ಲಿಯಾಂಡರ್ ಪೇಸ್ ಆಗಲಿದ್ದಾರೆ ಪದ್ಮಭೂಷಣ ಪ್ರಾಯ
ನವದೆಹಲಿ, ನ.21: ಕ್ರೀಡಾ ಕ್ಷೇತ್ರದಿಂದ ಮತ್ತೊಂದು ಸಂತಸ ಸುದ್ದಿ ಬಂದಿದೆ. ಭಾರತದ ಕಂಡ ಅದ್ಭುತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಈ ಬಾರಿ ಪದ್ಮಭೂಷಣ ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ. ಕಳೆದ ವರ್ಷ ನಮ್ಮ ಕ್ರಿಕೆಟ್ ಕಲಿ ರಾಹುಲ್ ದ್ರಾವಿಡ್ ಅವರಿಗೆ ಪದ್ಮಭೂಷಣ ಸಂದಾಯವಾಗಿತ್ತು.
ಹೌದು ಮುಂದಿನ ಜನವರಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೋಲ್ಕೊತ್ತಾದ ಲಿಯಾಂಡರ್ ಪೇಸ್ (Leander Adrian Paes) ಅವರಿಗೆ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿ ಎಂದು ಕೇಂದ್ರ ಕ್ರೀಡಾ ಸಚಿವಾಲಯವು ಅವರ ಹೆಸರನ್ನು ಅನುಮೋದನೆ ಮಾಡಿ ಪತ್ರ ಬರೆದಿದೆ. ಪತ್ರದಲ್ಲಿ ಪದ್ಮಭೂಷಣ ಪ್ರಶಸ್ತಿಗೆ Tennis star ಪೇಸ್ ಅವರೊಬ್ಬರದೇ ಹೆಸರು ಕಾಣಿಸಿಕೊಂಡಿರುವುದರಿಂದ ಅವರೀಬಾರಿ ಪದ್ಮಭೂಷಣ ಪುರಸ್ಕೃತರಾಗಲಿದ್ದಾರೆ ಎಂದು ಭಾವಿಸಬಹುದಾಗಿದೆ.

ಸ್ವಲ್ಪ ರಾಜಕೀಯ ಹೇಳುವುದಾದರೆ Balancing actಗೆ ಇಳಿದಿರುವ ಯುಪಿಎ ಮೈತ್ರಿಕೂಟದ ಕೇಂದ್ರ ಸರಕಾರ ಕೇವಲ ಕ್ರಿಕೆಟ್ಟಿಗೆ ಮಣೆ ಹಾಕುವುದು ತರವಲ್ಲ ಎಂದು ಭಾವಿಸಿ ಟೆನಿಸ್ ನತ್ತಲೂ ಕಣ್ಣುಹಾಯಿಸಿದೆ. ಹಾಗಯೇ ಪಶ್ಚಿಮ ಬಂಗಾಳದ ದೀದಿಯನ್ನು ಸಂಪ್ರೀತಗೊಳಿಸುವ ಸಲುವಾಗಿಯೂ ಈ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಜತೆಗೆ ಫುಟ್ಬಾಲಿಗ ಅಶುತೋಷ್ ಘೋಷ್, ಟೇಬಲ್ ಟೆನಿಸ್ ಪ್ರತಿಭೆ ಇಂದುಪುರಿ ಅವರುಗಳಿಗೆ ಪದ್ಮಶ್ರೀ ದಕ್ಕುವ ಸಾಧ್ಯತೆಯಿದೆ.
Politics apart, ಯಾರು ಏನೇ ಹೇಳಲಿ ಲಿಯಾಂಡರ್ ಭಾರತ ಕಂಡ ಸರ್ವಶ್ರೇಷ್ಠ ಆಟಗಾರ. ಭಾರತ ರತ್ನ ಸಚಿನ್ ರಮೇಶ್ ತೆಂಡೂಲ್ಕರ್ ಅವರಿಗೂ ಲಿಯಾಂಡರ್ ಗೂ ಬಹಳಷ್ಟು ಸಾಮ್ಯತೆ ಇದೆ. ಇಬ್ಬರೂ ಸಮಕಾಲೀನರೇ. ಅಂದರೆ ಇಬ್ಬರಿಗೂ 40ರ ವಯಸ್ಸು. ಇಬ್ಬರೂ 24 ವರ್ಷಗಳಿಂದ ಅವರವರ ಕ್ರೀಡೆಗಳನ್ನೇ ಉಸಿರಾಗಿಸಿಕೊಂಡಿದ್ದಾರೆ.
ಜೆಕ್ ರಿಪಬ್ಲಿಕನ್ ಆಟಗಾರನ ಜತೆ ಇತ್ತೀಚೆಗೆ ಅಮೆರಿಕ ಮುಕ್ತ ಡಬಲ್ಸ್ ಪಟ್ಟವನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿರುವ ಲಿಯಾಂಡರ್ ಪೇಸ್, ರಮಾನಾಥನ್ ಕೃಷ್ಣ್ ನಂತರ (1967) ಟೆನಿಸ್ ಕ್ರೀಡೆಯಲ್ಲಿ ಪದ್ಮಭೂಷಣ ಪ್ರಾಯರಾಗುತ್ತಿದ್ದಾರೆ. (ಚಿತ್ರ ಕೃಪೆ)
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications