ಯೋಧನ ರುಂಡ ಕತ್ತರಿಸಿದ ಉಗ್ರರಿಗೆ ತಕ್ಕ ಉತ್ತರ ಸಿಗಲಿದೆ: ಸೇನೆ

Posted By:
Subscribe to Oneindia Kannada

ಶ್ರೀನಗರ, ಅಕ್ಟೋಬರ್ 29: ಪಾಕಿಸ್ತಾನ ಪ್ರೇರಿತ ಉಗ್ರರು ಭಾರತೀಯ ಸೇನಾಪಡೆಯ ಯೋಧನನ್ನು ಗುಂಡಿಟ್ಟು ಹತ್ಯೆ ಮಾಡಿ ಆತನ ಶವವನ್ನು ತುಂಡರಿಸಿದ ಘಟನೆ ಗಡಿ ನಿಯಂತ್ರಣಾ ರೇಖೆ(ಎಲ್ ಒಸಿ) ಬಳಿ ನಡೆದಿದೆ. ಕುಪ್ವಾರದ ಮಚ್ಲಿ ಸೆಕ್ಟರ್ ನಲ್ಲಿ ನಡೆದ ಈ ಘಟನೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಭಾರತೀಯ ಸೇನೆ ಹೇಳಿದೆ.

ಶನಿವಾರ ಬೆಳಗ್ಗೆಯಿಂದಲೇ ಕುಪ್ವಾರದ ಅನೇಕ ಕಡೆಗಳಲ್ಲಿ ತೀವ್ರ ಗುಂಡಿನ ಚಕಮಕಿ ಆರಂಭವಾಗಿದೆ.

ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚ್ಲಿ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಒಳ ನುಸುಳುತ್ತಿದ್ದ ಉಗ್ರರು ಹಾಗೂ ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿಯಲ್ಲಿ ಓರ್ವ ಭಾರತೀಯ ಯೋಧ ಮೃತಪಟ್ಟಿದ್ದರು. ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿತ್ತು.[ಯೋಧನ ದೇಹವನ್ನು ಛಿದ್ರಗೊಳಿಸಿ ಗಡಿಯಲ್ಲಿ ಬಿಸಾಕಿದ ಪಾಕಿಗಳು]

Terrorists mutilate body of Indian soldier; 'will give appropriate response', says Army

ಮಿಕ್ಕ ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಪರಾರಿಯಾಗಿದ್ದರು.ಈ ಘಟನೆಯಲ್ಲಿ ಭಾರತೀಯ ಯೋಧನನ್ನು ಕೊಂದ ಉಗ್ರರು ಆತನ ದೇಹವನ್ನು ತುಂಡರಿಸಿ, ಶವವನ್ನು ವಿರೂಪಗೊಳಿಸಿರುವ ಘಟನೆ ನಡೆದಿತ್ತು. ಈ ಘಟನೆಗೆ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ಹೇಳಲಾಗುವುದು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An Army jawan was killed on Friday in an encounter with terrorists who later mutilated his body near the Line of Control (LoC) in Macchil sector of Kupwara district of Kashmir.
Please Wait while comments are loading...