ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದ್ದು ಹೀಗೆ

'ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನಗಳ ಮೌಲ್ಯಗಳನ್ನು ಗಂಟುಮೂಟೆ ಕಟ್ಟಿ ದ್ವೇಷವನ್ನು ಬಿತ್ತಿ, ಸರ್ವಾಧಿಕಾರವನ್ನು ಸ್ಥಾಪಿಸಲು ಹೊರಟಿರುವ ಬಿಜೆಪಿಯ ಪ್ರಯತ್ನಗಳನ್ನು ಪ್ರೀತಿ, ಸಹಬಾಳ್ವೆಯ ಸಂದೇಶಗಳ ಮೂಲಕ ರಾಹುಲ್ ಗಾಂಧಿ ಅವರು ಸೋಲಿಸಲಿದ್ದಾರೆ. ರಾಹುಲ್ ಗಾಂಧಿ ಅವರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ಅವರಂತೆ ಕಾರ್ಟೂನ್‌ಗಳನ್ನು ನೋಡಬಹುದು.

Congress mocked Narendra Modi and Amith Shah

ಬಿಜೆಪಿ ಜಾತಿಗಳ ನಡುವೆ ದ್ವೇಷದ ಬೀಜ ಬಿತ್ತುವ ಮೂಲಕ ಜನಾಂಗಗಳ ನಡುವೆ ಹಿಂಸಾಚಾರವನ್ನು ಸೃಷ್ಟಿಸಿದೆ. ಹಿಜಾಬ್, ಬಾಯ್ಕಟ್, ಹಲಾಲ್, ಜಟ್ಕಾ, ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹಗಳ ಪ್ರತಿಷ್ಠಾಪನೆ ರದ್ದು ಹೀಗೆ ಒಂದಲ್ಲಾ ಎರಡಲ್ಲ. ಬಿಜೆಪಿ ಆಡಳಿತದಲ್ಲಿ ಮುಸ್ಲೀಂರ ವಿರುದ್ಧ ನಡೆದ ಗಲಾಟೆಗಳು ಒಂದಲ್ಲಾ ಎರಡಲ್ಲ. ಹೀಗಾಗಿ ಕಾಂಗ್ರೆಸ್ ಬಿಜೆಪಿ ಆಡಳಿತಾವಧಿಯ ಉದ್ದಕ್ಕೂ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದೆ. ಇದರಿಂದಾಗಿ ಸಮಾಜದಲ್ಲಿ ದ್ವೇಷದ ವಾತಾವರಣ ಉಂಟಾಗಿತ್ತು.

ಆದರೆ ರಾಹುಲ್ ಗಾಂಧಿ ಆವರು ಇಂತಹ ದ್ವೇಷದ ರಾಜಕಾರಣವನ್ನು ಮಟ್ಟಹಾಕಿದ್ದಾರೆ. ಆವರ ಆಗಮನದಿಂದಾಗಿ ಸಮಾಜದಲ್ಲಿ ಶಾಂತಿ ನಡೆಲೆಸಿದೆ ಎಂಬಾರ್ಥದಲ್ಲಿ ಈ ಕಾರ್ಟೂನ್ ವಿಡಿಯೋ ತಯಾರಿಸಲಾಗಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಒಮ್ಮೆ ನೋಡಿ.

ವಿಡಿಯೋದಲ್ಲಿ ಮೋದಿಯಂತೆ ಕಾಣುವ ಕಾರ್ಟೂನ್ ಪ್ರಜಾಪ್ರಭುತ್ವ ಮತ್ತು ಮಾಧ್ಯಮವನ್ನು ಕುದರೆ ಗಾಡಿಯಲ್ಲಿ ಓಡಿಸಿಕೊಂಡು ಹೋಗುತ್ತಿದ್ದರೆ, ಇತ್ತ ಹಿಂದೂ ಮುಸ್ಲೀಂರ ನಡುವೆ ಅಮಿತ್ ಶಾ ಅವರಂತಿರುವ ಕಾರ್ಟೂನ್ ದ್ವೇಷದ ಕಿಚ್ಚು ಹಚ್ಚುತ್ತಾರೆ. ಅವರಿಬ್ಬರು ಜಗಳವಾಡುವುದನ್ನು ನೋಡಿ ಆನಂದಿಸುತ್ತದೆ. ಆಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಗಮನವಾಗುತ್ತದೆ. ಇಬ್ಬರನ್ನು ಸಮಾಧಾನ ಮಾಡುತ್ತಾರೆ. ಬಳಿಕ ರಾಹುಲ್ ಗಾಂಧಿಯವರ ಸಾಧನೆಗಳು ಎಲ್ಲಾ ಜಾತಿಯವರೊಂದಿಗೆ ಅವರು ಬೆರೆಯುವ ಚಿತ್ರ ಕಾಣಿಸುತ್ತದೆ. ಆಗಾಗ ಪತ್ರಿಕೆಗಳು ಕಾಣಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+