Tirumala TTD: ಬಾಲಾಜಿ ಭಕ್ತರಿಗೆ 'ಲಾಡು' ವಿತರಣೆಗೆ ಹೊಸ ನಿಯಮ, ಆಧಾರ್ ಕಡ್ಡಾಯ
ತಿರುಮಲ, ಆಗಸ್ಟ್ 30: ಆಂಧ್ರಪ್ರದೇಶದ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದವರಿಲ್ಲ. ವರ್ಷದಿಂದ ವರ್ಷಕ್ಕೆ ತಿರುಮಲಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುತ್ತಾರೆ. ಬರುವ ಭಕ್ತರಿಗೆಲ್ಲ ವಿತರಣೆಗಾಗಿ ಲಡ್ಡು ತಯಾರಿಸುವ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನಂ) ಇದೀಗ 'ಲಡ್ಡು' ಪಡೆಯಲು ಹೊಸ ನೀತಿಯೊಂದನ್ನು ಜಾರಿಗೆ ತಂದಿದೆ.
ತಿರುಮಲ ವೆಂಕಟೇಶ್ವರನನ್ನು ಕಲಿಯುಗದ ವೈಕುಂಠ ಎಂದು ಭಕ್ತಗಣ ಭಾವಿಸೆ. ತಿರುಮಲದ ಬೆಟ್ಟದಲ್ಲಿ ನೆಲೆಸಿರುವ ಗೋವಿಂದನ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ನಿತ್ಯ ವಿಶೇಷ ಪೂಜೆ, ಸ್ಮರಣೆ, ಸಡಗರ ಕಂಡು ಬರುತ್ತದೆ. ಹರಕೆ ತೀರಿಸಿ ದರ್ಶನ ಪಡೆದು ಪುನೀತರಾಗುತ್ತಾರೆ. ಭಕ್ತರ ಸಂಖ್ಯೆಗೆ ಅನುಗುಣವಾಗಿ ಹಾಗೂ ಕಾಲ ಕಾಲಕ್ಕೆ ತಕ್ಕಂತೆ ಒಂದಷ್ಟು ಕ್ರಮಗಳು ಜಾರಿಯಾಗುತ್ತವೆ. ಇದೀಗ ಲಡ್ಡು ವಿತರಣೆಗೆ ಹೊಸ ವಿಧಾನ ಜಾರಿಗೆ ತರುವ ಮೂಲಕ ಟಿಟಿಡಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮುಂದಾಗಿದೆ. ಅಲ್ಲದೇ ನಿಗದಿತ ಭಕ್ತರಿಗೆ ಇಂತಿಷ್ಟು 'ಲಡ್ಡು' ಮಾತ್ರವೇ ಎಂದು ನಿಯಮ ಮಾಡಿಕೊಂಡಿದೆ.

