ಟೈಮ್ಸ್ ನೌ- ವಿಎಂಆರ್ ಸಮೀಕ್ಷೆಯಲ್ಲೂ ಗುಜರಾತ್ ನಲ್ಲಿ ಬಿಜೆಪಿಗೆ ಬಹುಮತ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 25: ಅಂತೂ ಬುಧವಾರ ಚುನಾವಣೆ ಆಯೋಗವು ಗುಜರಾತ್ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಘೋಷಣೆ ಮಾಡಿದೆ. ಟೈಮ್ಸ್ ನೌ ಹಾಗೂ ವಿಎಂಆರ್ ಸೇರಿ ಗುಜರಾತ್ ಚುನಾವಣೆಯ ಪೂರ್ವಭಾವಿ ಸಮೀಕ್ಷೆ ನಡೆಸಿವೆ. ರಾಜ್ಯದ ಎಲ್ಲ ಭಾಗಗಳ ಆರು ಸಾವಿರ ಮಂದಿಯ ಅಭಿಪ್ರಾಯ ಸಂಗ್ರಹಿಸಿದ್ದು, ಶೇ ಮೂರರಷ್ಟು ವ್ಯತ್ಯಾಸ ಆಗಬಹುದಾದರೂ ಬಹುತೇಕ ಫಲಿತಾಂಶಕ್ಕೆ ಹತ್ತಿರ ಬರಲಿದೆ ಎಂಬ ನಿರೀಕ್ಷೆ ಇದೆ.

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಗುಜರಾತ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರನ್ನು ಪ್ರಮುಖವಾಗಿ ಐದು ಪ್ರಶ್ನೆಗಳನ್ನು ಕೇಳಲಾಗಿದೆ.
* ಬಿಜೆಪಿಯ ಗುಜರಾತ್ 'ಗೌರವ್' ಎಂಬುದು ಗೆಲುವು ತಂದುಕೊಡುವ ಘೋಷಣೆಯೆ?

* ಪ್ರಧಾನಿಯಾಗಿ ನರೇಂದ್ರ ಮೋದಿಯವರ ಸಾಧನೆ ಗೆಲುವು ತಂದುಕೊಡುವ ಅಂಶವಾಗುವುದೇ?

* ರಾಹುಲ್ ಗಾಂಧಿ ಸದ್ಯದ ಸನ್ನಿವೇಶ ಹಾಗೂ ಸ್ಥಿತಿಯನ್ನು ಸರಿಯಾಗಿ ಅರ್ಥೈಸಿಕೊಂಡಿದ್ದಾರೆಯೆ?

* ಬಿಜೆಪಿಯ ನೂರೈವತ್ತು ಸ್ಥಾನಗಳನ್ನು ಗೆಲ್ಲುವ ಗುರಿ ಈಡೇರುವುದೆ?

* ಗುಜರಾತ್ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ?

ಗುಜರಾತ್ ಚುನಾವಣೆ : ಸಮೀಕ್ಷೆಯಲ್ಲಿ ಜನರು ಹೇಳಿದ್ದೇನು?

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ 46ರಷ್ಟು ಮಂದಿ ಪ್ರಸ್ತಾವಿತ ಸರ್ದಾರ್ ವಲ್ಲಭ ಭಾಯ್ ಪಟೇಲ್ ಪುತ್ಥಳಿ ಸ್ಥಾಪನೆಯಿಂದ ಗುಜರಾತ್ ನ 'ಅಸ್ಮಿತೆ' ವಿಸ್ತರಣೆ ಆಗುತ್ತದೆ ಎಂದು ಉತ್ತರಿಸಿದ್ದರೆ, ಶೇ 21ರಷ್ಟು ಮಂದಿ ಇದೊಂದು ರಾಜಕೀಯ ಹುನ್ನಾರ ಎಂದು ಉತ್ತರಿಸಿದ್ದಾರೆ.

