• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಎರಡು ಪ್ರದೇಶಗಳ ಮೇಲೆ ನಿಂತಿದೆ ಮಧ್ಯಪ್ರದೇಶದ ಭವಿಷ್ಯ

By ವಿನೋದ್ ಕುಮಾರ್ ಶುಕ್ಲಾ
|

ಭೋಪಾಲ್, ನವೆಂಬರ್ 07: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಅಸಲಿ ಯುದ್ಧ ಶುರುವಾಗುವುದೇ ಮಾಳ್ವಾ ಮತ್ತು ನಿಮಾರ್ ಪ್ರದೇಶದಿಂದ.

ದೀಪಾವಳಿ ವಿಶೇಷ ಪುರವಣಿ

ಈ ಪ್ರದೇಶದಲ್ಲಿ ಎಷ್ಟು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬುದರ ಮೇಲೆ ಆಯಾ ಪಕ್ಷದ ರಾಜಕೀಯ ಭವಿಷ್ಯ ಅಡಗಿರುತ್ತದೆ.

ಈ ಮುಖ್ಯಮಂತ್ರಿಗಿಂತ ಅವರ ಪತ್ನಿಯೇ ಶ್ರೀಮಂತರು!

ಮಾಲ್ವಾ-ನಿಮಾರ ಕ್ಷೇತ್ರದಲ್ಲಿ ಒಟ್ಟು 66 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಯಾವ ಪಕ್ಷ ಹೆಚ್ಚನ್ನು ಗೆಲ್ಲುತ್ತದೋ ಅದಕ್ಕೆ ವಿಜಯ ಮಾಲೆ ಗ್ಯಾರಂಟಿ! ಆದ್ದರಿಂದಲೇ ಮಧ್ಯಪ್ರದೇಶದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈ ಪ್ರದೇಶದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ.

56 ಸ್ಥಾನ ಗೆದ್ದಿದ್ದ ಬಿಜೆಪಿ

56 ಸ್ಥಾನ ಗೆದ್ದಿದ್ದ ಬಿಜೆಪಿ

ಕಳೆದ ವಿಧಾನಸಭಾ ಚುನಾವಣೆಯಯಲ್ಲಿ ಈ ಭಾಗದ 66 ಕ್ಷೇತ್ರಗಳಲ್ಲಿ 56 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಈ ಪ್ರದೇಶದ ಪ್ರಾಮುಖ್ಯತೆಯನ್ನು ಬಲ್ಲ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಇಲ್ಲಿಂದಲೇ ತಮ್ಮ ಪ್ರಚಾರವನ್ನೂ ಆರಂಭಿಸುವುದು ಮಾಮೂಲಾಗಿದೆ. ಈ ವರ್ಷವೂ ಈ ಭಾಗದಲ್ಲಿ ಭರ್ಜರಿ ಪ್ರಚಾರ ನಡೆಯುವ ಸಾಧ್ಯತೆ ಇದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂತಾದವರು ಇಲ್ಲಿಂದಲೇ ಪ್ರಚಾರ ಆರಂಭಿಸಲಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಧಾರ್ಮಿಕ, ಆಧಾತ್ಮ ಮುಖಂಡರ ಭೀತಿ!

