ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಜ, ಅಜ್ಜಿ, ಮೊಮ್ಮಗಳ ಮುಂಬೈ ಟು ಲಂಡನ್ ರೋಚಕ ಕಾರು ಪ್ರಯಾಣ

|
Google Oneindia Kannada News

ಮುಂಬೈ, ಜುಲೈ 13 : ಮುಂಬೈನಿಂದ ಲಂಡನ್ ಗೆ ಈ ದಂಪತಿ ರಸ್ತೆ ಪ್ರಯಾಣ ಮುಗಿಸಿದ್ದಾರೆ. ಈ ದಂಪತಿ ಜತೆಗೆ ಮೊಮ್ಮಗಳು ಕೂಡ ಇದ್ದಳು. ಇವರ ಪ್ರಯಾಣದ ದೂರ ಇಪ್ಪತ್ತೆರಡು ಸಾವಿರ ಕಿಲೋಮೀಟರ್.

ಅಂದಹಾಗೆ, ಈ ಕನಸು ಮೊದಲಿಗೆ ಕಂಡವರು ಬದ್ರಿ ಬಲ್ ದವಾ. ಆರು ವರ್ಷದ ಹಿಂದೆ ಲಂಡನ್ ನಿಂದ ಮುಂಬೈಗೆ ವಿಮಾನದಲ್ಲಿ ಬರುವಾಗ ಕಿಟಕಿ ಪಕ್ಕ ಕೂತಿದ್ದ ಬದ್ರಿ ಅವರಿಗೆ, ಇದೆಂಥ ಅದ್ಭುತ ದೃಶ್ಯ. ಈ ಪರ್ವತಗಳ ಮಧ್ಯೆ ರಸ್ತೆ ಪ್ರಯಾಣ ಮಾಡಿದರೆ ಹೇಗೆ ಅಂತನ್ನಿಸಿದೆ.

ಮಧುಗಿರಿಯ ಜಯಮಂಗಲಿಯಲ್ಲಿ ಕೃಷ್ಣಮೃಗ ನೋಡುವುದೇ ಚಂದಮಧುಗಿರಿಯ ಜಯಮಂಗಲಿಯಲ್ಲಿ ಕೃಷ್ಣಮೃಗ ನೋಡುವುದೇ ಚಂದ

ಅದನ್ನು ತಮ್ಮ ಪತ್ನಿ ಪುಷ್ಪಾ ಅವರಿಗೆ ತಿಳಿಸಿದ್ದಾರೆ. ಈ ಪರ್ವತಗಳ ಮಧ್ಯೆ ನಾನು ಕಾರಿನಲ್ಲಿ ಬರಬೇಕು ಅನ್ನಿಸುತ್ತಿದೆ ಅಂದಿದ್ದಾರೆ. ಪತಿರಾಯರೇನೋ ಜೋಕ್ ಹೊಡೆಯುತ್ತಿದ್ದಾರೆ ಅಂದುಕೊಂಡು ಆಕೆ ನಕ್ಕು ಸುಮ್ಮನಾಗಿದ್ದಾರೆ.

ಕಳೆದ ವರ್ಷ ಮೇನಲ್ಲಿ ತಮ್ಮ ಪ್ರಯಾಣದ ಸಿದ್ಧತೆ ಆರಂಭಿಸಿದ ಬದ್ರಿ ಅವರು, ಈ ವರ್ಷದ ಮಾರ್ಚ್ ನಲ್ಲಿ ಎಪ್ಪತ್ಮೂರು ವರ್ಷದ ಬದ್ರಿ, ಅವರ ಪತ್ನಿ ಅರವತ್ನಾಲ್ಕು ವರ್ಷದ ಪುಷ್ಪಾ, ತಮ್ಮ ಹತ್ತು ವರ್ಷದ ಮೊಮ್ಮಗಳ ಜತೆಗೆ ಬಿಎಂಡಬ್ಲ್ಯೂ ಎಕ್ಸ್-5 ಸಿರೀಸ್ ನ ಕಾರಿನಲ್ಲಿ ಪ್ರಯಾಣ ಆರಂಭಿಸಿಯೇ ಬಿಟ್ಟಿದ್ದಾರೆ. ಈ ಬಗ್ಗೆ 'ದ ಹಿಂದೂ' ಲೇಖನ ಪ್ರಕಟಿಸಿದೆ.

