್‌ಗಳ ಆಗಸ್ಟ್ ಆನ್‌ಲೈನ್ ಕೋಟಾವನ್ನು ಬಿಡುಗಡೆ ಮಾಡುತ್ತದೆ.

ಮೇ 24 ರಂದು ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾ ಬಿಡುಗಡೆ

ವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಕಾಯಿಲೆ ಇರುವವರಿಗೆ... ಆಗಸ್ಟ್ ತಿಂಗಳ ಉಚಿತ ವಿಶೇಷ ದರ್ಶನ ಟೋಕನ್‌ಗಳ ಕೋಟಾವನ್ನು ಮೇ 23 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮರುದಿನ ಅಂದರೆ ಮೇ 24 ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ.

ಆಗಸ್ಟ್ ತಿಂಗಳ ರೂಮ್ ಬುಕ್ಕಿಂಗ್

ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ರೂಮ್ ಕೋಟಾವನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ತಿರುಮಲ ತಿರುಪತಿ ಶ್ರೀವಾರಿ ಸೇವಾ ಕೋಟಾ ಟಿಕೆಟ್‌ಗಳನ್ನು ಮೇ 27 ರಂದು ಬೆಳಿಗ್ಗೆ 11 ಗಂಟೆಗೆ, ನವನೀತ ಸೇವಾ ಕೋಟಾ ಟಿಕೆಟ್‌ಗಳನ್ನು ಮಧ್ಯಾಹ್ನ 12 ಗಂಟೆಗೆ ಮತ್ತು ಪರಕಾಮಣಿ ಸೇವೆ ಟಿಕೆಟ್‌ಗಳನ್ನು ಮಧ್ಯಾಹ್ನ 1 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಟಿಕೆಟ್‌ಗಳನ್ನು https://ttdevasthanams.ap.gov.in ವೆಬ್‌ಸೈಟ್ ಮೂಲಕ ಬುಕ್ ಮಾಡಲು ಟಿಟಿಡಿ ಪ್ರಕಟಣೆಯಲ್ಲಿ ವಿನಂತಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+