ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀರತ್ ನಲ್ಲಿ 100 ಅಡಿ ಎತ್ತರದ ಮೋದಿ ಪ್ರತಿಮೆ !

By ವಿಕಾಸ್ ನಂಜಪ್ಪ
|
Google Oneindia Kannada News

ಮೀರತ್, ಅಕ್ಟೋಬರ್ 03: ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ಮಂದಿಗೆ ಆರಾಧ್ಯ ದೈವವಾಗಿರುವುದು ಹೊಸ ವಿಷಯವೇನಲ್ಲ.

ಫ್ಯಾನ್ಸ್ ಪಾಲಿನ ದೇವರು: ಸೆಲೆಬ್ರಿಟಿಗಳಿಗೊಂದು ಗುಡಿಫ್ಯಾನ್ಸ್ ಪಾಲಿನ ದೇವರು: ಸೆಲೆಬ್ರಿಟಿಗಳಿಗೊಂದು ಗುಡಿ

ಮೋದಿ ಅವರನ್ನು ಆರಾಧಿಸಲು ಈಗ ದೇಗುಲವೊಂದನ್ನು ನಿರ್ಮಿಸಲಾಗುತ್ತಿದೆ. ಮೀರತ್ ನಲ್ಲಿ ನಿರ್ಮಿಸಲಾಗುವ ಈ ದೇಗುಲದಲ್ಲಿ 100 ಅಡಿ ಎತ್ತರದ ಮೋದಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ.

Temple with 100 foot tall idol of Narendra Modi to be built in Meerut

ಮೋದಿ ಅವರ ಪರಮ ಭಕ್ತ ಜೆ.ಪಿ ಸಿಂಗ್ ಎಂಬಾತ ಈ ಬೃಹತ್ ದೇಗುಲ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಮೀರತ್ ನ ಸರ್ಧಾನ ಪ್ರದೇಶದಲ್ಲಿ ದೇಗುಲ ನಿರ್ಮಾಣಕ್ಕಾಗಿ ಐದು ಎಕರೆ ಭೂಮಿಯನ್ನು ಮೀಸಲಿಡಲಾಗಿದೆ.

ಅಕ್ಟೋಬರ್ 23ರಂದು ಗುದ್ದಲಿಪೂಜೆ ನಡೆಸಲು ನಿರ್ಧರಿಸಲಾಗಿದ್ದು, ಈ ದೇಗುಲ ನಿರ್ಮಾಣಕ್ಕೆ 10 ಕೋಟಿ ರು ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ. ಸಾರ್ವಜನಿಕರಿಂದ ಚಂದಾ ಎತ್ತಿ ದೇಗುಲ ಹಾಗೂ ಬೃಹತ್ ಪ್ರತಿಮೆ ನಿರ್ಮಾಣ ಕಾರ್ಯ ನಡೆಸಲು ಮೋದಿ ಭಕ್ತ ಜೆಪಿ ಸಿಂಗ್ ಉದ್ದೇಶಿಸಿದ್ದಾರೆ.

ರಾಜಕಾರಣಿಗಳ ಹೆಸರಿನ ದೇಗುಲ, ಪ್ರತಿಮೆಗಳು..ಇತ್ಯಾದಿ ರಾಜಕಾರಣಿಗಳ ಹೆಸರಿನ ದೇಗುಲ, ಪ್ರತಿಮೆಗಳು..ಇತ್ಯಾದಿ

ನರೇಂದ್ರ ಮೋದಿ ಅವರು ಭಾರತ ಮಾತೆಯ ಬಗ್ಗೆ ಇಟ್ಟುಕೊಂಡಿರುವ ಪ್ರೀತ್ಯಾದರಗಳಿಗೆ ನಾನು ತಲೆ ಬಾಗುತ್ತೇನೆ. ಮೋದಿ ಮ್ಯಾಜಿಕ್ ಎಲ್ಲರಿಗೂ ತಿಳಿಯಬೇಕಾದರೆ ದೇಗುಲ ನಿರ್ಮಾಣ ಆಗಲೇಬೇಕು. ಅಭಿವೃದ್ಧಿಯ ಪಥದಲ್ಲಿ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಅವರ ಸಾಧನೆಯನ್ನು ಕೊಂಡಾಡಲು ಇದು ಸೂಕ್ತ ಮಾರ್ಗ ಎಂದು ನನಗಿಸಿತು ಎಂದು ಸಿಂಗ್ ಹೇಳಿದರು. ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದ ಸಿಂಗ್ ಈಗ ನಿವೃತ್ತಿ ಬದುಕು ಸಾಗಿಸುತ್ತಿದ್ದಾರೆ.

ಮೀರತ್- ಕರ್ನಾಲ್ ಹೆದ್ದಾರಿಯಲ್ಲಿ ಐದು ಎಕರೆ ವಿಸ್ತೀರ್ಣದ ವಿಶಾಲವಾದ ಜಾಗವನ್ನು ದೇಗುಲ ನಿರ್ಮಾಣಕ್ಕಾಗಿ ಗುರುತಿಸಲಾಗಿದೆ. ಮೋದಿ ಅವರ ಬೃಹತ್ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗುವುದು. ಇನ್ನೆರಡು ವರ್ಷಗಳಲ್ಲಿ ಈ ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಸಿಂಗ್ ಹೇಳಿದ್ದಾರೆ.(ಒನ್ಇಂಡಿಯಾ ಸುದ್ದಿ)

English summary
A temple will be built in the name of Narendra Modi at Meerut. J P Singh a follower and supporter of the Prime Minister said that the temple will be built on five acres of land in the Sardhana area of Meerut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X