ಕುಪ್ವಾರಾ ದಾಳಿ: ಅಧಿಕಾರಿ ಸೇರಿ ಸೇನೆಯ ಮೂವರ ಬಲಿ, 2 ಉಗ್ರರ ಹತ್ಯೆ
ಗಡಿ ನಿಯಂತ್ರಣಾ ರೇಖೆಯ ಬಳಿಯಿರುವ ಕುಪ್ವಾರಾ ಪ್ರಾಂತ್ಯದ ಚೋಕಿಬಾಲ್ ಎಂಬಲ್ಲಿ ಇರುವ ಸೇನಾ ಕ್ಯಾಂಪ್ ಮೇಲೆ ಬೆಳಗಿನ ಜಾವ 4 ಗಂಟೆಗೆ ಈ ದಾಳಿ ನಡೆದಿದೆ.
ಶ್ರೀನಗರ, ಏಪ್ರಿಲ್ 27: ಜಮ್ಮು ಕಾಶ್ಮೀರದಲ್ಲಿರುವ ಭಾರತೀಯ ಸೇನಾ ಕ್ಯಾಂಪ್ ಒಂದರ ಮೇಲೆ ಗುರುವಾರ ಮುಂಜಾನೆ ಉಗ್ರವಾದಿಗಳ ದಾಳಿ ನಡೆದಿದ್ದು, ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.
ಆದರೆ, ಇದೇ ವೇಳೆ ಒಬ್ಬ ಸೇನಾಧಿಕಾರಿ ಸೇರಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಮೂಲಗಳ ಪ್ರಕಾರ, ಗಡಿ ನಿಯಂತ್ರಣಾ ರೇಖೆಯ ಬಳಿಯಿರುವ ಕುಪ್ವಾರಾ ಪ್ರಾಂತ್ಯದ ಚೋಕಿಬಾಲ್ ಎಂಬಲ್ಲಿ ಇರುವ ಸೇನಾ ಕ್ಯಾಂಪ್ ಮೇಲೆ ಬೆಳಗಿನ ಜಾವ 4 ಗಂಟೆಗೆ ಈ ದಾಳಿ ನಡೆದಿದೆ.

ಆಗ ಪಹರೆ ಕಾಯುತ್ತಿದ್ದ ಯೋಧರು ಪ್ರತಿ ಗುಂಡಿನ ದಾಳಿ ನಡೆಸಿದ್ದು, ಈ ಗುಂಡಿನ ಸದ್ದು ಕೇಳಿದ ಉಳಿದ ಸೈನಿಕರೂ ತಕ್ಷಣವೇ ಜಾಗೃತರಾಗಿ ಪ್ರತಿ ದಾಳಿ ನಡೆಸಿದ್ದಾರೆ.
ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇಂಥ ಅನಿರೀಕ್ಷಿತ ದಾಳಿಗಳ ಬಗ್ಗೆ ಮೊದಲ ಎಚ್ಚರ ವಹಿಸಿದ್ದರಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಮೂಲಗಳು ಹೇಳಿದ್ದು, ಗುಂಡಿನ ಚಕಮಕಿ ಇನ್ನೂ ಜಾರಿಯಲ್ಲಿದೆ.












Click it and Unblock the Notifications