Get Updates
Get notified of breaking news, exclusive insights, and must-see stories!

Tirumala Laddu: ತಿರುಮಲದಲ್ಲಿ ಲಡ್ಡು ಪ್ರಸಾದಕ್ಕೆ ಹೆಚ್ಚಿದ ಬೇಡಿಕೆ.. ವಾರದಲ್ಲಿ ಎಷ್ಟು ಲಡ್ಡು ಮಾರಾಟವಾಗಿದೆ ಗೊತ್ತಾ!

ತಿರುಪತಿಯಲ್ಲಿ ತುಪ್ಪದ ವಿವಾದ ಆರಂಭವಾದಾಗಿನಿಂದಲೂ ತಿರುಮಲಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಆದರೆ ಪ್ರಸಿದ್ಧ ಲಡ್ಡು ಪ್ರಸಾದದ ಖರೀದಿಯಲ್ಲಿ ಮಾತ್ರ ಕೊಂಚವೂ ಇಳಿಕೆಯಾಗಿಲ್ಲ. ನಿಮಗಿದು ಕೇಳಿದರೆ ಆಶ್ಚರ್ಯ ಎನಿಸಬಹುದು ಆದರೂ ಇದು ನಿಜವೇ.

ತಿರುಮಲ ಶ್ರೀವಾರಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪದ ವಿವಾದ ರಾಜಕೀಯ ವಲಯದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ತುಪ್ಪದ ಪ್ರಕರಣದ ತನಿಖೆಯನ್ನು ಆಂಧ್ರಪ್ರದೇಶ ಸರ್ಕಾರ ಎಸ್‌ಐಟಿಗೆ ನೀಡಿದೆ. ಮುಖ್ಯವಾಗಿ ತಿರುಪತಿ ಲಡ್ಡು ತಯಾರಿಕೆ ತುಪ್ಪದಲ್ಲಿ ಪ್ರಾಣಿಕೊಬ್ಬು ಬಳಕೆ ಮಾಡಲಾಗಿತ್ತು ಎನ್ನುವ ವಿಚಾರ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ.

Tirumala Laddu increased demand for laddu in tirumala how many laddus are sold in a week

ಈ ವಿವಾದದ ಹೊತ್ತಿನಲ್ಲಿ ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ಮಾರಾಟ ಹೇಗಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಲಡ್ಡು ಪ್ರಸಾದ ವಿವಾದದ ನಡುವೆಯೂ ಪ್ರಸಾದ ಮಾರಾಟ ಕೊಂಚವೂ ಕಡಿಮೆಯಾಗಿಲ್ಲ. ಕಳೆದೊಂದು ವಾರದಿಂದ ಭಕ್ತರಿಂದ ಲಡ್ಡುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೌದು... ಕಳೆದ ವಾರದಲ್ಲಿ ತಿರುಮಲ ಲಡ್ಡು ಪ್ರಸಾದಗಳು 23 ಲಕ್ಷಕ್ಕೂ ಹೆಚ್ಚು ಮಾರಾಟವಾಗಿವೆ.

ಕಳೆದ ವಾರದಲ್ಲಿ ಎಷ್ಟು ಲಡ್ಡು ಮಾರಾಟ?

ಸೆಪ್ಟೆಂಬರ್‌ 19 ರಂದು 3,59,660 ಲಡ್ಡೂಗಳು..

ಸೆಪ್ಟೆಂಬರ್‌ 20 ರಂದು 3,17,954..

ಸೆಪ್ಟೆಂಬರ್‌ 21 ರಂದು 3,67,607..

ಸೆಪ್ಟೆಂಬರ್‌ 22 ರಂದು 3,46,640..

ಸೆಪ್ಟೆಂಬರ್‌ 23 ರಂದು 3,08,744..

ಸೆಪ್ಟೆಂಬರ್‌ 24 ರಂದು 3,02,174

ಸೆಪ್ಟೆಂಬರ್‌ 25ರಂದು 3,02,174 ಲಡ್ಡುಗಳು ಮಾರಾಟವಾಗಿವೆ.

ಅಂದರೆ ಸರಾಸರಿ ತೆಗೆದುಕೊಂಡರೆ ದಿನಕ್ಕೆ ಕನಿಷ್ಠ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳು ಮಾರಾಟವಾಗಿವೆ. ವಾಸ್ತವವಾಗಿ ತಿರುಮಲ ಲಡ್ಡು ವಿವಾದದಿಂದ ಮಾರಾಟ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ.

Tirumala Laddu increased demand for laddu in tirumala how many laddus are sold in a week

ತಿರುಮಲ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಕಲಬೆರಕೆ ಇರುವುದನ್ನು ಟಿಟಿಡಿ ಪತ್ತೆ ಮಾಡಿದೆ. ಎಆರ್ ಡೈರಿ ಕಳುಹಿಸಿದ್ದ ತುಪ್ಪದಲ್ಲಿ ಕಲಬೆರಕೆ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ವರದಿ ಬಂದ ಕೂಡಲೇ ತುಪ್ಪದ ಲಾರಿಗಳನ್ನು ವಾಪಸ್ ಕಳುಹಿಸಲಾಗಿತ್ತು. ತುಪ್ಪವನ್ನು ವಾಪಾಸ್‌ ಕಳುಹಿಸಿ ತಕ್ಷಣ ಕ್ರಮ ಕೈಗೊಂಡ ಟಿಟಿಡಿ.. ಮತ್ತೆ ಕರ್ನಾಟಕ ನಂದಿನಿ ಡೈರಿಯಿಂದ ತುಪ್ಪ ತರಿಸಲಾರಂಭಿಸಿದೆ.

