ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲೇ 2 ಗಂಟೆ ಮಾಹಿತಿ ತಡ, ಏಕೆ ಗೊತ್ತಾ?
ಹೆಸರಲ್ಲಿ ಏನ್ರೀ ಇದೆ ಅಂತ ಯಾರಾದರೂ ಮಾತನಾಡುವುದನ್ನು ಭಾರತ ಚುನಾವಣೆ ಆಯೋಗದ ಸದಸ್ಯರು ಯಾರಾದರೂ ಕೇಳಿಸಿಕೊಂಡರೆ ನಖಶಿಖಾಂತ ಉರಿದುಕೊಂಡು ಬಿಡ್ತಾರೆ. ಏಕೆಂದರೆ ಪಂಚರಾಜ್ಯ ಚುನಾವಣೆ ಮತ ಎಣಿಕೆ ದಿನವಾದ ಮಂಗಳವಾರ ಇಡೀ ದೇಶದಲ್ಲಿ ಟೀವಿ, ಮೊಬೈಲ್, ಕಂಪ್ಯೂಟರ್ ಅಂತ ಜನರು ಮಾಧ್ಯಮಗಳಲ್ಲಿ ಮುಗಿ ಬಿದ್ದು ನೋಡುವಾಗ ಚುನಾವಣೆ ಆಯೋಗದಿಂದ ಫಲಿತಾಂಶ ಪ್ರಕಟಣೆ ಗಂಟೆಗಟ್ಟಲೆ ನಿಧಾನವಾಯಿತು.
ಭಾರತದ ಚುನಾವಣೆ ಆಯೋಗದ ಸ್ವಂತ ವೆಬ್ ಸೈಟ್ ಎರಡು ಗಂಟೆ ತಡವಾಗಿ ಸಂಖ್ಯೆಗಳನ್ನು ತೋರಿಸುತ್ತಿತ್ತು. ಆದರೆ ಅದಕ್ಕೆ ಕಾರಣ ಏನು ಗೊತ್ತಾ? ಮಾಧ್ಯಮವೊಂದರ ವರದಿ ಪ್ರಕಾರ ಮಿಜೋರಾಂನ ಒಂದು ರಾಜಕೀಯ ಪಕ್ಷದ ಹೆಸರು ನಿಗದಿತ ಮಿತಿಯ ಅರವತ್ತು ಕ್ಯಾರೆಕ್ಟರ್ಸ್ ಗಿಂತ ಹೆಚ್ಚಿತ್ತು. ಅದರಿಂದ ಮುನ್ನಡೆಯ ಸಂಖ್ಯೆಯನ್ನು ತೋರಿಸುವುದಕ್ಕೆ ಕಂಪ್ಯೂಟರ್ ನಲ್ಲಿ ಪೇಜಿನೇಷನ್ ಸಮಸ್ಯೆಯಾಯಿತು.

ಪೀಪಲ್ಸ್ ರೆಪ್ರಸೆಂಟೇಷನ್ ಫಾರ್ ಐಡೆಂಟಿಟಿ ಅಂಡ್ ಸ್ಟೇಟಸ್ ಆಫ್ ಮಿಜೋರಾಂ (PRISM) ಹೆಸರು ಅತಿ ಉದ್ದವಿತ್ತು. ಆ ಹೆಸರು ಕಂಪ್ಯೂಟರ್, ಸಾಫ್ಟ್ ವೇರ್ ಗಳ ಪಾಲಿಗೆ ಸವಾಲಾಯಿತು. ಈಗ ಹೇಳಿ ನೋಡೋಣ ಹೆಸರಲ್ಲಿ ಏನಿದೆ ಎಂದು ಧೈರ್ಯದಿಂದ.












Click it and Unblock the Notifications