ನೋಟು ರದ್ದು ಸಲಹೆಗಾರನಿಗೇ ಸರಕಾರದ ಕ್ರಮ ಖುಷಿ ತಂದಿಲ್ಲ!

Posted By:
Subscribe to Oneindia Kannada

ಪುಣೆ, ನವೆಂಬರ್ 22: ಕಪ್ಪುಹಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ 'ಸರ್ಜಿಕಲ್ ಸ್ಟ್ರೈಕ್' ಘೋಷಣೆ ಮಾಡಿದ ನಂತರ ಮತ್ತೊಬ್ಬ ವ್ಯಕ್ತಿ ಕೂಡ ತುಂಬ ಪ್ರಚಾರಕ್ಕೆ ಬಂದರು. ಪುಣೆ ಮೂಲದ 'ಅರ್ಥಕ್ರಾಂತಿ' ಸಂಸ್ಥೆ ಸ್ಥಾಪಕ ಅನಿಲ್ ಬೊಕಿಲ್ ಎಂಬ ಹೆಸರು ದೇಶದಾದ್ಯಂತ ನಾನಾ ಪತ್ರಿಕೆಗಳ ಪಾಲಿಗೆ ಹೆಡ್ಡಿಂಗ್ ಆಯಿತು.

ದೊಡ್ಡ ಮುಖಬೆಲೆ ನೋಟುಗಳು ರದ್ದು ಆಗಲಿ ಎಂಬುದು ಬೊಕಿಲ್ ಮತ್ತು ಅವರ ತಂಡದ ಹದಿನಾರು ವರ್ಷಗಳ ತಪಸ್ಸು, ಶ್ರಮ, ಕನಸು ಏನಾದರೂ ಅಂದುಕೊಳ್ಳಬಹುದು. ಆದರೆ ಸರಕಾರದ ಕ್ರಮ ಬೊಕಿಲ್ ಗೆ ಸಂತೋಷ ತಂದಿಲ್ಲ. ಅಷ್ಟೇ ಅಲ್ಲ, ಸರಕಾರದ ನಡೆಯಿಂದ ಅವರಿಗೆ ನಿರಾಸೆ ಆಗಿದೆ.['ತೆರಿಗೆ ಬೇಡವೇ ಬೇಡ, ಆದಾಯದಲ್ಲಿ ಶೇ 2ರಷ್ಟು ಕೊಟ್ಟರೆ ಸಾಕು!']

This Is Not What We Suggested, Says Anil Bokil

ನಾವು ಪ್ರಸ್ತಾವ ಮಾಡಿದ್ದು ಇದಲ್ಲ. ಸರಕಾರದ ಮುಂದೆ ನಾವಿಟ್ಟಿದ್ದ ಐದು ಅಂಶಗಳಲ್ಲಿ ಒಂದು ಭಾಗವನ್ನಷ್ಟೇ ತೆಗೆದುಕೊಂಡಿದೆ. ದೊಡ್ಡ ನೋಟಿನಿಂದ ಸಣ್ಣ ಮುಖಬೆಲೆಗೆ ಬದಲಿಸಲು ನಾವೊಂದು ಯೋಜನೆ ಕೊಟ್ಟಿದ್ವಿ ಎಂದು ಐವತ್ತೆರಡು ವರ್ಷದ ಅನಿಲ್ ಬೊಕಿಲ್ ಮುಂಬೈ ಮಿರರ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.[500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?]

ನೋಟು ರದ್ದು ಜಾರಿ ನಡೆ ಸರಿಯಾಗಿ ಆಲೋಚಿಸಿ ಕೈಗೊಂಡ ಕ್ರಮದಂತೆ ಇಲ್ಲ ಎಂದಿದ್ದಾರೆ ಅನಿಲ್ ಬೊಕಿಲ್. ಸದ್ಯದ ತೆರಿಗೆ ನಿಯಮಗಳನ್ನು ಹಿಂಪಡೆಯಲು ಮತ್ತು ಅದರ ಬದಲಿಗೆ ಟ್ರಾನ್ಸಾಕ್ಷನ್ ತೆರಿಗೆ ವಿಧಿಸುವ ಸಲಹೆ ನೀಡಿದ್ದರು. ನಗದು ವ್ಯವಹಾರವನ್ನು ಎರಡು ಸಾವಿರಕ್ಕೆ ಮಿತಿಗೊಳಿಸುವಂತೆ, ಅಂಥ ವ್ಯವಹಾರಕ್ಕೆ ಯಾವುದೇ ತೆರಿಗೆ ವಿಧಿಸದಂತೆ ಇರಲು ಸಲಹೆ ಕೊಟ್ಟಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"This is not what we proposed. The government has only taken one part of our five-point plan... We had a proper transition plan from large currency denominations to smaller ones," the 52-year-old told Mumbai Mirror in an interview.
Please Wait while comments are loading...