ಟ್ವಿಟ್ಟರ್ ನಲ್ಲಿ #ThankyouDoctor ವೈದ್ಯರಿಗೆ ನಮೋಃ ನಮಃ
ಬೆಂಗಳೂರು, ಜುಲೈ 01: 'ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ರೋಗಿಗಳಿಗೆ ಹೊಸ ಬದುಕು ನೀಡುವ ವೈದ್ಯ ವೃತ್ತಿಯನ್ನು ದೇವರ ಕೆಲಸಕ್ಕೆ ಹೋಲಿಸುತ್ತಾರೆ. ಅದಕ್ಕೆಂದೇ ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಚಾಲ್ತಿಯಲ್ಲಿದೆ. ಇಂದು ರಾಷ್ಟ್ರೀಯ ವೈದ್ಯ ದಿನದ ಅಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ವೈದ್ಯರಿಗೆ ಶುಭಹಾರೈಸಿದ್ದಾರೆ.
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬಿಧನ್ ಚಂದ್ರ ರಾಯ್ ಅವರ ಹುಟ್ಟಿದ ದಿನವಾದ ಜುಲೈ 1 (1882)ಅನ್ನು ರಾಷ್ಟ್ರೀಯ ವೈದ್ಯ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತ ರತ್ನ ಬಿಸಿ ರಾಯ್ ಪ್ರಖ್ಯಾತ ವೈದ್ಯರು. ಮಾತ್ರವಲ್ಲ, ಮಹಾತ್ಮ ಗಾಂಧೀಜಿಯವರ ಆಪ್ತಮಿತ್ರರೂ, ಅವರ ಖಾಸಗಿ ವೈದ್ಯರೂ ಆಗಿದ್ದ ರಾಯ್, ಸ್ವಾತಂತ್ರ್ಯ ಹೋರಾಟಗಾರರೂ ಹೌದು. ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಕಾಣಿಕೆಯನ್ನು ಮನಗಂಡು ಅವರ ಹುಟ್ಟಿದ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಇನ್ನೂ ಅಚ್ಚರಿಯ ವಿಷಯ ಎಂದರೆ ಅವರು ಮರಣ ಹೊಂದಿದ ದಿನವೂ ಜುಲೈ 1(1962)!
ಡಾ.ಬಿದನ್ ಚಂದ್ರ ರಾಯ್ ಅವರು ಲಂಡನ್ನಿನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿ ಪಡೆದ ನಂತರ ಭಾರತದಲ್ಲಿ ವೈದ್ಯ ವೃತ್ತಿ ಆರಂಭಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ 14 ವರ್ಷ ಕರ್ತವ್ಯ ನಿಭಾಯಿಸಿದ ರಾಯ್ ಅವರು ಸಿಎಂ ಆಗಿದ್ದಾಗಲೂ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು.
|
ವೈದ್ಯರಿಗೆ ಶುಭಹಾರೈಸಿದ ಟ್ವೀಟ್ ಲೋಕ
ವೈದ್ಯರಿಗೆ ಶುಭಹಾರೈಸಿದ ಟ್ವೀಟ್ ಲೋಕ, ಬಡವ, ಬಲ್ಲಿದರೆನ್ನದೆ ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುತ್ತಾ, ಸೇವಾ ಮನೋಭಾವದಲ್ಲಿ ಎಲ್ಲರನ್ನು ಕಾಣುವ ವೈದ್ಯರಿಗೆ ನಮೋಃ ನಮಃ
|
ಡಾ. ಬಿ.ಸಿ ರಾಯ್ ಅವರ ಸ್ಮರಣೆಗಾಗಿ ಈ ದಿನ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಡಾ. ಬಿ.ಸಿ ರಾಯ್ ಅವರು, 14 ವರ್ಷ ಕರ್ತವ್ಯ ನಿಭಾಯಿಸಿದ ರಾಯ್ ಅವರು ಸಿಎಂ ಆಗಿದ್ದಾಗಲೂ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು.
|
ಅಹಮದಾಬಾದ್ ಲೋಕಸಭೆ ಸಂಸದ
ಅಹಮದಾಬಾದ್ ಲೋಕಸಭೆ ಸಂಸದ, ಸರ್ಜನ್ ಆಗಿದ್ದ ಡಾ. ಕಿರೀಟ್ ಸೋಲಂಕಿ ಅವರು ಟ್ವೀಟ್ ಮಾಡಿ, ವೈದ್ಯರ ವೃತ್ತಿ ಶ್ರೇಷ್ಠವಾದದ್ದು ಎಂದಿದ್ದಾರೆ.
|
ಅಪೊಲೋ ಆಸ್ಪತ್ರೆಯಿಂದ ಸಂದೇಶ
ವೈದ್ಯರ ಬಗ್ಗೆ ಅನಾರೋಗ್ಯ ಪೀಡಿತರಾದವರು ಹೇಳಿರುವ ಮಾತುಗಳನ್ನು ಟ್ವೀಟ್ ಮಾಡಿದ ಅಪೋಲೋ ಆಸ್ಪತ್ರೆ.
|
ವಿವಿಧ ಸಂಸ್ಥೆಗಳಿಂದ ಡಾಕ್ಟರ್ಸ್ ಡೇ ಅಚರಣೆ
ನಿಮ್ಮ ವೈದ್ಯರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನಾಡಿ, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೂ ಬದಿಗಿಟ್ಟು, ರೋಗಿಗಳ ಆರೋಗ್ಯಕ್ಕಾಗಿ ಅವಿರತವಾಗಿ ಹೋರಾಡುವ ಎಲ್ಲ ವೈದ್ಯರಿಗೂ ವೈದ್ಯ ದಿನದ ಶುಭಾಶಯಗಳು












Click it and Unblock the Notifications