ರಾಮ ಮಂದಿರ ನಿರ್ಮಾಣಕ್ಕೆ ಸಮಯ ಪ್ರಶಸ್ತ : ಶ್ರೀಶ್ರೀ

ಬೆಂಗಳೂರು, ಅಕ್ಟೋಬರ್ 28 : ವಿವಾದಗ್ರಸ್ತ ರಾಮಜನ್ಮ ಭೂಮಿ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಿಂದೆಂದಿಗಿಂತಲೂ ಸಮಯ ಪ್ರಶಸ್ತವಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಹೇಳಿದ್ದು, ಬೂದಿ ಮುಚ್ಚಿದಂತಿದ್ದ ವಿವಾದವನ್ನು ಮತ್ತೆ ಕೆದಕಿದಂತಾಗಿದೆ.

ನಾನು ಇದಕ್ಕೆ ಸಂಬಂಧಿಸಿದಂತೆ ಹಲವಾರು ಇಮಾಮ್ ಗಳು, ಸ್ವಾಮೀಜಿಗಳನ್ನು ಭೇಟಿ ಮಾಡಿದ್ದು, ಎಲ್ಲರಿಗೂ ಶಾಂತಿ ಬೇಕಾಗಿದೆ. ನಾನು ನಿರ್ಮೋಹಿ ಅಖಾರದ ಆಚಾರ್ಯ ರಾಮ್ ದಾಸ್ ಅವರನ್ನೂ ಭೇಟಿಯಾಗಿದ್ದು, ನ್ಯಾಯಾಲಯದ ಹೊರಗಡೆ ಪ್ರಕರಣ ಇತ್ಯರ್ಥಪಡಿಸಲು ವೈಯಕ್ತಿಕವಾಗಿ ಎಲ್ಲ ಪ್ರಯತ್ನ ನಡೆಸಿದ್ದೇನೆ ಎಂದಿದ್ದಾರೆ.

Time is rife for construction of Ram Mandir

ಎಲ್ಲ ಪಂಗಡದವರನ್ನು ಒಲಿಸುವ ಪ್ರಯತ್ನ ಕೇಂದ್ರ ಸರಕಾರ ಅಥವಾ ಯಾವುದೇ ಸಂಸ್ಥೆಯ ಅಣತಿಯಂತೆ ಮಾಡುತ್ತಿಲ್ಲ. ಎರಡೂ ಪಂಗಡಗಳ ನಾಯಕರುಗಳನ್ನು ಒಟ್ಟಿಗೆ ಕರೆತಂದು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವುದೊಂದೇ ಮನವೊಲಿಕೆಯ ಮೂಲ ಉದ್ದೇಶವಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಪ್ರಕಟಣೆ ತಿಳಿಸಿದೆ.

ಆದರೆ, ತಾವು ರವಿಶಂಕರ್ ಗುರೂಜಿ ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿ, ನಡೆಯುತ್ತಿದೆ ಎನ್ನಲಾದ ಮಾತುಕತೆಯನ್ನು ತಳ್ಳಿಹಾಕಿದೆ.

ವಿವಾದಿತ 2.77 ಎಕರೆ ಜಮೀನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಮತ್ತು ರಾಮ್ ಲಲ್ಲಾ ಪರವಾಗಿ ಮೂರು ಭಾಗಗಗಳನ್ನಾಗಿ ಮಾಡಿ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ಈ ತೀರ್ಪಿನ ವಿರುದ್ಧ ಹೂಡಲಾಗಿರುವ 13 ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದ್ದು, ಡಿಸೆಂಬರ್ 5ರಿಂದ ವಿಚಾರಣೆ ನಡೆಸಲಿದೆ.

ಏನೇ ಆಗಲಿ, 2018ರ ಡಿಸೆಂಬರ್ 6ರೊಳಗೆ, ಧ್ವಂಸ ಮಾಡಲಾಗಿರುವ ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಿಯೇ ತೀರುತ್ತೇವೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ವಿರೋಧಿಗಳಿಗೆ ಸವಾಲು ಎಸೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+