ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತ ವಿದ್ಯಾರ್ಥಿಗಳಿಂದ ಶಾಲಾ ಶೌಚಾಲಯ ತೊಳೆಸಿದ ಮುಖ್ಯಶಿಕ್ಷಕಿ

|
Google Oneindia Kannada News

ಚೆನ್ನೈ, ಡಿಸೆಂಬರ್‌ 2: ತಮಿಳುನಾಡಿನ ಈರೋಡ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯೊಬ್ಬರು ಪರಿಶಿಷ್ಟ ಜಾತಿಗೆ ಸೇರಿದ ಆರು ವಿದ್ಯಾರ್ಥಿಗಳನ್ನು ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದು, ಈ ಆರೋಪದ ಮೇಲೆ ತಮಿಳುನಾಡು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಐದನೇ ತರಗತಿಯ ವಿದ್ಯಾರ್ಥಿನಿಯ ತಾಯಿ ಜಯಂತಿ ಅವರು ನೀಡಿದ ದೂರಿನ ಆಧಾರದ ಮೇಲೆ, ಮುಖ್ಯ ಶಿಕ್ಷಕಿ ಎಂಎಸ್ ಗೀತಾ ರಾಣಿ ಶೌಚಾಲಯವನ್ನು ಸ್ವಚ್ಛಗೊಳಿಸಲು ಪರಿಶಿಷ್ಟ ಜಾತಿ ಮಕ್ಕಳಿಗೆ ಮಾತ್ರ ಸೂಚಿಸಿದ್ದಾರೆ.

ಅಸ್ಪೃಶ್ಯರು ಪದ ಬಳಕೆ: ಕುಮಾರಸ್ವಾಮಿ ಕ್ಷಮೆಯಾಚಿಸುವಂತೆ ದಲಿತ ಸಂಘಟನೆಗಳ ಪಟ್ಟುಅಸ್ಪೃಶ್ಯರು ಪದ ಬಳಕೆ: ಕುಮಾರಸ್ವಾಮಿ ಕ್ಷಮೆಯಾಚಿಸುವಂತೆ ದಲಿತ ಸಂಘಟನೆಗಳ ಪಟ್ಟು

ಶೌಚಾಲಯ ತೊಳೆದ ತನ್ನ ಮಗನಿಗೆ ಡೆಂಗ್ಯೂ ತಗುಲಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದ ನಂತರ ಈ ಉಲ್ಲಂಘನೆ ಬೆಳಕಿಗೆ ಬಂದಿದೆ ಎಂದು ತಾಯಿ ಹೇಳಿದ್ದಾರೆ. ಅವನಿಗೆ ಡೆಂಗ್ಯೂ ಹೇಗೆ ಬಂತು ಎಂದು ನಾನು ಅತನನ್ನು ಕೇಳಿದಾಗ ನನ್ನ ಮಗ ಪ್ರತಿದಿನ ಬ್ಲೀಚಿಂಗ್ ಪೌಡರ್ ಅನ್ನು ಹಾಕಿ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದಾಗ ಸೊಳ್ಳೆಗಳು ಕಚ್ಚಿವೆ ಎಂದು ಹೇಳಿದನು ಎಂದು ಅವರು ಹೇಳಿದರು.

The tamilnadu headmistress told to cleaned the school toilet from Dalit students

ಕಳೆದ ವಾರ ತಾಯಿಯು ಪೊರಕೆ ಮತ್ತು ಚಂಬಿನೊಂದಿಗೆ ಶೌಚಾಲಯದಿಂದ ಹೊರಬರುವುದನ್ನು ನೋಡಿದ್ದಾರೆ. ಯಾಕೆ ಎಂದು ತನ್ನ ಮಗನನ್ನು ಕೇಳಿದಾಗ ಅವನು ತನ್ನಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿದರು. ಶೌಚಾಲಯ ತೊಳೆಯಲು ಮುಖ್ಯೋಪಾಧ್ಯಾಯಿನಿ ಹೇಳಿದರು ಎಂದು ಹೇಳಿದನು. ಆ ತರಗತಿಯಲ್ಲಿ 40 ಮಕ್ಕಳು ಓದುತ್ತಿದ್ದು ಅವರಲ್ಲಿ ಹೆಚ್ಚಿನವರು ನಮ್ಮ ಪರಿಶಿಷ್ಟ ಜಾತಿಯ ಮಕ್ಕಳು. ಇದನ್ನು ಮಾಡಲು ಅವರು ನಮ್ಮ ಮಕ್ಕಳಿಗೆ ಮಾತ್ರ ಹೇಳಿದ್ದಾರೆ ಎಂದು ಆ ಬಾಲಕ ಹೇಳಿದನು.

ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ, ಪೂಜೆಗೆ ನಿರಾಕರಣೆ, ಪ್ರಕರಣ ದಾಖಲುದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ, ಪೂಜೆಗೆ ನಿರಾಕರಣೆ, ಪ್ರಕರಣ ದಾಖಲು

ಈ ಬಗ್ಗೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಪೊಲೀಸ್ ಅಧಿಕಾರಿಯೊಬ್ಬರು ಪಾಲಕರೈಯಲ್ಲಿರುವ ಪಂಚಾಯತ್ ಯೂನಿಯನ್ ಶಾಲೆಯ ಮುಖ್ಯ ಶಿಕ್ಷಕಿ ತಲೆಮರೆಸಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಲು ನಾವು ವಿಶೇಷ ತಂಡಗಳನ್ನು ರಚಿಸಿದ್ದೇವೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಇದಕ್ಕೂ ಮುಂಚೆ ವೀಡಿಯೊವೊಂದು ಓಡಾಡಿದ್ದು, ಶೌಚಾಲಯವನ್ನು ಸ್ವಚ್ಛಗೊಳಿಸಲು ಮುಖ್ಯೋಪಾಧ್ಯಾಯಿನಿ ಹೇಳಿದ್ದಾರೆ ಎಂದು ಆರೋಪಿಸಿ ಅದೇ ಶಾಲೆಯ ಇನ್ನೂ ಮೂವರು ಹುಡುಗರು ಎಂದು ಹೇಳಿರುವುದಾಗಿ ವೀಡಿಯೋ ಹೇಳಿದೆ.

English summary
A headmistress of a government school in Tamil Nadu's Erode district forced six scheduled caste students to clean the school's toilet, and the Tamil Nadu police has launched a search on this allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X