ಜನಪ್ರತಿನಿಧಿಗಳಿಗೆ ಆಘಾತ ನೀಡುವ ಸುದ್ದಿಕೊಟ್ಟ ಆಯೋಗ

Written By:
Subscribe to Oneindia Kannada

ನವದೆಹಲಿ, ಫೆಬ್ರವರಿ 12: ಕೇಂದ್ರ ಚುನಾವಣೆ ಆಯೋಗದ ಉದ್ದೇಶಿತ ಕ್ರಮವೊಂದು ಕಳಂಕಿತ ಜನಪ್ರತಿನಿಧಿಗಳಿಗೆ ಭಾರಿ ಆಘಾತ ನೀಡಲಿದೆ. 5 ವರ್ಷಗಳ ಕಾಲ ಶಿಕ್ಷೆ ಹೊಂದುವ ಆರೋಪ ಹೊತ್ತ ಕಳಂಕಿತ ಶಾಸಕ, ಸಂಸದರು ಚುನಾವಣೆ ಸ್ಪರ್ಧಿಸದಂತೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ.

ಯಾವುದೇ ಶಾಸಕ ಅಥವ ಸಂಸದ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದರೆ, ಅವರ ಸ್ಥಾನವನ್ನು ರದ್ದುಗೊಳಿಸಬಹುದು ಎಂದು ಈ ಹಿಂದೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಮೂಲಕ 1951ರ ಜನಪ್ರತಿನಿಧಿ ಕಾಯ್ದೆಗೆ ಭಾರಿ ಬದಲಾವಣೆ ತರಲು ಯತ್ನಿಸಲಾಗುತ್ತಿದೆ.

Those facing serious offences should be barred from contesting polls: EC

ಆದರೆ, ಈಗ ಆಯೋಗವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಹೊಸ ಪ್ರಸ್ತಾವನೆಯಲ್ಲಿ 2 ವರ್ಷ ಜೈಲು ಶಿಕ್ಷೆ ಬದಲಿಗೆ ಗುರುತರ ಅಪರಾಧ ಪ್ರಕರಣಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆ ವಿಧಿಸಬಹುದಾದಂಥ ಆರೋಪ ಹೊತ್ತಿದ್ದರೆ ಸಾಕು ಅಂಥಾ ಶಾಸಕ, ಸಂಸದರು ಚುನಾವಣೆ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳಲಿದ್ದಾರೆ. ಇದರ ಜತೆಗೆ ಚುನಾವಣೆಗೂ 6 ತಿಂಗಳಿಗೂ ಮೊದಲು ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೆ ಅದನ್ನು ಪರಿಗಣಿಸಲಾಗುತ್ತದೆ.

2 ವರ್ಷ ಜೈಲಿನಲ್ಲಿದ್ದರೆ ಶಾಸಕ, ಸಂಸದ ಸ್ಥಾನ ಅನರ್ಹ!

ಜಸ್ಟೀಸ್ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ. ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ್ ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ ನಂತೆ ಅಪರಾಧಿಗಳನ್ನು ಹೊಂದಿರುವ ಪಕ್ಷದ ಮಾನ್ಯತೆ ರದ್ದು ಮಾಡುವ ಅಧಿಕಾರವನ್ನು ಚುನಾವಣಾ ಆಯೋಗ ಹೊಂದಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Election Commission of India has proposed a law to bar people, accused of an offence punishable with at least five years, from contesting elections after charges were framed against them by a court. The ECI told the Supreme Court that an amendment to the law has been proposed to the Centre.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