ಪ್ರಧಾನಿ ಮೋದಿ ಮತ ಸೆಳೆಯುವ ಶಕ್ತಿ

ಪ್ರಧಾನಿ ಮೋದಿ ಮತ ಸೆಳೆಯುವ ಶಕ್ತಿ

ಶೇ 81ರಷ್ಟು ಮಂದಿ ಗುಜರಾತ್ ನಲ್ಲಿ ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದಾರೆ. ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ಅವರು ಮಣ್ಣಿನ ಮಗ ಎಂದುತ್ತರಿಸಿದ್ದಾರೆ. 2012ರಲ್ಲಿ ಈ ಪ್ರಮಾಣ ಶೇ 60ರಷ್ಟಿತ್ತು. ಪ್ರಧಾನಿಯಾದ ನಂತರ ಬಿಜೆಪಿಗೆ ಶೇಕಡಾ 20ರಷ್ಟು ಹೆಚ್ಚು ಪರಿಣಾಮಕಾರಿಯಾಗಿ ಮತವನ್ನು ಸೆಳೆಯುತ್ತಿದ್ದಾರೆ. ಇದರಿಂದ ಮತ್ತೊಂದು ಅಂಶ ಗೊತ್ತಾಗುವುದೇನೆಂದರೆ, ಕೇಂದ್ರದಲ್ಲಿ ಪ್ರಬಲವಾಗಿರುವ ಮೋದಿಯಿಂದಾಗಿ ಸ್ಥಳೀಯವಾಗಿ ಬಿಜೆಪಿ ದುರ್ಬಲವಾಗಿದೆ.

ಟೈಮ್ಸ್ ನೌ ಹಾಗೂ ವಿಎಂಆರ್ ಸಮೀಕ್ಷೆಯ ಪ್ರಕಾರ ಸೀಟು ಹಂಚಿಕೆ ಹೀಗಾಗಬಹುದು

ಟೈಮ್ಸ್ ನೌ ಹಾಗೂ ವಿಎಂಆರ್ ಸಮೀಕ್ಷೆಯ ಪ್ರಕಾರ ಸೀಟು ಹಂಚಿಕೆ ಹೀಗಾಗಬಹುದು

ಗುಜರಾತ್ ನಲ್ಲಿ ಒಟ್ಟು ವಿಧಾನ ಸಭಾ ಕ್ಷೇತ್ರಗಳು 182
ಬಿಜೆಪಿ ಗಳಿಸಬಹುದಾದ ಸ್ಥಾನಗಳು 118-134
ಕಾಂಗ್ರೆಸ್ ಪಡೆಯಬಹುದಾದ ಸ್ಥಾನ 49-61
ಅಲ್ಲಿಗೆ ಒಂದು ಅಂಶ ಖಚಿತವಾಗುತ್ತದೆ. ಬಿಜೆಪಿಯು ಗುಜರಾತ್ ನಲ್ಲಿ ಗೆಲ್ಲಬೇಕು ಅಂದುಕೊಂಡಿರುವ 150 ಸ್ಥಾನಗಳಲ್ಲಿ ಜಯ ಸಾಧಿಸುವುದು ಸಾಧ್ಯವಿಲ್ಲ.