ಎಪ್ಪತ್ತೆರಡು ದಿನ, ಇಪ್ಪತ್ತೆರಡು ಸಾವಿರ ಕಿಲೋಮೀಟರ್ ದೂರ

ಎಪ್ಪತ್ತೆರಡು ದಿನ, ಇಪ್ಪತ್ತೆರಡು ಸಾವಿರ ಕಿಲೋಮೀಟರ್ ದೂರ

ಮುಂಬೈನಿಂದ ಹೊರಟಿರುವ ಈ ದಂಪತಿ ಹಾಗೂ ಮೊಮ್ಮಗು ಎಪ್ಪತ್ತೆರಡು ದಿನಗಳ ಕಾಲ ಪ್ರಯಾಣ ಮಾಡಿ, ಹತ್ತೊಂಬತ್ತು ದೇಶಗಳನ್ನು ದಾಟಿ, ಇಪ್ಪತ್ತೆರಡು ಸಾವಿರ ಕಿಲೋಮೀಟರ್ ದೂರದ ಲಂಡನ್ ತಲುಪಿದೆ.

ಅವರು ಬೆಳೆದದ್ದು ಕರ್ನಾಟಕದಲ್ಲಿ

ಅವರು ಬೆಳೆದದ್ದು ಕರ್ನಾಟಕದಲ್ಲಿ

ಸ್ಟೀಲ್ ರಫ್ತು ವ್ಯಾಪಾರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಬದ್ರಿ ಮತ್ತು ಅವರ ಪತ್ನಿ ಮೂಲತಃ ರಾಜಸ್ತಾನದವರು ಆದರೆ ಬೆಳೆದದ್ದೆಲ್ಲ ಕರ್ನಾಟಕದಲ್ಲಿ. ಸದ್ಯಕ್ಕೆ ಮುಂಬೈನಲ್ಲಿ ಮನೆಯಿದೆ.

ಹಲವು ಸಾಹಸಗಳು ಬೆನ್ನಿಗಿವೆ

ಹಲವು ಸಾಹಸಗಳು ಬೆನ್ನಿಗಿವೆ

ಈ ಲಂಡನ್ ನ ರಸ್ತೆ ಪ್ರವಾಸ ಇವರ ಮೊದಲ ಸಾಹಸ ಏನಲ್ಲ. ಒಂಬತ್ತು ವರ್ಷಗಳ ಹಿಂದೆ ಮೌಂಟ್ ಎವರೆಸ್ಟ್ ನ ಒಂದು ಬೇಸ್ ಕ್ಯಾಂಪ್ ಏರಿದ್ದಾರೆ. ಮೂರು ದಶಕಗಳ ಹಿಂದೆ ಮುಂಬೈನಿಂದ ಬದ್ರಿನಾಥ್ ಗೆ ಕಾರು ಚಾಲನೆ ಮಾಡಿದ್ದಾರೆ. ಹತ್ತು ವರ್ಷದ ಮೊಮ್ಮಗಳ ಜತೆಗೆ ಎರಡು ವರ್ಷದ ಹಿಂದೆ ಐಸ್ ಲ್ಯಾಂಡ್ ನಲ್ಲಿ ಸುತ್ತಾಡಿದ್ದಾರೆ.

ನಲವತ್ತಾರು ಗಂಟೆ ಸತತವಾಗಿ ನಾನ್ ಸ್ಟಾಪ್ ನಾರ್ವೆಯಿಂದ ನಾರ್ತ್ ಕೇಪ್ ಗೆ ಡ್ರೈವ್ ಮಾಡಿದ್ದಾರೆ. ಬದ್ರಿ ಅವರು ಅಂಟಾರ್ಟಿಕಾಕ್ಕೂ ತೆರಳಿದ್ದು, ಅಲ್ಲಿ ತೊಂಬತ್ತು ಡಿಗ್ರಿ ಉತ್ತರಕ್ಕೆ ತಲುಪಿದ ಮೊದಲ ಭಾರತೀಯ ಎಂಬ ಶ್ರೇಯ ಇವರಿಗಿದೆ.

ಅರವತ್ತೈದು ದೇಶಗಳ ವೀಸಾ ಸ್ಟ್ಯಾಂಪ್

ಅರವತ್ತೈದು ದೇಶಗಳ ವೀಸಾ ಸ್ಟ್ಯಾಂಪ್

ಬದ್ರಿ ಅವರ ಬಳಿ ಅರವತ್ತೈದು ದೇಶಗಳ ವೀಸಾ ಸ್ಟ್ಯಾಂಪ್ ಇದ್ದರೆ, ಅವರ ಪತ್ನಿ ಬಳಿ ಐವತ್ತೈದು ದೇಶಗಳದ್ದಿವೆ. ಆದರೆ ಈ ರಸ್ತೆ ಪ್ರಯಾಣ ತುಂಬ ಪರಿಣಾಮ ಬೀರಿದೆ. ನಾನು ಈ ಸ್ಥಳಗಳಿಗೆ ಮತ್ತೆ ಭೇಟಿ ಕೊಡ್ತೀನಿ ಅನ್ನೋ ವಿಚಾರ ಬಿಟ್ಟು ಈ ಪ್ರವಾಸದ ಮುಖ್ಯಾಂಶಗಳನ್ನು ಯೋಚಿಸುವುದಕ್ಕೂ ಕಷ್ಟ ಅನ್ನುತ್ತಾರೆ ಬಲ್ ದವಾ.

