Get Updates
Get notified of breaking news, exclusive insights, and must-see stories!

ನೂರಾರು ವರ್ಷಗಳ ಪುರಾತನ ವಿಗ್ರಹಗಳು ಕೇಂದ್ರದಿಂದ ತಮಿಳುನಾಡಿಗೆ ಹಸ್ತಾಂತರ

ನವದೆಹಲಿ, ಜೂನ್ 2: ತಮಿಳುನಾಡಿನ ವಿವಿಧ ದೇಗುಲಗಳಿಂದ ಕಳುವಾಗಿದ್ದ ಪುರಾತನ ಕಾಲದ ಕೆಲ ವಿಗ್ರಹಗಳನ್ನು ಕೇಂದ್ರ ಸರಕಾರ ಮರಳಿಪಡೆಯುವಲ್ಲಿ ಯಶಸ್ವಿಯಾಗಿದೆ. ಇಂಥ 10ಕ್ಕೂ ಹೆಚ್ಚು ವಿಗ್ರಹಗಳನ್ನು ನಿನ್ನೆ ಬುಧವಾರ ತಮಿಳುನಾಡು ಸರಕಾರಕ್ಕೆ ಕೇಂದ್ರ ಸರ್ಕಾರ ಹಸ್ತಾಂತರಿಸಿದೆ.

ಅರವತ್ತರ ದಶಕದಿಂದ ಹಿಡಿದು 2008ರವರೆಗೆ ಈ ಹತ್ತು ವಿಗ್ರಹಗಳನ್ನು ತಮಿಳುನಾಡಿನ ವಿವಿಧ ದೇವಸ್ಥಾನಗಳಿಂದ ಕಳುವು ಮಾಡಿ ಅದನ್ನು ವಿದೇಶಗಳಲ್ಲಿ ಮಾರಿದ್ದರು. ಅಮೆರಿಕದಲ್ಲಿ ಆರು ಮತ್ತು ಆಸ್ಟ್ರೇಲಿಯಾದಲ್ಲಿ 4 ವಿಗ್ರಹಗಳು ಸಿಕ್ಕಿವೆ. ಕಳೆದ ಮೂರು ವರ್ಷಗಳಲ್ಲಿ ಈ ಹತ್ತು ವಿಗ್ರಹಗಳನ್ನು ಕೇಂದ್ರ ಸರಕಾರ ಮರಳಿಪಡೆಯುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ 10ನೇ ಶತಮಾನದಷ್ಟು ಹಳೆಯ ವಿಗ್ರಹಗಳೂ ಇವೆ.

ತಿರುನೆಲ್ವೇಲಿಯ ನಾಲ್ಕು ವಿಗ್ರಹಗಳು:
ತಿರುನೆಲ್ವೇಲಿಯ ದೇವಸ್ಥಾನವೊಂದರಿಂದ 1994ರಲ್ಲಿ ದ್ವಾರಪಾಲಕರ ಕಲ್ಲಿನ ಶಿಲೆಗಳು ಕಳುವಾಗಿದ್ದವು. ಇವು 15 ಅಥವಾ 16ನೇ ಶತಮಾನಕ್ಕೆ ಸೇರಿದ್ದವಾಗಿವೆ. 2020ರಲ್ಲಿ ಆಸ್ಟ್ರೇಲಿಯಾದಿಂದ ಇವುಗಳನ್ನು ಹಿಂಪಡೆಯಲಾಗಿದೆ.

Ten Stolen Idols Handed Over To Tamil Nadu Govt By Centre

ಇದೇ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ನರಸಿಂಗನದರ ಸ್ವಾಮಿ ದೇವಸ್ಥಾನದಲ್ಲಿದ್ದ ಕನಕಲಮೂರ್ತಿ ಮತ್ತು ನಂದಿಕೇಶವನ ಎರಡು ಲೋಹ ವಿಗ್ರಹಗಳು 1985ರಲ್ಲಿ ಕಳುವಾಗಿದ್ದವು. ಇವು ಅಮೆರಿಕದಲ್ಲಿ ಸಿಕ್ಕಿದ್ದು, ಅಲ್ಲಿಂದ ಮರಳಿಪಡೆಯಲಾಗಿದೆ.

ತಂಜಾವೂರ್‌ನ ಮೂರು ವಿಗ್ರಹಗಳು:
ತಂಜಾವೂರ್ ಜಿಲ್ಲೆಯ ಪುಣ್ಣೈನಲ್ಲೂರ್ ಅರುಲ್‌ಮಿಗು ಮಾರಿಯಮ್ಮನ್ ದೇವಸ್ಥಾನದಿಂದ 11ನೇ ಶತಮಾನದ ಹಳೆಯ ನಟರಾಜನ ಕಂಚಿನ ವಿಗ್ರಹ ಅರವತ್ತರ ದಶಕದಲ್ಲಿ ಕಳುವಾಗಿತ್ತು. ಇದು ನ್ಯೂಯಾರ್ಕ್‌ನ ಏಷ್ಯಾ ಸೊಸೈಟಿ ಮ್ಯೂಸಿಯಂನಲ್ಲಿ ಸಿಕ್ಕಿದೆ. ತಂಜಾವೂರ್‌ನ ವಾನಮಿಗನಧರ ಸ್ವಾಮಿ ದೇವಸ್ಥಾನದಲ್ಲಿದ್ದ ಶಿವ ಮತ್ತು ಪಾರ್ವತಿಯವರ ಕಂಚಿನ ವಿಗ್ರಹಗಳು ಅಮೆರಿಕದ ಇಂಡಿಯಾನದ ಮ್ಯೂಸಿಯಂವೊಂದರಲ್ಲಿ ಪತ್ತೆಯಾಗಿದೆ.