ಮೋದಿ ಕೇಂದ್ರದಲ್ಲಿದ್ದರೂ ಬಿಜೆಪಿ ಗಟ್ಟಿಯಾಗೇ ಇದೆ

ಮೋದಿ ಕೇಂದ್ರದಲ್ಲಿದ್ದರೂ ಬಿಜೆಪಿ ಗಟ್ಟಿಯಾಗೇ ಇದೆ

ಇದರರ್ಥವನ್ನು ಹೀಗೂ ಮಾಡಿಕೊಳ್ಳಬಹುದು. ಕಳೆದ ಬಾರಿಯ ವಿಧಾನಸಭಾ ಸ್ಥಾನಗಳಿಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಲಾಭವೇನೂ ಕಾಣುತ್ತಿಲ್ಲ. ಆದರೆ ಬಿಜೆಪಿಯ ಸ್ಥಾನ ಗಳಿಕೆಯಲ್ಲಿ ಹೆಚ್ಚಾಗಲಿದೆ. ಇನ್ನು ಮತ ಗಳಿಕೆ ಪ್ರಮಾಣದಲ್ಲಿ ಮಹತ್ವದ ಶೇಕಡಾ ನಾಲ್ಕರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅದೂ ರಾಜ್ಯ ರಾಜಕಾರಣದಿಂದ ನರೇಂದ್ರ ಮೋದಿ ದೂರವಾಗಿ ಮೂರು ವರ್ಷವೇ ಕಳೆದರೂ, ಕೇಂದ್ರದಲ್ಲಿ ಕೇಸರಿ ಪಕ್ಷ ಸ್ವಲ್ಪ ಕಳೆಗುಂದಿದಂತೆ ಕಂಡರೂ ಗುಜರಾತ್ ನಲ್ಲಿ ಬಿಜೆಪಿ ಶಕ್ತಿ ಕುಂದಿಲ್ಲ.

 ಮೈತ್ರಿಯಿಂದ ಲಾಭ ಕಾಣುತ್ತಿಲ್ಲ

ಮೈತ್ರಿಯಿಂದ ಲಾಭ ಕಾಣುತ್ತಿಲ್ಲ

ದಲಿತ, ಪಾಟೀದಾರ್ ನಾಯಕರನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನ ಮಾಡಿದ್ದರೂ ಚುನಾವಣೆಯಲ್ಲಿ ಅಂಥ ಪ್ರಭಾವ ಬೀರುವಂತೆ ಕಾಣಿಸುತ್ತಿಲ್ಲ. ಈ ಸ್ಪರ್ಧೆಯಲ್ಲಿ ಕಾಂಗ್ರೆಸ್ ನ ತಂತ್ರಗಾರಿಕೆಯ ಮೈತ್ರಿಗಿಂತ ಬಿಜೆಪಿಯ ಚುನಾವಣೆ ಲೆಕ್ಕಾಚಾರವೇ ಹೆಚ್ಚು ಅನುಕೂಲ ಮಾಡಿಕೊಡುವಂತಿದೆ.

ಕಾಂಗ್ರೆಸ್ ಗೆ ಪ್ಲಸ್ಸು, ಬಿಜೆಪಿಗೆ ಮೈನಸ್

ಕಾಂಗ್ರೆಸ್ ಗೆ ಪ್ಲಸ್ಸು, ಬಿಜೆಪಿಗೆ ಮೈನಸ್

ಆದರೆ, ಒಟ್ಟಾರೆಯಾಗಿ ಬಿಜೆಪಿಯ ಈ ಬಾರಿ ಸಾಧನೆ ಸಮೀಕ್ಷೆ ಮಾಡಿದರೆ ಕಳೆದ ಲೋಕಸಭೆ ಚುನಾವಣೆ ವೇಳೆ ಪಡೆದ ಮತ ಪ್ರಮಾಣಕ್ಕಿಂತ ಕಡಿಮೆ ಆಗಲಿದೆ. 2014ರ ಲೋಕಸಭೆ ಚುನಾವಣೆ ವೇಳೆ ಶೇ 60ರಷ್ಟು ಮತ ಪಡೆದಿದ್ದ ಬಿಜೆಪಿ, 2017ರಲ್ಲಿ ಶೇ 52ರಷ್ಟು ಮತ ಪಡೆಯಬಹುದು ಎಂಬ ಅಂದಾಜಿದೆ.

2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಪಡೆಯಬಹುದಾದ ಸ್ಥಾನಗಳ ಪ್ರಮಾಣ ಹಾಗೂ ಮತ ಗಳಿಕೆಯ ಪ್ರಮಾಣ ಉತ್ತಮಗೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Times Now-VMR opinion survey projects that the BJP could secure around 118-134 seats in the Gujarat assembly elections. The Congress could secure around 49-61 seats. While this means that the BJP does have enough numbers, it might not reach the desired number of 150.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