ಅತ್ಯಾಚಾರ ಆರೋಪ: ಕಳಂಕಿತ ಸಚಿವ ಪ್ರಜಾಪತಿಯ ಸಹಚರರ ಸೆರೆ

Posted By:
Subscribe to Oneindia Kannada

ಲಖನೌ, ಮಾರ್ಚ್ 14: ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿರುವ ಸಮಾಜವಾದಿ ಪಕ್ಷದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿಯ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರ ಬಂಧನದಿಂದ, ಈವರೆಗೆ ಸೆರೆ ಸಿಕ್ಕಿರುವ ಮಾಜಿ ಸಚಿವನ ಆಪ್ತರ ಸಂಖ್ಯೆ ಆರಕ್ಕೇರಿದೆ. ಇವರೆಲ್ಲರೂ ಇದೇ ಪ್ರಕರಣದ ಸಹ ಆರೋಪಿಗಳೆಂದು ಹೇಳಲಾಗಿದೆ.[ಗಾಯತ್ರಿ ಪ್ರಜಾಪತಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ]

ಈ ಪ್ರಕರಣದಲ್ಲಿ ಪ್ರಜಾಪತಿ ಬಂಧನ ಭೀತಿ ಎದುರಿಸುತ್ತಿರುವುದರಿಂದಾಗಿ, ಅವರು ತಲೆ ಮರೆಸಿಕೊಂಡಿದ್ದಾರೆ. ಹಾಗಾಗಿ, ಪೊಲೀಸರು ಅವರ ಬಂಧನಕ್ಕಾಗಿ ತೀವ್ರ ಕಾರ್ಯಾಚರಣೆ ನಡೆಸಿದ್ದು, ಕೆಲ ದಿನಗಳಿಂದಲೂ ಪ್ರಜಾಪತಿ ಲಖನೌದಿಂದ ಹೊರ ಹೋಗದಂತೆ ನಾಕಾಬಂದಿ ಹಾಕಿದ್ದಾರೆ. ಆದರೆ, ಅವರು ಈವರೆಗೆ ಸೆರೆ ಸಿಕ್ಕಿಲ್ಲ.[ಅತ್ಯಾಚಾರ ಆರೋಪಿ ಎಸ್ ಪಿ ಶಾಸಕ ಪ್ರಜಾಪತಿ ಬಂಧನಕ್ಕೆ ವ್ಯಾಪಕ ಜಾಲ]

Three more accomplices of Gayatri Prajapati held

ಮಹಿಳೆಯೊಬ್ಬರ ಅತ್ಯಾಚಾರ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರಿಂದಾಗಿ, ಸುಪ್ರೀಂ ಕೋರ್ಟ್ ಆಣತಿಯ ಮೇರೆಗೆ ಪೊಲೀಸರು ಪ್ರಜಾಪತಿ ವಿರುದ್ಧ ಪ್ರಕರಣ ದಾಖಲಿಸಿ ಕಳೆದ ತಿಂಗಳ 17ರಂದು ಎಫ್ಐಆರ್ ದಾಖಲಿಸಿದ್ದಾರೆ. ಹಾಗಾಗಿ, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three more accomplices of absconding rape-accused minister Gayatri Prajapati were today arrested by the UP Police in connection with the case against the SP leader.
Please Wait while comments are loading...