ವೈರಲ್ ವಿಡಿಯೋ: ನೋಡ ನೋಡುತ್ತಿದ್ದಂತೆಯೇ ಸಮುದ್ರದ ಪಾಲಾದ ಯುವಕ
Recommended Video

ಗೋವಾ, ಜೂನ್.18: ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಪ್ರವಾಸಿಗರು ಸಮುದ್ರ ಪಾಲಾಗಿರುವ ಘಟನೆ ಭಾನುವಾರ ಹಾಗೂ ಸೋಮವಾರ ನಡೆದಿದೆ.
ನಿನ್ನೆ ಸಂಜೆ ಭಾನುವಾರ ಗೋವಾದ ಬಾಗಾ ಬೀಚ್ ನಲ್ಲಿ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸಮುದ್ರ ಬದಿಯಲ್ಲಿರುವ ಬಂಡೆಯ ಮೇಲೆ ಕುಳಿತು ಅಲೆಗಳನ್ನು ವೀಕ್ಷಿಸುತ್ತಾ ಕುಳಿತಿದ್ದರು. ಈ ಸಮಯದಲ್ಲಿ ಧೂತ್ತನೆ ಬಂದ ದೈತ್ಯ ಅಲೆಯೊಂದು ಯುವಕರ ಮೇಲೆ ಅಪ್ಪಳಿಸಿತು.
ಆ ಮೂವರಲ್ಲಿ ಓರ್ವ ಯುವಕ, ಯುವತಿ ಆ ಅಲೆಯಿಂದ ತಕ್ಷಣ ಬಚವಾದರು. ಆದರೆ ಒಬ್ಬನನ್ನು ಮಾತ್ರ ಆ ಅಲೆ ಕೊಚ್ಚಿಕೊಂಡು ಹೋಗಿದೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ಸಮುದ್ರದ ಅಲೆಯಲ್ಲಿ ಕೊಚ್ಚಿಕೊಂಡು ಹೋದ ಯುವಕನ ಹೆಸರು ದಿನೇಶ ಕುಮಾರ ಎಂದು ತಿಳಿದು ಬಂದಿದೆ.
ಹಾಗೆಯೇ ಇಂದು ಬೆಳಗ್ಗೆ ಗೋವಾದ ಸ್ಕ್ವೇರ್ ಬೀಚ್ ನಲ್ಲಿ ಇಂದು ಬೆಳಗ್ಗೆ ಸನ್ ಸೆಟ್ ನೋಡಲು ಹೋದಾಗ ಶಶಿಕುಮಾರ್ ಎಂಬಾತನೂ ಸಮುದ್ರ ಪಾಲಾಗಿದ್ದಾನೆ.
ಮಳೆಗಾಲದಲ್ಲಿ ಸಮುದ್ರ ಅಲೆಯನ್ನು ಹತ್ತಿರದಿಂದ ನೋಡಲು ಹೋದರೆ ಇಂತಹ ದುರಂತಗಳು ಸಂಭವಿಸುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಮುದ್ರ ಪಾಲಾದ ಇಬ್ಬರು ಪ್ರವಾಸಿಗರು ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದೆ.












Click it and Unblock the Notifications