ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ: ಮೂರು ವಿದ್ಯಾರ್ಥಿಗಳು ಸೇರಿ ನಾಲ್ವರು ನೀರು ಪಾಲು

ದೆಹಲಿಯಿಂದ ಪ್ರವಾಸಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ನೀರು ಪಾಲಾಗಿರುವ ಘಟನೆ ಶನಿವಾರದಂದು ಎರ್ನಾಕುಲಂಜಿಲ್ಲೆಯಲ್ಲಿ ಸಂಭವಿಸಿದೆ.

By Mahesh
|
Google Oneindia Kannada News

ಕೊಚ್ಚಿ, ಡಿಸೆಂಬರ್ 17: ದೆಹಲಿಯಿಂದ ಪ್ರವಾಸಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ನೀರು ಪಾಲಾಗಿರುವ ಘಟನೆ ಶನಿವಾರದಂದು ಎರ್ನಾಕುಲಂಜಿಲ್ಲೆಯಲ್ಲಿ ಸಂಭವಿಸಿದೆ.

ಪೆರಿಯಾರ್ ನದಿ ದಡದಲ್ಲಿರುವ ಪೆರಂವವೂರ್ ನ ಪನಿಯೆಲ್ಲಿ ಪೊರು ಎಂಬಲ್ಲಿರುವ ಐಷಾರಾಮಿ ರೆಸಾರ್ಟ್ ಮಾಲೀಕ ಬೆನ್ನಿ ಅಬ್ರಹಾಂ, ದೆಹಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಕೇರಳದ ಕೆನತ್ ಜೋಸ್(20), ಬಿಹಾರ ಮೂಲದ ಅನುಭವ್ ಚಂದ್ರ(20) ಹಾಗೂ ಉತ್ತರಪ್ರದೇಶ ಮೂಲದ ಆದಿತ್ಯ ಪಟೇಲ್(20) ಎಂದು ಗುರುತಿಸಲಾಗಿದೆ.

Three St Stephen's students, resort owner drown in Periyar river

ನೀರು ಪಾಲಾಗುತ್ತಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲು ಯತ್ನಿಸಿದ ರೆಸಾರ್ಟ್ ಮಾಲೀಕ 45 ವರ್ಷ ವಯಸ್ಸಿನ ಅಲಿಯಾತ್ತುಕುಡಿ ಬೆನ್ನಿ ಕೂಡಾ ಪೆರಿಯಾರ್ ನದಿ ನೀರು ಪಾಲಾಗಿದ್ದಾರೆ.

ದೆಹಲಿಯಿಂದ 13 ಜನರ ವಿದ್ಯಾರ್ಥಿಗಳ ತಂಡದೊಂದಿಗೆ ಈ ಮೂವರು ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬಂದಿದ್ದರು. ಅನುಭವ್ ಹಾಗೂ ಆದಿತ್ಯ ಅವರು ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸುಳಿಯಲ್ಲಿ ಸಿಲುಕಿ ಕೊಂಡರು ಅವರನ್ನು ರಕ್ಷಿಸಲು ಹೋದ ರೆಸಾರ್ಟ್ ಮಾಲೀಕ ಬೆನ್ನಿ ಅಬ್ರಹಾಂ ಸೇರಿದಂತೆ ಎಲ್ಲರೂ ನೀರು ಪಾಲಾಗಿದ್ದಾರೆ. ಮೃತರ ಶವಗಳನ್ನು ಪೆರಂಬವೂರ್ ನ ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದೆ.

English summary
In a tragic incident, four people including three students of St Stephen's College of Delhi drowned in the Periyar river at Paniyeli Poru near Perumbavoor here on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X