ಬಾಲಾಜಿಯ ದರ್ಶನಕ್ಕೆ ಬರುವವರಿಗೆ 'ಲಡ್ಡು' ಪ್ರಸಾದವಾಗಿ ನೀಡಲಾಗುತ್ತದೆ. ಸ್ವಾದಿಷ್ಠಕರವಾದ ಈ ಪ್ರಸಾದ ಭಕ್ತರಿಗೆ ಅಚ್ಚುಮೆಚ್ಚು ಹೀಗಾಗಿ ಒಬ್ಬೋಬ್ಬರೇ ಸಾಕಷ್ಟು ಲಡ್ಡುಗಳನ್ನು ತೆಗೆದುಕೊಂಡು ಹೋಗಲು ಈ ಮೊದಲು ಅವಕಾಶ ಇತ್ತು. ಆದರೆ ಟಿಟಿಡಿ ಈ ಅವಕಾಶಕ್ಕೆ ಬ್ರೇಕ್ ಹಾಕಿ ಹೊಸ ನಿಯಮ ಜಾರಿಗೆ ತಲು ಸಜ್ಜಾಗಿದೆ. ಲಡ್ಡು ವಿತರಣೆಯಲ್ಲಿ ದೇವಸ್ಥಾನ ಮುಖ್ಯಸ್ಥರು ಮಹತ್ವದ ಬದಲಾವಣೆ ಮಾಡಿದ್ದಾರೆ.
ನಿತ್ಯ ತಯಾರಾಗುವ ಲಡ್ಡುಗಳು ಎಷ್ಟು?
ತಿರುಮಲಕ್ಕೆ ಬರುವ ಪ್ರತಿ ಭಕ್ತರ ಗುಂಪು ಸಾಮಾನ್ಯವಾಗಿ 10 ರಿಂದ 20 ಲಡ್ಡು ಒಯ್ಯುತ್ತಾರೆ. ಇದರ ಆಧಾರದಲ್ಲಿ ಪ್ರತಿ ವರ್ಷ ಲಡ್ಡು ತಯಾರಿಕೆ ಮಟ್ಟ ಹೆಚ್ಚಿಸಲಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ನಿತ್ಯ ಟಿಟಿಡಿಯು 3.20 ಲಕ್ಷಕ್ಕೂ ಹೆಚ್ಚು ಲಡ್ಡು ಉತ್ಪಾದಿಸುತ್ತದೆ. ದೇಗುಲದ ಹಿಂಭಾಗ ವಿತರಣೆ ಮಾಡಲಾಗುತ್ತದೆ.
ದೇವಸ್ಥಾನದ ಕೌಂಟರ್‌ನಲ್ಲಿ ವರ್ಷಗಳ ಹಿಂದೆ 10 ರೂಪಾಯಿಗೆ ಒಂದು ಲಡ್ಡು ನೀಡಲಾಗುತ್ತಿತ್ತು. ಅದು ನಂತರ ಬೆಲೆ 25, ಇದೀಗ 50 ರೂಪಾಯಿ ಏರಿಕೆ ಆಗಿದೆ. ಕೆಲವು ವರ್ಷಗಳ ಕಾಲ ವಿವಿಧ ದರ್ಶನಗಳಲ್ಲಿ ನೀಡಲಾಗುತ್ತಿದ್ದ ಲಡ್ಡುವನ್ನು ಸಹ ಟಿಟಿಡಿ ರದ್ದುಗೊಳಿಸಿ ಒಂದೇ ಕಡೆ ನೀಡುವಂತೆ ಕ್ರಮ ಕೈಗೊಂಡಿತ್ತು. ತಿಮ್ಮಪ್ಪನ ಸನ್ನಿಧಾನಕ್ಕೆ ಬರುವವರಿಗೆ ಉಚಿತವಾಗಿ ಲಡ್ಡು ನೀಡಲಾಗುತ್ತದೆ.

ದರ್ಶನಕ್ಕೆ ಬಂದವರಿಗೆ ಮಾತ್ರ 4 ಲಡ್ಡು
ಆದರೆ ಭಕ್ತರನ್ನು ಹೊರತುಪಡಿಸಿ ಮಧ್ಯವರ್ತಿಗಳು ಅಧಿಕ ಲಡ್ಡು ಖರೀದಿಸಿ ಹೆಚ್ಚಿನ ಬೆಲೆಗೆ ಹೊರಗಡೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ದರ್ಶನಕ್ಕೆ ಬಾರದಿರುವವರಿಗೆ ಆಧಾರ್ ಕಾರ್ಡ್ ತೋರಿಸಿದರೆ ಎರಡು ಲಡ್ಡುಗಳ ಮಾತ್ರ ನೀಡಲಾಗುತ್ತದೆ. ಅದೇ ದೇವರ ಸನ್ನಿದಾನಕ್ಕೆ ಬಂದು ದರ್ಶನ ಪಡೆದು ತೆರಳುವ ಪ್ರತಿ ಭಕ್ತರಿಗೆ ಹೆಚ್ಚುವರಿಯಾಗಿ 4 ಲಡ್ಡೂ ನೀಡಲು ಟಿಟಿಡಿ ಕ್ರಮ ಕೈಗೊಂಡಿದೆ. ಈ ಮೂಲಕ ದಲ್ಲಾಳಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಟಿಡಿ ತಿಳಿಸಿದೆ.












Click it and Unblock the Notifications