Heartbreaking Incident: ಈ ಅಜ್ಜಿಗೆ ಒಂದು ವರ್ಷದಿಂದ ಶೌಚಾಲಯವೇ ಮನೆ....

ತಾಯಿಯೂ ನೂರು ಮಕ್ಕಳ ಕಷ್ಟಗಳನ್ನು ಸಹಿಸಬಲ್ಲಳು. ನೂರು ಮಕ್ಕಳು ಒಂದೇ ತಾಯಿಯನ್ನು ಪ್ರೀತಿಸುವುದಿಲ್ಲ ಎಂಬುದಕ್ಕೆ ಹಲವು ಘಟನೆಗಳು ಜೀವಂತ ಸಾಕ್ಷಿ. ಇತ್ತೀಚಿಗೆ ಬಿಸಿಲು, ಮಳೆ, ಚಳಿಯಿಂದ ರಕ್ಷಿಸಿಕೊಳ್ಳಲು ವೃದ್ಧೆಯೊಬ್ಬರು ಶೌಚಾಲಯದಲ್ಲಿ ವಾಸವಾಗಿರುವುದು ಕಂಡು ಬಂದಿದೆ.

ಪಶ್ಚಿಮ ಬಂಗಾಳದ ಸುಂದ್ರಾಡಿ ಗ್ರಾಮದ ನಿವಾಸಿ 66 ವರ್ಷದ ಮಿಥಿಲಾ ಮಹತೋ ಶೌಚಾಲಯದಲ್ಲಿ ವಾಸಿಸುತ್ತಿರುವ ಮಹಿಳೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಅವರಿಬ್ಬರಿಗೂ ಮದುವೆಯಾಗಿದೆ. ಅಂದಿನಿಂದ ವೃದ್ಧೆ ತನ್ನ ಮಣ್ಣಿನ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಳು. ಆದರೆ ಮಳೆಗೆ ಆ ಮನೆಯೂ ನೆಲಕ್ಕುರುಳಿದೆ.

This grandmother from West Bengal has been living in a toilet for a year

ವಾಸಿಸಲು ಮನೆಯಿಲ್ಲದೆ ಅಸಹಾಯಕ ಸ್ಥಿತಿಯಲ್ಲಿ ವೃದ್ಧೆ ಪಂಚಾಯಿತಿ ಮೆಟ್ಟಿಲೇರಿದ್ದಳು. ಪಂಚಾಯತ್ ಅಧಿಕಾರಿಗಳು ಭರವಸೆ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಕೊನೆಯಲ್ಲಿ ಆಕೆ ಶೌಚಾಲಯದಲ್ಲಿ ವಾಸಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಇಡೀ ದಿನ ಆಕೆ ಶೌಚಾಲಯದಲ್ಲೇ ಸಮಯ ಕಳೆಯುತ್ತಾಳೆ. ವೃದ್ಧೆ ಸುಮಾರು 1 ವರ್ಷದಿಂದ ಶೌಚಾಲಯದಲ್ಲಿ ವಾಸಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಕಳೆದ ವರ್ಷದಿಂದ 4 ಅಡಿ ಅಗಲದ 3 ಅಡಿ ಉದ್ದದ ಸ್ಲೈಸ್ ಶೌಚಾಲಯದಲ್ಲಿ ಆಕೆ ವಾಸ ಮಾಡುತ್ತಿದ್ದಾಳೆ. ಈ ಬಗ್ಗೆ ಆಡಳಿತ ಮಂಡಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ವೃದ್ಧೆಯ ಅಸಹಾಯಕತೆ ಅಕ್ಕಪಕ್ಕದವರ ಆತಂಕವನ್ನೂ ಹೆಚ್ಚಿಸಿದೆ. ವೃದ್ಧೆ ಹೇಗೋ ಬೇರೆಯವರ ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾಳೆ ಎಂಬುದು ಗ್ರಾಮದ ಜನರ ಮಾತು.

ಆದರೆ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ವೃದ್ಧೆಯ ಸಂಕಷ್ಟಕ್ಕೆ ಅಧಿಕಾರಿಗಳು ಮಾನವೀಯತೆ ತೋರಬೇಕು ಎಂದು ಗ್ರಾಮಸ್ಥರು ಕೇಳುತ್ತಿದ್ದಾರೆ. ಮಾನವೀಯ ದೃಷ್ಟಿಕೋನದಿಂದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಅವರಿಗೆ ಆಶ್ರಯಿಸಲು ಕನಿಷ್ಠ ಒಂದು ಸಣ್ಣ ಮನೆಯನ್ನಾದರೂ ಸ್ಥಾಪಿಸುವಂತೆ ಸ್ಥಳೀಯರು ವೃದ್ಧೆಗಾಗಿ ಮನವಿ ಮಾಡಿದ್ದಾರೆ.

ಇದೀಗ ಮಹಿಳೆ ಹೃದಯವಿದ್ರಾವಕ ಘಟನೆ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ದುರ್ಕು ಗ್ರಾಮ ಪಂಚಾಯತ್ ಅಧಕ್ಷ್ಯೆ ಚಂದಮೋನಿ ಕರಮುಡಿ ಪ್ರತಿಕ್ರಿಯಿಸಿದ್ದು, ನಮಗೆ ತಮ್ಮ ಬಡಾವಣೆಯಲ್ಲಿ ವೃದ್ಧೆಯೊಬ್ಬರು ಶೌಚಾಲಯದಲ್ಲಿ ವಾಸವಾಗಿರುವುದು ಗೊತ್ತಿರಲಿಲ್ಲ. ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವಿವೇಕ ರಂಗ ಮಾತನಾಡಿ, ಬಡವರಿಗಾಗಿ ಇರುವ ಯೋಜನೆಗಳನ್ನು ಬದಿಗೊತ್ತಲಾಗುತ್ತಿದೆ. ಮೇಲಾಗಿ ಬಡವರ ಆಸರೆಗಾಗಿ ಕೇಂದ್ರ ಸರಕಾರದ ಹಣದಲ್ಲಿ ನಿರ್ಮಿಸಿರುವ ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+