ಅಮೆಜಾನ್ ನಲ್ಲಿ ಮುಂದುವರಿದ ಗಾಂಧಿ ಭಾವಚಿತ್ರದ ಚಪ್ಪಲಿ ಮಾರಾಟ!

Posted By:
Subscribe to Oneindia Kannada

ನವದೆಹಲಿ, ಜನವರಿ 16 : ಗಾಂಧಿ ಅಭಿಮಾನಿಗಳ ಪ್ರಬಲ ವಿರೋಧದ ಹೊರತಾಗಿಯೂ ಅಮೆಜಾನ್ ಆನ್ ಲೈನ್ ಮಾರಾಟ ಕಂಪನಿಯು ತನ್ನ ಅಮೆರಿಕದ ಆವೃತ್ತಿಯ ವೆಬ್ ಸೈಟ್ ನಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರವಿರುವ ಚಪ್ಪಲಿಗಳನ್ನು ಮಾರುವುದನ್ನು ಮುಂದುವರಿಸಿದೆ.

ಕೆಲ ದಿನಗಳ ಹಿಂದೆ, ಭಾರತದ ರಾಷ್ಟ್ರೀಯ ಧ್ವಜದ ಚಿತ್ರವಿರುವ ಕಾಲೊರೆಸುಗಳನ್ನು (ಡೋರ್ ಮ್ಯಾಟ್) ಮಾರಾಟ ಮಾಡುವ ಮೂಲಕ ವಿವಾದ ಮೈಮೇಲೆಳೆದುಕೊಂಡಿದ್ದ ಅದು, ಕೇಂದ್ರದ ವಿದೇಶಾಂಗ ಸಚಿವೆಯಾದ ಸುಷ್ಮಾ ಸ್ಮರಾಜ್ ಅವರ ಎಚ್ಚರಿಕೆಯ ನಂತರ ಅದರ ಮಾರಾಟವನ್ನು ಸ್ಥಗಿತಗೊಳಿಸಿತ್ತು.

The sale of Gandhi slippers in Amazon is still on

ಆದರೆ, ಇದೀಗ, ಮಹಾತ್ಮಾ ಗಾಂಧಿಯವರ ಭಾವಚಿತ್ರವುಳ್ಳ ಚಪ್ಪಲಿಗಳ ಮಾರಾಟವು ಬೆಳಕಿಗೆ ಬಂದು ಎರಡು ದಿನಗಳಾಗಿವೆ. ವಿದೇಶಾಂಗ ಇಲಾಖೆಯೂ ಟ್ವಿಟರ್ ನಲ್ಲಿ 'ಅಮೆಜಾನ್ ಕಂಪನಿಯು ಭಾರತೀಯರ ಭಾವನೆಗಳಿಗೆ ಧಕ್ಕ ತರಕೂಡದು' ಎಂದು ಪರೋಕ್ಷವಾಗಿ ಈ ಚಪ್ಪಲಿಗಳ ಮಾರಾಟವನ್ನು ವಿರೋಧಿಸಿದೆ.

ಇನ್ನು, ಟ್ವಿಟರ್ ನಲ್ಲಂತೂ ಈ ಬಗ್ಗೆ ಭಾರೀ ವಿವಾದವೇ ಎದ್ದಿದೆ. ಆದಾಗ್ಯೂ, ಅಮೆಜಾನ್ ಕಂಪನಿಯು ಚಪ್ಪಲಿ ಮಾರಾಟವನ್ನು ಮುಂದುವರಿಸುವ ಮೂಲಕ ತನ್ನ ದಾರ್ಷ್ಯ್ಟತೆಯನ್ನೂ ಮುಂದುವರಿಸಿದೆ.

ಏತನ್ಮಧ್ಯೆ, ಕೆಲ ವೆಬ್ ಸೈಟ್ ಗಳಲ್ಲಿ ಗಾಂಧಿ ಚಪ್ಪಲಿ ಮಾರಾಟ ನಿಲ್ಲಿಸಲಾಗಿದೆ ಎಂಬ ಸುದ್ದಿಗಳು ಬಂದಿವೆಯಾದರೂ, ಮಾರಾಟ ನಿಂತಿಲ್ಲ. ಈ ಕೆಳಗಿನ ಯುಆರ್ ಎಲ್ ಲಿಂಕ್ ಉಪಯೋಗಿಸಿ, ಜಾಲತಾಣದ ವಿವಾದಾತ್ಮಕ ಮಾರಾಟದ ಪುಟ ವೀಕ್ಷಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Despite of oppositions from Gandhi followers, the sale of controversial Gandhi slippers has been contineud in Amazon.
Please Wait while comments are loading...