ಆರೆಸ್ಸೆಸ್ ಪ್ರಾಬಲ್ಯ

ಆರೆಸ್ಸೆಸ್ ಪ್ರಾಬಲ್ಯ

ಮಾಲ್ವಾ ಪ್ರದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಬಲ್ಯ ಸಾಕಷ್ಟಿದೆ. ಹಲವು ಮುಖ್ಯಮಂತ್ರಿಗಳನ್ನು ನೀಡಿದ ಪ್ರದೇಶವೂ ಇದು. ಬಿಜೆಪಿ ಮಾಜಿ ಅಧ್ಯಕ್ಷ ಕುಶಭಾಹು ಠಾಕ್ರೆ, ಮಧ್ಯಪ್ರದೇಶ ಮುಖ್ಯಮಂತ್ರಿಗಳಾಗಿದ್ದ ಸುಂದರಲಾಲ್ ಪಾತ್ವಾ, ಕೈಲಾಶ್ ಜೋಷಿ, ವೀರೇಂದ್ರ ಸಕ್ಲೇಚಾ ಮುಂತಾದವರನ್ನು ನೀಡಿದ್ದು ಇದೇ ಪ್ರದೇಶ. ಜೊತೆಗೆ ಇಲ್ಲಿನ ಬುಡಕಟ್ಟು ಪ್ರದೇಶವಾದ ಧಾರ್, ಝಾಬುವಾ, ಅಲಿರಾಜಪುರ ಮತ್ತು ರತ್ಲಮ್ ಗಳಲ್ಲಿ ಕಾಂಗ್ರೆಸ್ ಪ್ರಭಾವ ಸಾಕಷ್ಟಿದೆ.

ಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ

ರೈತ ಹೋರಾಟಕ್ಕೆ ವೇದಿಕೆಯಾದ ಸ್ಥಳ

ರೈತ ಹೋರಾಟಕ್ಕೆ ವೇದಿಕೆಯಾದ ಸ್ಥಳ

ಇದೇ ಪ್ರದೇಶದಲ್ಲಿ ಕಳೆದ ವರ್ಷ ರೈತ ಹೋರಾಟ ಆರಂಭವಾಗಿ, ಐವರು ರೈತರು ಮೃತರಾಗಿದ್ದು. ಈ ಪ್ರದೇಶದಲ್ಲಿ ಪ್ರಾಬಲ್ಯ ಪಡೆದ ಪಾಟೀದಾರ್ ಸಮುದಾಯದೊಂದಿಗೆ ಪಾಟಿದಾರ್ ಆಂದೋಲನದ ಮುಖಂಡ ಹಾರ್ದಿಕ್ ಪಟೇಲ್ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಭಾಗದಲ್ಲಿ ಪಾಟೀದಾರ್ ಸಮುದಾಯದ 50 ಲಕ್ಷಕ್ಕೂ ಹೆಚ್ಚು ಮಂದಿ ಬದುಕುತ್ತಿದ್ದು, ಆದ್ದರಿಂದಲೇ ಈ ಭಾಗದಲ್ಲಿ 12 ಪಾಟೀದಾರ್ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಹಾರ್ದಿಕ್ ಪಟೇಲ್ ಒತ್ತಾಯಿಸಿದ್ದಾರೆ.

ಮಹತ್ವದ ಪ್ರದೇಶಗಳು

ಮಹತ್ವದ ಪ್ರದೇಶಗಳು

ಮಹಾಕೊಶಾಲ್, ಮಾಳ್ವಾ, ವಿಂಧ್ಯಪ್ರದೇಶ, ಚಂಬಲ್ ಪ್ರದೇಶಗಳು ಬಹು ಮಹತ್ವದ್ದಾಗಿವೆ. 2013 ರ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಹೆಚ್ಚುವರಿ 18 ಕ್ಷೇತ್ರಗಳು ಮಾಳ್ವಾ ಕ್ಷೇತ್ರದಿಂದ ಬಂದವು. ಮಾಳ್ವಾ ಪ್ರದೇಶದಲ್ಲಿ ಈ ಬಾರಿ 45 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಆದರೆ ಬಿಜೆಪಿ ವಿರುದ್ಧ ಇರುವ ಆಡಳಿತವಿರೋಧಿ ಅಲೆ ಅದಕ್ಕೆ ದಾರಿ ಮಾಡಿಕೊಡದಿದ್ದೀತು ಎಂಬ ಭಯ ಬಿಜೆಪಿ ಮುಖಂಡರಿಗಿದೆ.

English summary
The real battle for Madhya Pradesh Assembly is being fought in the Malwa and Nimar region of the state and it is said that whichever party wins the region actually wins the state. In the last Assembly elections, the Bharatiya Janata Party (BJP) had won 56 out of total 66 seats of the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X