ರಾಜೀನಾಮೆ ನೀಡಿದ ನಿತೀಶ್ ಕುಮಾರ್ ಉದುರಿಸಿದ 10 ನುಡಿಮುತ್ತುಗಳು

Posted By:
Subscribe to Oneindia Kannada

ಪ್ರಧಾನಿ ನರೇಂದ್ರ ಮೋದಿಯವರ ಅಪನಗದೀಕರಣ ಘೋಷಣೆಯ ವೇಳೆ ಬಿಹಾರದ ಸಿಎಂ ನಿತೀಶ್ ಕುಮಾರ್, ಕೇಂದ್ರ ಸರಕಾರದ ಕ್ರಮವನ್ನು ಸ್ವಾಗತಿಸಿದಾಗಲೇ, ಮಹಾಮೈತ್ರಿಕೂಟದ ಭ್ರೂಣ ಹತ್ಯೆಯಾಗುವ ಲಕ್ಷಣಗಳು ಗೋಚರಿಸಿದ್ದವು.

ಬಿಹಾರದ ಮಹಾಮೈತ್ರಿಕೂಟದ ಅಧಿಕೃತ ಬಿರುಕು ಹೊರಬರಲು ಶ್ರಾವಣ ಮಾಸವೇ ಬರಬೇಕಿತ್ತೇನೋ? ರಾಷ್ಟ್ರಪತಿ ಚುನಾವಣೆಯಲ್ಲಿ ರಾಮ್ ನಾಥ್ ಕೋವಿಂದ್ ಅವರನ್ನು ಜೆಡಿಯು ಬೆಂಬಲಿಸುವುದಾಗಿ ಘೋಷಿಸಿದಾಗ, ಬಿಹಾರದ ಜೆಡಿಯು, ಆರ್ಜೆಡಿ ಸರಕಾರ ತೀವ್ರ ನಿಗಾ ಘಟಕಕ್ಕೆ ಹೋಗಿತ್ತು.

ನಿತೀಶ್, ಲಾಲೂ ಅಪವಿತ್ರ ಮೈತ್ರಿಕೂಟದ ಟೈಂಲೈನ್

ತನ್ನ ಇದುವರೆಗಿನ ರಾಜಕೀಯ ಜೀವನದಲ್ಲಿ ಕ್ಲೀನ್ ಇಮೇಜ್ ಹೊಂದಿರುವ ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್ ಪುತ್ರ ಜೊತೆಗೆ ಬಿಹಾರದ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿ ಯಾದವ್ ರಾಜೀನಾಮೆ ಪಡೆಯಲು ವಿಫಲವಾದ ನಂತರ ತಾನೇ ರಾಜೀನಾಮೆ ನೀಡಿದ್ದಾರೆ. ಮತ್ತೆ ಇಂದು (ಜುಲೈ 27) ಬಿಜೆಪಿ ಮೈತ್ರಿಯೊಂದಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದೇಶದ ಸೀಸನ್ ಪೊಲಿಟಿಸಿಯನ್ಸ್ ನಲ್ಲಿ ಒಬ್ಬರೆಂದೇ ಗುರುತಿಸಲಾಗುವ ನಿತೀಶ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಎರಡು ಸಂದೇಶವನ್ನು ಬಿಹಾರದ ಜನತೆಗೆ ರವಾನಿಸಿದ್ದಾರೆ. ಒಂದು ನಾನು ಭ್ರಷ್ಟರ ಜೊತೆ ನಿಲ್ಲುವುದಿಲ್ಲ, ಇನ್ನೊಂದು ಲಾಲೂ ಭ್ರಷ್ಟರ ಬೆನ್ನಿಗೆ ನಿಂತಿದ್ದಾರೆ ಎನ್ನುವುದು.