ಅರಿಯಾಲೂರ್‌ನ ಎರಡು ವಿಗ್ರಹಗಳು:
ಅರಿಯಾಲೂರು ಜಿಲ್ಲೆಯ ಸುತ್ತಮಲ್ಲಿ ಗ್ರಾಮದಲ್ಲಿರುವ ವರದರಾಜ ಪೆರುಮಾಳ್ ದೇವಸ್ಥಾನದಿಂದ ನಾಪತ್ತೆಯಾಗಿದ್ದ ನಾಲ್ಕು ಕೈಗಳ ವಿಷ್ಣು ಮತ್ತು ಶ್ರೀ ದೇವಿಯರ ವಿಗ್ರಹಗಳು ನ್ಯೂಯಾರ್ಕ್‌ನ ವಸ್ತುಸಂಗ್ರಹಾಲಯವೊಂದರಲ್ಲಿ ಸಿಕ್ಕಿದ್ದವು.

Ten Stolen Idols Handed Over To Tamil Nadu Govt By Centre

ನಾಗಪಟ್ಟಿಣಂನಿಂದ ಎರಡು ವಿಗ್ರಹಗಳು:
ನಾಗಪಟ್ಟಿಣಂ ಜಿಲ್ಲೆಯ ದೇವಸ್ಥಾನಗಳಿಂದ ಸಂಬಂದರ್ ಋಷಿಯ ಬಾಲಾವತಾರದ ಎರಡು ಲೋಹ ವಿಗ್ರಹಗಳು ಕಳುವಾಗಿದ್ದವು. ಇದರಲ್ಲಿ ಒಂದು ಸಯವಣೀಸ್ವರರ್ ದೇವಸ್ಥಾನದಿಂದ ನಾಪತ್ತೆಯಾಗಿತ್ತು. ಆಸ್ಟ್ರೇಲಿಯಾ ಸರಕಾರ ಈ ಎರಡು ವಿಗ್ರಹಗಳನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

ಮೋದಿ ಅವಧಿಯಲ್ಲಿ ಅತಿಹೆಚ್ಚು:
ನರೇಂದ್ರ ಮೋದಿ ನೇತೃತ್ವದ ಆಡಳಿತದ ಅವಧಿಯಲ್ಲಿ ಅತಿ ಹೆಚ್ಚು ಕಳುವು ವಿಗ್ರಹಗಳನ್ನು ಹಿಂಪಡೆಯಲಾಗಿದೆ ಎಂದು ಈ ವೇಳೆ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮಾಹಿತಿ ನೀಡಿದರು. ಇವರ ಪ್ರಕಾರ, 2014ರಿಂದ ಇಲ್ಲಿಯವರೆಗೆ ಇಂಥ 238 ವಸ್ತುಗಳನ್ನು ಮರಳಿ ದೇಶಕ್ಕೆ ತರಲಾಗಿದೆ. ಆದರೆ, 2014ಕ್ಕೆ ಮುಂಚೆ ಕೇವಲ 13 ಪುರಾತನ ವಸ್ತುಗಳು ಮಾತ್ರ ಭಾರತಕ್ಕೆ ಮರಳಿದ್ದವು ಎನ್ನಲಾಗಿದೆ.

ಮ್ಯೂಸಿಯಂನಲ್ಲಿ ಸಂಸ್ಕೃತಿ ಬೇಡ:
"ನಮ್ಮ ಸಂಸ್ಕೃತಿಯು ಮ್ಯೂಸಿಯಂನಲ್ಲಿ ಪ್ರದರ್ಶನವಾಗುವುದಕ್ಕಿಂತ ಜನಜೀವನದಲ್ಲಿ ಬಳಕೆ ಆಗಬೇಕು ಎಂಬುದು ನಮ್ಮ ಪ್ರಯತ್ನ" ಎಂದು ಹೇಳಿದ ಸಚಿವರು, ಪುರಾತನ ವಸ್ತುಗಳು ಮರಳಿ ತರುವ ಕಾರ್ಯದಲ್ಲಿ ಎಲ್ಲಾ ಶ್ರೇಯಸ್ಸೂ ಪ್ರಧಾನಿ ಮೋದಿಗೆ ಸಲ್ಲಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಂಸ್ಕೃತಿ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮಾತನಾಡುತ್ತಾ, ಪುರಾತನ ವಸ್ತುಗಳ ಕಳ್ಳಸಾಗಾಣಿಕೆದಾರರ ಕಾಟದಿಂದ ನಮ್ಮ ದೇವಾಲಯಗಳ ಸುರಕ್ಷತೆಗೆ ಅಪಾಯ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಪುರಾತತ್ವ ಇಲಾಖೆಯು ಕಳುವಾದ ಪುರಾತನ ವಸ್ತುಗಳನ್ನು ಹುಡುಕಲೆಂದೇ ವಿಗ್ರಹ ವಿಭಾಗವನ್ನು ತೆರೆದಿದೆ. ಪುರಾತನ ದೇವಾಲಯದ ವಿಗ್ರಹಗಳಿಗೆ ಭಾರೀ ಬೇಡಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ಇವುಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆಯಂತೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+