ಫ್ಯಾನ್ಸ್ ಪಾಲಿನ ದೇವರು: ಸೆಲೆಬ್ರಿಟಿಗಳಿಗೊಂದು ಗುಡಿ

Posted By:
Subscribe to Oneindia Kannada

ಬೆಂಗಳೂರು, ಮಾ.01: ಮುಕ್ಕೋಟಿ ದೇವರುಗಳನ್ನು ಹೊಂದಿರುವ ಭಾರತೀಯರು,ಹೊಸ ಹೊಸ ದೇವರುಗಳನ್ನು ಸೃಷ್ಟಿಸುವುದರಲ್ಲೂ ಮುಂದಿದ್ದಾರೆ. ಕಲ್ಲು, ಗಿಡ, ಮರ, ಪ್ರತಿಮೆ, ದೇಹದ ಅಂಗಾಂಗಗಳಿಗೆ ಪೂಜೆ ಸಲ್ಲಿಕೆಯಾಗುತ್ತದೆ. ಸಿನಿಮಾ ಜಗತ್ತಿನ ಸೆಲೆಬ್ರಿಟಿಗಳ ನಂತರ ರಾಜಕಾರಣಿಗಳು ಈಗ ದೇವರಾಗಿ ದೇಗುಲದೊಳಗೆ ಬೆಚ್ಚಗೆ ನೆಲೆ ಕಾಣುತ್ತಿದ್ದಾರೆ.

ಈ ರೀತಿ ದೇಗುಲ ನಿರ್ಮಾಣ ಮಾಡುವುದು ಅಭಿಮಾನದ ಪರಾಕಾಷ್ಠೆಯ ಪ್ರದರ್ಶನ ಬಿಟ್ಟರೆ ಮತ್ತೇನಲ್ಲ. ರಾಜಕಾರಣಿಗಳು ಬೇಡವೆಂದರೂ ಕೇಳುವುದಿಲ್ಲ. ಅಭಿಮಾನಿಗಳ ಪಾಲಿಗೆ ಸಿನಿಮಾ ನಟ, ನಟಿ, ಕ್ರಿಕೆಟರ್ಸ್ ಎಲ್ಲರೂ ದೇವರುಗಳೇ.

ತಮಿಳರ ಪಾಲಿನ 'ಅಮ್ಮ' ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗಾಗಿ ವಿಶೇಷ ದೇಗುಲವೊಂದು ವೆಲ್ಲೂರಿನಲ್ಲಿ ನಿರ್ಮಾಣವಾಗುತ್ತಿರುವ ಸುದ್ದಿ ಓದಿರಬಹುದು.[ಅಮ್ಮ ಆಲಯಂ, ಜಯಲಲಿತಾರಿಗೊಂದು ದೇಗುಲ]

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದೇಗುಲ ನಿರ್ಮಾಣವಾಗಿತ್ತು. ಆದರೆ, ಇನ್ನೂ ಕೆಲವು ಸೆಲೆಬ್ರಿಟಿಗಳ ಹೆಸರಿನಲ್ಲಿ ದೇಗುಲ ನಿರ್ಮಾಣವಾಗಿತ್ತು. ಈ ಬಗ್ಗೆ ಒಂದು ವರದಿ ಇಲ್ಲಿದೆ. ಒಂದು ಲೆಕ್ಕಾಚಾರದಂತೆ ಸರಿ ಸುಮಾರು 100ಕ್ಕೂ ಅಧಿಕ ದೇಗುಲಗಳಲ್ಲಿ ಮನುಷ್ಯರನ್ನು ದೇವರಂತೆ ಪೂಜಿಸುವುದನ್ನು ಕಾಣಬಹುದು.

ಹಿಂದಿ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮಾದಕ ನಟಿ ಎನಿಸಿಕೊಂಡಿದ್ದ ಮಮತಾ ಕುಲಕರ್ಣಿಗಾಗಿ ಆಂಧ್ರಪ್ರದೇಶದಲ್ಲಿ 90ರ ದಶಕದಲ್ಲಿ ದೇಗುಲ ನಿರ್ಮಾಣವಾಗಿತ್ತು. ನಟಿಯರು ದೇವರುಗಳಾಗಿದ್ದು ಇದೇ ಮೊದಲು ಎನ್ನಬಹುದು. ತೀರಾ ಇತ್ತೀಚೆಗೆ ಹನ್ಸಿಕಾ ಮೋತ್ವಾನಿ ಅವರು ತಮ್ಮ ಹೆಸರಿನಲ್ಲಿ ಕೋವಿಲ್(ದೇವಸ್ಥಾನ) ನಿರ್ಮಾಣಕ್ಕೆ ಅನುಮತಿ ನೀಡಲು ನಿರಾಕರಿಸಿದ್ದರು.