ನಿರೀಕ್ಷೆಯಂತೆ ಬಿಜೆಪಿ, ನಿತೀಶ್ ಕುಮಾರ್ ಅವರಿಗೆ ಬೆಂಬಲ ಸೂಚಿಸಿದೆ. ತನ್ನ ಎಲ್ಲಾ 58 (NDA) ಶಾಸಕರ ಬೆಂಬಲ ನಿತೀಶ್ ಕುಮಾರಿಗಿದೆ ಎಂದು ರಾಜ್ಯಪಾಲರಿಗೆ ಬಿಜೆಪಿ ಹೇಳಿದ್ದಾಗಿದೆ. ವಿಶ್ವಾಸಮತ ಸಾಬೀತು ಪಡಿಸಲು ಬೇಕಾಗಿರುವ ಸಂಖ್ಯೆ 122, ಜೆಡಿಯು 71 ಸದಸ್ಯರನ್ನು ಹೊಂದಿದೆ. ಹಾಗಾಗಿ, ನಿತೀಶ್ ವಿಶ್ವಾಸಮತ ಯಾಚಿಸುವ ಪರಿಸ್ಥಿತಿ ಬಂದರೆ, ಸದ್ಯದ ಮಟ್ಟಿಗೆ ಜೆಡಿಯು ಸರಕಾರ ಸೇಫ್.

ರಾಜೀನಾಮೆ ನೀಡಿದ ನಂತರ, ಮಾಧ್ಯಮದವರ ಮುಂದೆ ನಿತೀಶ್ ನೀಡಿದ ಗೋಲ್ಡನ್ ಹೇಳಿಕೆಗಳು, ಮುಂದೆ ಓದಿ..

ಸಿಎಂ ನಿತೀಶ್ ನೀಡಿದ ಹೇಳಿಕೆ

ಸಿಎಂ ನಿತೀಶ್ ನೀಡಿದ ಹೇಳಿಕೆ

1. ರಾಷ್ಟ್ರಪತಿ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎನ್ನುವುದು ನನ್ನ ಪಕ್ಷದ ನಿರ್ಧಾರ, ಮಹಾಮೈತ್ರಿಕೂಟದ ನಿರ್ಧಾರವಲ್ಲ. ಹಾಗಿದ್ದಾಗ್ಯೂ, ನನ್ನ ಮೇಲೆ ಮಾಧ್ಯಮದವರ ಮುಂದೆ ಲಾಲೂ ಪ್ರಸಾದ್ ಯಾದವ್ ನನ್ನನ್ನು ಟೀಕಿಸಿದರು.
2. ಅಪನಗದೀಕರಣ ಘೋಷಣೆ ಮಾಡಿದಾಗ, ನಾನೇ ಖುದ್ದಾಗಿ ಮೋದಿಗೆ ಬೇನಾಮಿ ಆಸ್ತಿಗಳನ್ನು ಮಟ್ಟಹಾಕಬೇಕೆಂದು ವಿನಂತಿಸಿದ್ದೆ. ಈಗ ನನ್ನ ಸರಕಾರದ ಉಪಮುಖ್ಯಮಂತ್ರಿ ಆ ಆರೋಪದಲ್ಲಿ ಸಿಲುಕಿರುವಾಗ ಅವರ ಜೊತೆ ಹೇಗೆ ಕೆಲಸ ಮಾಡಲಿ.

ಬಿಹಾರದ ಮೈತ್ರಿಕೂಟದಲ್ಲಿ ಬಿರುಕು

ಬಿಹಾರದ ಮೈತ್ರಿಕೂಟದಲ್ಲಿ ಬಿರುಕು

3.ನಾನು ತೇಜಸ್ವಿ ಯಾದವ್ ರಾಜೀನಾಮೆಯನ್ನು ಕೇಳಿಲ್ಲ, ವಿವರಣೆ ನೀಡುವಂತೆ ಕೇಳಿದ್ದೆ, ಅದನ್ನು ಲಾಲೂ ಪ್ರಸಾದ್ ಯಾದವ್ ತಪ್ಪು ಎಂದು ಪರಿಗಣಿಸದರೆ ಅದು ನನ್ನ ತಪ್ಪಲ್ಲ. ಸಾಮಾಜಿಕ ಜೀವನದಲ್ಲಿ ಇರುವವರು ಕ್ಲೀನ್ ಇಮೇಜ್ ಹೊಂದಿರಬೇಕು. ಹಾಗಾಗಿ ಅವರಲ್ಲಿ ವಿವರಣೆ ಕೇಳಿದೆ.
4. ಬಿಹಾರದಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದು ಇಪ್ಪತ್ತು ತಿಂಗಳಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಆರ್ಜೆಡಿ, ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರಿಯಲು ಸಾಧ್ಯವಿಲ್ಲ.

