ಕೃಷ್ಣಾ ನದಿ ಹಂಚಿಕೆ : ತೆಲಂಗಾಣ ಅರ್ಜಿ ವಜಾಗೊಳಿಸಿದ ಸುಪ್ರೀಂ
ನವದೆಹಲಿ, ಜನವರಿ 9: ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ತೆಲಂಗಾಣ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ತೆಲಂಗಾಣ- ಆಂಧ್ರ ಪ್ರದೇಶ ವಿಭಜನೆಯಾದ ಮೇಲೆ ತೆಲಂಗಾಣ ಕೃಷ್ಣಾ ನದಿ ನೀರು ಸರಿಯಾಗಿ ಹಂಚಿಯಾಗಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು. ಕೃಷ್ಣಾ ನದಿ ನೀರು ಮರುಹಂಚಿಕೆಯಾಗಬೇಕು ಎಂದು ಕೇಳಿಕೊಂಡಿತ್ತು.[ಕೃಷ್ಣಾ ನದಿ ಹಂಚಿಕೆ, ನ್ಯಾಯಾಧಿಕರಣದಿಂದ ಕರ್ನಾಟಕಕ್ಕೆ ರಿಲೀಫ್]

ಸುಪ್ರೀಂ ಕೋರ್ಟ್ ಕೃಷ್ಣಾ ನ್ಯಾಯಾಧಿಕರಣ ಮೇಲ್ಮನವಿಯನ್ನು ವಿಚಾರಣೆಗೊಳಪಡಿಸಿದ್ದು, 2013ರಲ್ಲಿ ನೀಡಿದ್ದ ನದಿ ನೀರು ಹಂಚಿಕೆ ವಿಚಾರವಾಗಿ ನೀಡಿದ್ದ ತೀರ್ಪೆ ಅಂತಿಮ ಎಂದು ಸೂಚಿಸಿ ತೆಲಂಗಾಣ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.
ಇನ್ನು ಕೃಷ್ಣಾ ನದಿ ನೀರು ಕುರಿತು ತೆಲಂಗಾಣ ಅರ್ಜಿಯನ್ನು ಸಲ್ಲಿಸಿದಾಗ ಕರ್ನಾಟಕ ಮತ್ತು ಮಹಾರಾಷ್ಟ್ರ ಆಕ್ಷೇಪ ವ್ಯಕ್ತಪಡಿಸಿತ್ತು.












Click it and Unblock the Notifications