ಸೇನಾ ನೆಲೆ ಮೇಲೆ ಉಗ್ರರದಾಳಿ: ಓರ್ವ ಭಾರತೀಯ ಸೈನಿಕ ಹುತಾತ್ಮ
ಸುಜ್ವಾನ್, ಫೆಬ್ರವರಿ 10: ಭಾರತೀಯ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಓರ್ವ ಸೈನಕ ಹುತಾತ್ಮರಾದ ಘಟನೆ ಇಂದು(ಫೆ.10) ಬೆಳಿಗ್ಗೆ ಜಮ್ಮು ಕಾಶ್ಮೀರದ ಸುಜ್ವಾನ್ ಪ್ರದೇಶದಲ್ಲಿ ನಡೆದಿದೆ.
ಬೆಳಿಗ್ಗೆ 4:45 ರ ಸುಮಾರಿಗೆ ಆರ್ಮಿ ಕ್ಯಾಂಪ್ ನ ಗೇಟ್ ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ ಭಯೋತ್ಪಾದಕರು ಶಿಬಿರದ ಫ್ಯಾಮಿಲಿ ಕ್ವಾಟ್ರಸ್ ಒಳಹೊಕ್ಕಿದ್ದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯೂ ಪ್ರತಿದಾಳಿ ನಡೆಸಿದ್ದು, ಚಕಮಕಿಯ ನಡುವೆ ಓರ್ವ ಭಾರತೀಯ ಸೈನಿಕ ಹುತಾತ್ಮರಾಗಿದ್ದಾರೆ.

ಹುತಾತ್ಮ ಸೈನಿಕರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಸೆರೆ ಹಿಡಿಯುವ ಅಥವಾ ಅಲ್ಲಿಯೇ ಬಲಿಹಾಕುವ ಪ್ರಯತ್ನ ನಡೆಯುತ್ತಿದೆ. ಕಾರ್ಯಾಚರಣೆ ಮುಂದುವರಿದಿದೆ. ದಾಳಿ ನಡೆಸಿದ ಭಯೋತ್ಪಾದಕರು ಯಾವ ಉಗ್ರ ಸಂಘಟನೆಗೆ ಸೇರಿದವರೆಂಬ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications