ನೀವು ಸ್ಮಾರ್ಟ್‌ ಆಗಿದ್ದೀರಿ, ಹ್ಯಾಂಡ್‌ಸಮ್‌ ಕೂಡ, ಮತ್ಯಾಕೆ ಮದುವೆಯಾಗಿಲ್ಲ ಎಂದ ಕಾಲೇಜು ಯುವತಿಯರಿಗೆ ರಾಹುಲ್‌ ಗಾಂಧಿ ಹೇಳಿದ್ದು

ಜೈಪುರ, ಅಕ್ಟೋಬರ್‌ 10: ರಾಹುಲ್‌ ಗಾಂಧಿ ಅವರ ಮದುವೆ ವಿಷಯ ಮತ್ತೆ ಮತ್ತೆ ಮುನ್ನೆಲೆಗೆ ಬಂರುತ್ತಿದೆ. ರಾಜಸ್ತಾನದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದದ ವೇಳೆ ನೀವು ಇನ್ನು ಏಕೆ ಮದುವೆಯಾಗಿಲ್ಲ ಎಂದು ಕೇಳಿದ್ದಕ್ಕೆ ಅವರು ಮುಗುಳುನಗೆಯೊಂದಿಗೆ ಉತ್ತರಿಸಿದ್ದಾರೆ.

ಮಂಗಳವಾರ ಜೈಪುರದಲ್ಲಿ ಮಹಿಳಾ ವಿದ್ಯಾರ್ಥಿನಿಯರು ನೇರ ಪ್ರಶ್ನೆಗಳನ್ನು ಕೇಳಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದರು. ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ರಾಹುಲ್‌ ಗಾಂಧಿಯವರಿಗೆ ಅವರ ನೆಚ್ಚಿನ ಆಹಾರ, ತ್ವಚೆಯ ಆರೈಕೆ ಮತ್ತು ಅವರ ಮದುವೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿದರು.

This is how Rahul Gandhi told college girls why they are not married

ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದದ ವೀಡಿಯೊವನ್ನು ಇಂದು ಅವರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಒಬ್ಬ ವಿದ್ಯಾರ್ಥಿಯು 53 ವರ್ಷ ವಯಸ್ಸಿನ ರಾಹುಲ್‌ ಗಾಂಧಿ ಅವರನ್ನು ತಾವು ನೋಡಲು ಚೆನ್ನಾಗಿದ್ದೀರಿ, ನೀವು ತುಂಬಾ ಸ್ಮಾರ್ಟ್ ಮತ್ತು ಸುಂದರವಾಗಿದ್ದೀರಿ ಆದರೆ ಇನ್ನೂ ಏಕೆ ಮದುವೆಯಾಗಿಲ್ಲ ಎಂದು ಕೇಳಿದರು.

ಮದುವೆ ಯೋಜನೆ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

ಅವರ ಪ್ರಶ್ನೆಗೆ ತಕ್ಷಣ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ, ಅವರು ತಮ್ಮ ಕೆಲಸ ಮತ್ತು ಪಕ್ಷದ ಕೆಲಸದಲ್ಲಿ ಮಗ್ನರಾಗಿರುವ ಕಾರಣ ಅವರು ಬ್ರಹ್ಮಚಾರಿಯಾಗಿ ಉಳಿದಿದ್ದೇನೆ. ನಾನು ನನ್ನ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಅವರು ಹೇಳಿದರು. ಆದರೂ ರಾಹುಲ್‌ ಗಾಂಧಿಯವರು ತಮ್ಮ ಮದುವೆಯ ಬಗ್ಗೆ ಆಗಾಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿದ್ದರು.

ಈ ಹಿಂದೆ 2018 ರಲ್ಲಿ ರಾಹುಲ್‌ ಗಾಂಧಿಯವರನ್ನು ಮದುವೆಯಾಗುವ ಯೋಜನೆಗಳ ಬಗ್ಗೆ ಕೇಳಿದ್ದಾಗ ಅವರು ತಮ್ಮ ಪಕ್ಷವನ್ನು ಮದುವೆಯಾಗಿದ್ದಾಗಿ ಹೇಳಿದ್ದರು. ಆಗ ಅವರ ನೆಚ್ಚಿನ ಅಡುಗೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಏನು ಬೇಕಾದರೂ ತಿನ್ನತ್ತೇನೆ ಎಂದು ಹೇಳಿದ್ದರು.

ತಮ್ಮ ತ್ವಚೆಯ ಆರೈಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ರಾಹುಲ್ ಗಾಂಧಿ ಅವರು ಎಂದಿಗೂ ಮುಖದ ಮೇಲೆ ಕ್ರೀಮ್ ಅಥವಾ ಸೋಪ್ ಅನ್ನು ಬಳಸುವುದಿಲ್ಲ ಬದಲಾಗಿ ನೀರಿನಿಂದ ಮಾತ್ರ ಮುಖ ತೊಳೆಯುತ್ತೇನೆ. ನಾನು ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತೇನೆ ಎಂದು ಅವರು ತಮ್ಮ ನೆಚ್ಚಿನ ವಿಷಯಗಳ ಬಗ್ಗೆ ಕೇಳಿದಾಗ ಹೇಳಿದರು.

ಸಾರ್ವಜನಿಕರೊಂದಿಗೆ ರಾಹುಲ್ ಗಾಂಧಿ ಭೇಟಿ:

ಕಾಂಗ್ರೆಸ್ ನಾಯಕರು ತಮ್ಮ ಸಾರ್ವಜನಿಕ ಸಂಪರ್ಕ ಪ್ರಯತ್ನಗಳ ಭಾಗವಾಗಿ ಸಮಾಜದ ವಿವಿಧ ಹಂತಗಳ ಜನರನ್ನು ಭೇಟಿಯಾಗುತ್ತಿದ್ದು, ಸಂವಾದ ನಡೆಸುತ್ತಿದ್ದಾರೆ. ಕಳೆದ ತಿಂಗಳು ರಾಹುಲ್‌ ಗಾಂಧಿ ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲರ ಗುಂಪಿನೊಂದಿಗೆ ಸಂವಾದ ನಡೆಸಿದ್ದರು.

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಡೆಲಿವರಿ ಏಜೆಂಟ್‌ಗಳನ್ನು ಭೇಟಿ ಮಾಡಿ ಅವರೊಬ್ಬರೊಂದಿಗೆ ಸ್ಕೂಟರ್‌ನಲ್ಲಿ ತೆರಳಿದ್ದರು. ಅವರು ದೆಹಲಿಯ ಕರೋಲ್ ಬಾಗ್‌ನಲ್ಲಿ ಮೆಕ್ಯಾನಿಕ್‌ಗಳೊಂದಿಗೆ ಸಂವಾದ ನಡೆಸಿದ್ದರು ಮತ್ತು ದೆಹಲಿಯ ಆಜಾದ್‌ಪುರ ಮಂಡಿಗೆ ಭೇಟಿ ನೀಡಿದರು ಮತ್ತು ಮಾರಾಟಗಾರರು ಮತ್ತು ಕಾರ್ಮಿಕರೊಂದಿಗೆ ಮಾತನಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+