ತಮಿಳುನಾಡು ಸಿಎಂ ಜಯಲಲಿತಾ ದೇಗುಲ

ತಮಿಳುನಾಡು ಸಿಎಂ ಜಯಲಲಿತಾ ದೇಗುಲ

ಎಂಜಿಆರ್ ಯೂಥ್ ವಿಂಗ್ ನ ಕಾರ್ಯದರ್ಶಿಯಾಗಿರುವ ಶ್ರೀನಿವಾಸನ್ ಅವರು ಜಯಾ ಅಮ್ಮನ ಪರಮಭಕ್ತ. ತಮಿಳುನಾಡಿನ ವೆಲ್ಲೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಇಯೆಪ್ಪೆಡು ಗ್ರಾಮದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಭೂಮಿಯಲ್ಲಿ,50 ಲಕ್ಷ ರು ವೆಚ್ಚದಲ್ಲಿ ಈ ದೇಗುಲ ನಿರ್ಮಾಣವಾಗುತ್ತಿದೆ. 6 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿಮೆಯ ಸುತ್ತಾ ಪ್ರಭಾವಳಿಯಂತೆ ಜಯಲಲಿತಾ ಅವರ ಸಾಧನೆಗಳ ಚಿತ್ರಣ ಸಿಗಲಿದೆಯಂತೆ.

ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಗುಡಿ

ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಗುಡಿ

ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ರಾಜ್ ಕೋಟ್ ನಲ್ಲಿ ದೇಣಿಗೆ ಸಂಗ್ರಹ ಮಾಡಿ ದೇಗುಲ ಕಟ್ಟಿದ್ದಾರೆ. ಗುಜರಾತ್ ಮೂಲದ ಮೋದಿ ಅವರ ಹೆಸರಿನಲ್ಲಿ ಗುಜರಾತಿನಲ್ಲಿ ದೇಗುಲವಿಲ್ಲ.

ಅಮಿತಾಬ್ ಬಚ್ಚನ್ ಹೆಸರಿನಲ್ಲಿ ದೇಗುಲ

ಅಮಿತಾಬ್ ಬಚ್ಚನ್ ಹೆಸರಿನಲ್ಲಿ ದೇಗುಲ

ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಅವರು ಉತ್ತರಪ್ರದೇಶ, ಮುಂಬೈನ ಜೊತೆ ನಂಟು ಹೊಂದಿದ್ದರೂ ಪಶ್ಚಿಮ ಬಂಗಾಳದಲ್ಲಿ ಅವರ ಹೆಸರಿನಲ್ಲಿ ದೇಗುಲ ನಿರ್ಮಾಣವಾಗಿದೆ. ಕೋಲ್ಕತ್ತಾದ ಪಶ್ಚಿಮ ಭಾಗದಲ್ಲಿ ಮೆಗಾಸ್ಟಾರ್ ಆರಾಧನೆಗಾಗಿ ಭಾವಚಿತ್ರವೊಂದನ್ನು ಇರಿಸಲಾಗಿದ್ದು, ಅಕ್ಷ್ ಚಿತ್ರದ ನಂತರ ನಿತ್ಯ ಪೂಜೆ, ಅಮಿತಾಬ್ ಚಾಲೀಸಾ ಪಠಣ ನಡೆಯುತ್ತಲೇ ಇದೆ.

ಸೋನಿಯಾ ಗಾಂಧಿ ಹೆಸರಿನಲ್ಲಿ ಪ್ರತಿಮೆ

ಸೋನಿಯಾ ಗಾಂಧಿ ಹೆಸರಿನಲ್ಲಿ ಪ್ರತಿಮೆ

ತೆಲಂಗಾಣ ರಾಜ್ಯ ಉದಯಕ್ಕೆ ಕಾರಣರಾದರು ಎಂಬ ಅಭಿಮಾನದಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರಿನಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ತೆಲಂಗಾಣ ತಲ್ಲಿ ಎಂಬ ಹೆಸರಿನಲ್ಲಿ ಶಂಕರ್ ರಾವ್ ಎಂಬ ಕಾಂಗ್ರೆಸ್ ಶಾಸಕ ಪ್ರತಿಮೆ ನಿರ್ಮಿಸಿ ಪಾರ್ಕೊಂದರಲ್ಲಿ ನಿಲ್ಲಿಸಿದ್ದರು. ನಂತರ ಇದನ್ನು ದೇಗುಲದಲ್ಲಿ ಇರಿಸಲಾಗುವುದು ಎಂದು ಹೇಳಿದ್ದರು.