ಮೊಮ್ಮಗಳಿಗೆ ದೇಶ ತೋರಿಸಬೇಕು

ಮೊಮ್ಮಗಳಿಗೆ ದೇಶ ತೋರಿಸಬೇಕು

ಮುಂಬೈನಿಂದ ಇಂಫಾಲ್ ಗೆ ತೆರಳುವುದಕ್ಕೆ ಈ ದಂಪತಿ ಇಪ್ಪತ್ನಾಲ್ಕು ದಿನ ಸಮಯ ತೆಗೆದುಕೊಂಡಿದ್ದಾರೆ. ದೇಶದೊಳಗಿನ ಪ್ರದೇಶಗಳನ್ನು ನೋಡುವ, ಅದರಲ್ಲೂ ಯುಕೆ ಮೂಲದ ಮೊಮ್ಮಗಳಿಗೆ ದೇಶವನ್ನು, ಇಲ್ಲಿನ ವೈವಿಧ್ಯತೆಯನ್ನು ತೋರಿಸುವ ಉದ್ದೇಶ ಅವರದು.

ಕೆಲವು ಚಿಂತೆಗಳಿದ್ದವು

ಕೆಲವು ಚಿಂತೆಗಳಿದ್ದವು

ಬಲ್ ದವಾ ಅವರ ಬಳಿ ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್ ಇದ್ದರೂ ಕೆಲವು ಚಿಂತೆಗಳಂತೂ ಇದ್ದೇ ಇದ್ದವು. ಅವರ ಪಾಸ್ ಪೋರ್ಟ್ ಗಳು ಉಜ್ಬೇಕ್ ರಾಯಭಾರ ಕಚೇರಿಯಲ್ಲಿದ್ದವು. ಏಕೆಂದರೆ ಅಲ್ಲಿನ ರಾಯಭಾರ ಕಚೇರಿ ಬಳಿ ವೀಸಾ ಸ್ಟಿಕರ್ ಗಳು ಖಾಲಿಯಾಗಿದ್ದವು. ಅದಕ್ಕಾಗಿ ತಮ್ಮ ಬಳಿಯೇ ಇವರ ಪಾಸ್ ಪೋರ್ಟ್ ಇರಿಸಿಕೊಂಡಿದ್ದರು.

ಮುಂಚಿತವಾಗಿಯೇ ಹೋಟೆಲ್ ಬುಕಿಂಗ್

ಮುಂಚಿತವಾಗಿಯೇ ಹೋಟೆಲ್ ಬುಕಿಂಗ್

ಎಲ್ಲ ಹೋಟೆಲ್ ಗಳನ್ನು ಮುಂಚಿತವಾಗಿಯೇ ಕಾಯ್ದಿರಿಸಿದ್ದರು. ಆಯಾ ದಿನದ ರಾತ್ರಿ ಎಲ್ಲಿ ಉಳಿಯುವುದು ಅನ್ನೋದನ್ನು ತುಂಬ ಚೆನ್ನಾಗಿ ಸಂಶೋಧನೆ ಮಾಡಿ, ನಿರ್ಧರಿಸಲಾಗಿತ್ತು. ಅದರಲ್ಲೂ ಪೂರ್ವ ಯುರೋಪ್ ನಲ್ಲಿ ಗೈಡ್ ಗಳ ಅಗತ್ಯ ಕಂಡುಬಂದಾಗ ಅವರಿಗೆ ನೆರವು ಸಿಕ್ಕಿದೆ.

ಸ್ಥಳೀಯ ಭಾಷೆ ಹಾಗೂ ಕಟ್ಟಳೆ-ನಿಯಮಗಳು ತಿಳಿಯಲು ಸಹಾಯ ಮಾಡಿದ್ದಾರೆ. ಇದರ ಜತೆಗೆ ಸುರಕ್ಷತೆಯ ಪ್ರಶ್ನೆ ಕೂಡ ಎದುರಾಗಿದೆ. ಕೆಲವು ಕಡೆ ಸ್ಥಳೀಯ ನೋಂದಣಿ ಇರುವ ವಾಹನ ಕೂಡ ಅಗತ್ಯವಾಗಿದೆ.