ಅಂದಿನಿಂದ ತಿರುಮಲ ಲಡ್ಡು ಪ್ರಸಾದದ ಗುಣಮಟ್ಟ ಹೆಚ್ಚಾಗಿದೆ ಎನ್ನುತ್ತಾರೆ ಟಿಟಿಡಿ ಇಒ ಜಯ್ ಶ್ಯಾಮಲಾ ರಾವ್. ಅಲ್ಲದೇ ಪ್ರಸಾದಕ್ಕೆ ಬಳಸುವ ಪದಾರ್ಥಗಳ ವಿಚಾರದಲ್ಲೂ ಎಚ್ಚರಿಕೆ ವಹಿಸಲಾಗುತ್ತಿದೆ. ಕಳಪೆ ಗುಣಮಟ್ಟದ ಪದಾರ್ಥಗಳನ್ನು ವಾಪಸ್ ಕಳುಹಿಸಲಾಗಿದೆ. ಜೊತೆಗೆ ಈ ಘಟನೆ ಬಳಿಕ ತಿರುಮಲದಲ್ಲಿ ಟಿಟಿಡಿ ಕಾಳಜಿ ವಹಿಸಿ ಅನ್ನಪ್ರಸಾದದ ಗುಣಮಟ್ಟವನ್ನೂ ಹೆಚ್ಚಿಸಿದೆ.

ಮತ್ತೊಂದೆಡೆ ಟಿಟಿಡಿ ತಿರುಮಲದಲ್ಲಿ ಮಹಾಶಾಂತಿ ಹೋಮವನ್ನು ಸಹ ಮಾಡಿಸಿದೆ. ಲಡ್ಡು ಪ್ರಸಾದ ಹಾಗೂ ಇತರೆ ನೈವೇದ್ಯಗಳ ಪಾವಿತ್ರ್ಯತೆ ಮತ್ತು ದೈವತ್ವವನ್ನು ಮರುಸ್ಥಾಪಿಸಲು ಇದೇ ಸೆಪ್ಟೆಂಬರ್ 23ರಂದು ತಿರುಮಲ ಶ್ರೀವಾರಿ ದೇವಸ್ಥಾನದ ಬಳಿಯ ಯಾಗಶಾಲೆಯಲ್ಲಿ ಶುದ್ಧಿ ಹಾಗೂ ಶಾಂತಿ ಹೋಮ ನಡೆಸಲಾಯಿತು.

ಹೋಮದ ನಂತರ ಟಿಟಿಡಿ ಸಂಪ್ರೋಕ್ಷಣೆಯನ್ನೂ ಆಯೋಜಿಸಿತ್ತು. ಮುಖ್ಯವಾಗಿ ಋತ್ವಿಕರು ವಾಸ್ತು ಶುದ್ಧಿ ಮತ್ತು ಕುಂಭಜ ಸಂಪ್ರೋಹಣ ಮಾಡಿದರು. ಈ ಹೋಮ ಮತ್ತು ಸಂಪ್ರೋಕ್ಷಣೆಯ ನಂತರ ಭಕ್ತರು ಲಡ್ಡು ಪ್ರಸಾದ ಮತ್ತು ನೈವೇದ್ಯದ ಗುಣಮಟ್ಟದ ಬಗ್ಗೆ ತಮಗಿದ್ದ ಆತಂಕ, ಭಯ, ತಪ್ಪು ಕಲ್ಪನೆಗಳು ದೂರವಾಗಿವೆ ಎನ್ನುತ್ತಾರೆ.

ಯಾಗಶಾಲೆಯಲ್ಲಿ ಸಂಕಲ್ಪ, ಪುಣ್ಯಾವಚನ, ವಾಸ್ತು ಹೋಮ, ಪಂಚಗವ್ಯ ಪೂಜೆ ಮುಂತಾದ ವೈದಿಕ ಕಾರ್ಯಕ್ರಮಗಳು ಜರುಗಿದವು. ತಿರುಮಲದಲ್ಲಿ ಪೂರ್ಣಾಹುತಿ ನಂತರ ಕುಂಭ ಪ್ರೋಕ್ಷಣೆ ನಡೆಸಿ ವಿಶೇಷ ನೈವೇದ್ಯ ಅರ್ಪಿಸಲಾಯಿತು. ಇನ್ನು ಮುಂದೆ ಲಡ್ಡು ಪ್ರಸಾದ ಹಾಗೂ ನೈವೇದ್ಯದಲ್ಲಿ ಯಾವುದೇ ಕಲಬೆರೆಕೆ ಇರುವುದಿಲ್ಲ, ಭಕ್ತರು ಸಂತೋಷದಿಂದ ಪ್ರಸಾದವನ್ನು ಸ್ವೀಕರಿಸಬಹುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+