ಮತದಾರರ ಪಟ್ಟಿಯಿಂದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೆಸರು ಹೊರಕ್ಕೆ
ಲಕ್ನೋ, ನವೆಂಬರ್ 18: ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ 2019 ರ ದ್ವೇಷ ಭಾಷಣ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೆಲ ದಿನಗಳ ನಂತರ ಅವರ ಹೆಸರನ್ನು ಇಲ್ಲಿನ ರಾಮ್‌ಪುರದ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷೆ ಪ್ರಕಟಗೊಂಡ ನಂತರ ಈಗಾಗಲೇ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮಾಜಿ ಸಚಿವರು ಆದ ಅಜಂ ಖಾನ್ ಡಿಸೆಂಬರ್ 5ರಂದು ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ರಾಮ್‌ಪುರ ಸದರ್ ನಗರ ಉಪಚುನಾವಣೆಯಲ್ಲಿ ಮತ ಚಲಾಯಿಸಲು ಅನರ್ಹರಾಗಿರುತ್ತಾರೆ.
ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾ ಅವರು ನೀಡಿದ ದೂರಿನ ಮೇರೆಗೆ ರಾಮ್‌ಪುರ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಅಜಂ ಖಾನ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಧಿಕಾರಿಗಳು ಅಜಂ ಖಾನ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲು ವಿವಿಧ ಕಾನೂನು ನಿಬಂಧನೆಗಳನ್ನು ಉಲ್ಲೇಖಿಸಿದ್ದಾರೆ.

ಚುನಾವಣಾ ನೋಂದಣಿ ಅಧಿಕಾರಿಗಳು ತಮ್ಮ ನಿರ್ಧಾರದಲ್ಲಿ ಅರ್ಜಿದಾರರಾದ ಆಕಾಶ್ ಸಕ್ಸೇನಾ ಸಲ್ಲಿಸಿದ ಅರ್ಜಿಯ ಜೊತೆಗೆ ನ್ಯಾಯಾಲಯದ ತೀರ್ಪು ಹಾಗೂ ಆದೇಶದ ಪ್ರತಿಗಳು ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1950 ಮತ್ತು ಪ್ರಾತಿನಿಧ್ಯದ ಸಂಬಂಧಿತ ನಿಬಂಧನೆಗಳನ್ನು ಪರಿಗಣಿಸಿದ ಬಳಿಕ ಜನಪ್ರತಿನಿಧಿಗಳ ಕಾಯ್ದೆ 1951, ಮೊಹಮ್ಮದ್ ಅಜಂ ಖಾನ್ ಅವರ ಹೆಸರು ತೆಗೆಯಲು ಸೂಕ್ತವಾಗಿದೆ. ಕಾನೂನಿನ ಪ್ರಕಾರ ರಾಂಪುರದ ವಿಧಾನಸಭೆ ಕ್ರಮ ಸಂಖ್ಯೆ 333ರಿಂದ ಅಜಂ ಖಾನ್ ಹೆಸರನ್ನು ತಕ್ಷಣವೇ ತೆಗೆಯಬೇಕು ಎಂದು ಅದು ಹೇಳಿದೆ.
ರಾಮ್‌ಪುರ ಶಾಸಕರಾಗಿದ್ದ ಅಜಂ ಖಾನ್ ಅವರನ್ನು ದ್ವೇಷ ಭಾಷಣ ಪ್ರಕರಣದಲ್ಲಿ ಕಳೆದ ತಿಂಗಳು ಶಿಕ್ಷೆ ಪ್ರಕಟವಾದ ನಂತರ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಉಪ ಚುನಾವಣೆಯಲ್ಲಿ ಸದರ್ ಸ್ಥಾನದಿಂದ ತನ್ನ ಆಪ್ತ ಅಸೀಮ್ ರಾಜಾ ಅವರನ್ನು ಗೆಲ್ಲಿಸಲು ಎಸ್‌ಪಿಯ ಹಿರಿಯ ನಾಯಕರಾದ ಅಜಂ ಖಾನ್ ಬಿಜೆಪಿಯಿಂದ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಇದು ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ.
ಸದರ್ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಜಂ ಖಾನ್ ಅಸೀಮಾ ರಾಜಾ ಅವರ ಜೊತೆಗಿದ್ದರು. 2019ರ ದ್ವೇಷ ಭಾಷಣ ಪ್ರಕರಣದಲ್ಲಿ ರಾಮ್‌ಪುರ ವಿಶೇಷ ನ್ಯಾಯಾಲಯವು ಕಳೆದ ತಿಂಗಳು ಅಜಂ ಖಾನ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದರ ಬೆನ್ನಲ್ಲೇ ವಿಧಾನಸಭೆಯ ಸಚಿವಾಲಯ ಶಾಸಕ ಸ್ಥಾನ ತೆರವಾಗಿದೆ ಎಂದು ಘೋಷಿಸಿತ್ತು.

2013ರ ಮುಜಾಫರ್‌ನಗರ ಗಲಭೆ ಪ್ರಕರಣದಲ್ಲಿ ದೋಷಿಯಾಗಿದ್ದ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ಅವರನ್ನು ಅನರ್ಹಗೊಳಿಸಿದ ನಂತರ ತೆರವಾಗಿದ್ದ ಕ್ಷೇತ್ರ ಹಾಗೂ ಎಸ್‌ಪಿ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಯಾದವ್ ಮತ್ತು ಮುಜಾಫರ್‌ನಗರದ ಖತೌಲಿ ಅವರು ಪ್ರತಿನಿಧಿಸುತ್ತಿದ್ದ ಮೈನ್‌ಪುರಿ ಲೋಕಸಭಾ ಕ್ಷೇತ್ರ ಸೇರಿದಂತೆ ಇತರ ಕೆಲವು ಕ್ಷೇತ್ರಗಳ ಜೊತೆಗೆ ಚುನಾವಣಾ ಆಯೋಗವು ಅಲ್ಲಿ ಉಪಚುನಾವಣೆ ನಡೆಸುತ್ತಿದೆ.
ಹಿರಿಯ ಎಸ್‌ಪಿ ನಾಯಕರಾದ ಅಜಂ ಖಾನ್ ಇತ್ತೀಚೆಗಿನ ವಿಧಾನಸಭಾ ಚುನಾವಣೆಯಲ್ಲಿ ಹತ್ತನೇ ಬಾರಿಗೆ ರಾಮ್‌ಪುರ ಸದರ್ ಸ್ಥಾನವನ್ನು ಗೆದ್ದಿದ್ದರು. ಈಗ ಆಕಾಶ್ ಸಕ್ಸೇನಾ ರಾಮ್‌ಪುರ ಸದರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.












Click it and Unblock the Notifications