ನಿತೀಶ್ ಕುಮಾರ್ ರಾಜೀನಾಮೆ

ನಿತೀಶ್ ಕುಮಾರ್ ರಾಜೀನಾಮೆ

5. ನಾನೂ ಒಬ್ಬ ಮನುಷ್ಯ, ನನ್ನ ಕೈಯಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ನಿಭಾಯಿಸಬಲ್ಲೆ. ನನ್ನ ಕೈಯಲ್ಲಿ ಆಗದೇ ಇದ್ದಾಗ ರಾಜೀನಾಮೆಯೊಂದೇ ದಾರಿ.
6.ಲಾಲೂ ಪುತ್ರನ ಮೇಲಿನ ಅಕ್ರಮದ ಆರೋಪವನ್ನು ಆಡಳಿತಾತ್ಮಕವಾಗಿ ನಿಭಾಯಿಸಲು ಕಷ್ಟವಾಗುತ್ತಿದೆ. ನಾನು ಸರಕಾರದ ಯಾರ ಸಚಿವರ ರಾಜೀನಾಮೆಯನ್ನು ಕೇಳಿಲ್ಲ, ಬದಲಾಗಿ ನಾನೇ ರಾಜೀನಾಮೆ ನೀಡುತ್ತಿದ್ದೇನೆ.

ನಾನು ಸಿಎಂ ಆಗಿದ್ದು ಪ್ರಯೋಜನವೇನು?

ನಾನು ಸಿಎಂ ಆಗಿದ್ದು ಪ್ರಯೋಜನವೇನು?

7.ನನ್ನ ಸರಕಾರದಲ್ಲಿರುವ ಸಚಿವರ ಬಗ್ಗೆ ನನಗೆ ಉತ್ತರಿಸಲು ಆಗದೇ ಇದ್ದಲ್ಲಿ, ನಾನು ಸಿಎಂ ಆಗಿದ್ದು ಪ್ರಯೋಜನವಿಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲಾ.. ರಾಜಕೀಯವಾಗಿ ನಾನು ಬೆಳೆದ ರೀತಿಯೂ ಅಲ್ಲ.
8.ನನಗೆ ಮೈತ್ರಿಕೂಟದಲ್ಲಿ ಉಸಿರು ಕಟ್ಟಿ ಕೆಲಸ ಮಾಡುವ ಸನ್ನಿವೇಶವಿದೆ, ಇದನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೂ ಹೇಳಿದ್ದೇನೆ. ಜನರಿಗೆ ನ್ಯಾಯ ಕೊಡಲು ಸಾಧ್ಯವಾಗದೇ ಇದ್ದಾಗ, ನಾನು ಸಿಎಂ ಸ್ಥಾನದಲ್ಲಿರುವುದು ಸೂಕ್ತವಲ್ಲ.

Narendra Modi biopic coming soon | Akshay Kumar as Modi | Oneindia Kannada
ನಾನು ಯಾರನ್ನೂ ದೂಷಿಸುವುದಿಲ್ಲ

ನಾನು ಯಾರನ್ನೂ ದೂಷಿಸುವುದಿಲ್ಲ

9. ಮಹಾಮೈತ್ರಿಕೂಟದ ಸರಕಾರ ಉಳಿಸಲು ಸಾಧ್ಯವಾದಷ್ಟು ಪ್ರಯತ್ನಪಟ್ಟೆ, ಆದರೆ ಅದು ಸಾಧ್ಯವಾಗಲಿಲ್ಲ.
10. ನಾನು ಇಂದು ರಾಜೀನಾಮೆ ನೀಡಲು ಕಾರಣರಾರು ಎನ್ನುವುದರ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ, ನನ್ನನ್ನು ದೂಷಿಸುವವರು ಮುಕ್ತವಾಗಿ ಹೇಳಿಕೆ ನೀಡಬಹುದು. ಅದು ನನ್ನ ಪಕ್ಷದವರಾಗಿದ್ದರೂ, ನನಗೆ ಬೇಸರವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
10 quotes of Nitish Kumar after his resignation as Bihar Chief Minister. After tendering his resignation, Nitish said, there are questions about someone inside the government and it was not possible for him to run the Mahagathbhandhan.
Please Wait while comments are loading...