ಒಂದೇ ದಿನದಲ್ಲಿ ಮೂರು ದೇಶ ದಾಟಿದರು

ಒಂದೇ ದಿನದಲ್ಲಿ ಮೂರು ದೇಶ ದಾಟಿದರು

ಮಣಿಪುರದಿಂದ ಚೀನಾ, ರಷ್ಯಾ ಮೂಲಕ ಪ್ರಯಾಣ ಬೆಳೆಸಿರುವ ಇವರು, ದಿನಕ್ಕೆ ಸರಾಸರಿ ನಾನೂರು ಕಿಮೀ, ಹನ್ನೆರಡು ಗಂಟೆ ಮಾತ್ರ ಪ್ರಯಾಣ ಹಾಗೂ ಸ್ಥಳ ನೋಡಲು ಒಂದಿಷ್ಟು ಸಮಯ ಅಂತಿಟ್ಟುಕೊಂಡಿದ್ದರು. ಒಂದು ದಿನದಲ್ಲಿ ಮಾಡಿರುವ ಅತಿ ದೂರದ ಪ್ರಯಾಣ ಅಂದರೆ ಒಂಬೈನೂರ ಮೂವತ್ತು ಕಿಲೋಮೀಟರ್. ಅದು ವಾರ್ಸಾದಿಂದ ಬ್ರಸೆಲ್ಸ್ ಗೆ.

ಆ ದಿನ ನಾವು ತಿಂಡಿ ತಿಂದದ್ದು ವಾರ್ಸಾದಲ್ಲಿ (ಪೋಲೆಂಡ್), ಮಧ್ಯಾಹ್ನದ ಊಟ ಕೊಲೋನ್ (ಜರ್ಮನಿ) ಮತ್ತು ರಾತ್ರಿಯ ಊಟ ಬ್ರಸೆಲ್ಸ್ (ಬೆಲ್ಜಿಯಂ)ನಲ್ಲಿ ಮಾಡಿದೆವು ಎಂದಿರುವ ಬಲ್ ದವಾ, ಪ್ರತಿ ದಿನದ ಫೋಟೋಗಳನ್ನು ತಮ್ಮ ಮಕ್ಕಳಿಗೆ ಮೇಲ್ ಮಾಡಿದ್ದು, ಅವುಗಳನ್ನು ಬ್ಲಾಗ್ ಹಾಗೂ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಲಾಗಿದೆ.

ವಯಸ್ಸು ಎಂಬುದು ಸಂಖ್ಯೆ ಮಾತ್ರ

ವಯಸ್ಸು ಎಂಬುದು ಸಂಖ್ಯೆ ಮಾತ್ರ

ತಮ್ಮ ಪ್ರಯಾಣದುದ್ದಕ್ಕೂ ನೋಡಿದ ದೇಶಗಳಲ್ಲಿನ ಮೂಲಸೌಕರ್ಯ, ಅಲ್ಲಿನ ಜನರ ಸ್ವಾಗತ ಈ ದಂಪತಿಗೆ ಅಚ್ಚರಿ ಹುಟ್ಟಿಸಿದೆ. ವಯಸ್ಸು ಅನ್ನೋದು ಕೇವಲ ಸಂಖ್ಯೆ ಮಾತ್ರ ಎಂಬ ಮಾತನ್ನು ಹೇಳುವ ಬಲ್ ದವಾ ಮತ್ತು ಅವರ ಪತ್ನಿ, ಇಂಥ ದೀರ್ಘ ಪ್ರಯಾಣದಲ್ಲಿ ತೊಂದರೆಗಳು ಸಹಜ. ಅದನ್ನು ಹೇಗೆ ಸ್ವೀಕರಿಸ್ತೀವಿ ಅನ್ನೋದು ನಮಗೆ ಬಿಟ್ಟಿದ್ದು ಎನ್ನುತ್ತಾರೆ. ಅಂದಹಾಗೆ ಬಲ್ ದವಾ ಅವರಿಗೆ ಬಾಹ್ಯಾಕಾಶದಲ್ಲೂ ಹೆಜ್ಜೆ ಇರಿಸುವಾಸೆ.

ಅವರೆಲ್ಲಿಗೆ ಹೋಗ್ತಾರೆ ಅಲ್ಲಿಗೆ ಜತೆಯಾಗಿ ಹೋಗ್ತೀನಿ, ನನ್ನದು ಅಂತೇನೂ ಆಸೆಗಳಿಲ್ಲ ಅಂತಾರೆ ಪತ್ನಿ ಪುಷ್ಪಾ.

Photo source

English summary
73 year old Badri Baldawa embarked on the road trip to London from Mumbai with his 64-year-old wife and 10-year-old granddaughter in their BMW X5, across 72 days, crossing 19 countries and covering 22,200 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X