ಮಾಯಾವತಿ ಪ್ರತಿಮೆಗಳ ಸೌಧ

ಮಾಯಾವತಿ ಪ್ರತಿಮೆಗಳ ಸೌಧ

ಉತ್ತರಪ್ರದೇಶದಲ್ಲಿ ಎಲ್ಲಿ ನೋಡಿದರಲ್ಲಿ ಮಾಯಾವತಿ ಅವರ ಆಳೆತ್ತರದ ಪ್ರತಿಮೆಗಳು ಕಾಣಿಸುತ್ತಿದ್ದ ಕಾಲವೊಂದಿತ್ತು. ನಂತರ ಸಾರ್ವಜನಿಕ ಸ್ಥಳಗಳಿಂದ ಪ್ರತಿಮೆಗಳನ್ನು ತೆರವುಗೊಳಿಸುವಂತೆ ಕೋರ್ಟ್ ಆದೇಶಿಸಿತು.

ಬುಂದೇಲ್ ಖಂಡ್ ಮಹೊಬಾ ಜಿಲ್ಲೆ ನಾತ್ಪುರದಲ್ಲಿ ಸದ್ಯಕ್ಕೆ ಮಾಯಾವತಿ ಅವರ ಹೆಸರಿನ ದೇಗುಲ ನೋಡಬಹುದು. ಈ ಎಲ್ಲಾ ಪ್ರತಿಮೆಗಳು ಆಭಿಮಾನಿಗಳು ನಿರ್ಮಿಸಿದ್ದಕ್ಕಿಂತ ಮಾಯಾವತಿ ಅವರು ಸಾರ್ವಭೌಮತೆಯ ಸಂಕೇತವಾಗಿ ನಿರ್ಮಾಣಗೊಂಡಿತ್ತು.

ಸೂಪರ್ ಸ್ಟಾರ್ ರಜನಿಕಾಂತ್ ಗೊಂದು ಗುಡಿ

ಸೂಪರ್ ಸ್ಟಾರ್ ರಜನಿಕಾಂತ್ ಗೊಂದು ಗುಡಿ

ಕರ್ನಾಟಕದ ಕೋಲಾರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹೆಸರಿನಲ್ಲಿ ಶಿವಲಿಂಗ ಸ್ಥಾಪನೆ ಮಾಡಿ ಪೂಜೆ ಮಾಡಿದ್ದರು. ಕೋಟಿ ಲಿಂಗೇಶ್ವರ ದೇಗುಲದಲ್ಲಿ ಭಕ್ತಾದಿಗಳು ನಮ್ಮ ಆಪ್ತರ ಹೆಸರಿನಲ್ಲಿ ಲಿಂಗ ಸ್ಥಾಪನೆ ಮಾಡುವ ಪರಿಪಾಠದಂತೆ ರಜನಿ ಹೆಸರಿನಲ್ಲಿ ಲಿಂಗ ಸ್ಥಾಪಿಸಲಾಗಿದೆ.

ನಟಿ, ರಾಜಕಾರಣಿ ಖುಷ್ಬೂ ಹೆಸರಿನಲ್ಲಿ ದೇಗುಲ

ನಟಿ, ರಾಜಕಾರಣಿ ಖುಷ್ಬೂ ಹೆಸರಿನಲ್ಲಿ ದೇಗುಲ

ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ 2005ರಲ್ಲಿ ನಟಿ, ರಾಜಕಾರಣಿ ಖುಷ್ಬೂ ಹೆಸರಿನಲ್ಲಿ ದೇಗುಲ ನಿರ್ಮಿಸಲಾಗಿದೆ. ನಂತರ ದೇವರ ಮುಂದೆ ಪಾದರಕ್ಷೆ ಹಾಕಿ ಕುಳಿತು, ಸಮರ್ಥಿಸಿಕೊಂಡ ಕಾರಣಕ್ಕೆ ಗುಡಿಯನ್ನು ನೆಲಸಮಗೊಳಿಸಲಾಯಿತು.

ಸೆಕ್ಸ್ ಬಾಂಬ್ ಎನಿಸಿಕೊಂಡಿದ್ದ ನಮಿತಾಗೂ ದೇಗುಲ

ಸೆಕ್ಸ್ ಬಾಂಬ್ ಎನಿಸಿಕೊಂಡಿದ್ದ ನಮಿತಾಗೂ ದೇಗುಲ

ಸೆಕ್ಸ್ ಬಾಂಬ್ ಎನಿಸಿಕೊಂಡಿದ್ದ ನಮಿತಾಗೂ ದೇಗುಲ ನಿರ್ಮಿಸಲಾಗಿತ್ತು. ಕಾಲಿವುಡ್ ನಲ್ಲಿ ಭಾರಿ ಬೇಡಿಕೆಯಲ್ಲಿದ್ದ ಕಾಲದಲ್ಲಿ ನಮಿತಾ ಹೆಸರಿನಲ್ಲಿ ನಿತ್ಯ ಪೂಜೆ ನಡೆಯುತ್ತಿತ್ತು.

ಪೂಜಾ ಉಮಾಶಂಕರ್ ಗೆ ಲಂಕಾದಲ್ಲಿ ಗುಡಿ

ಪೂಜಾ ಉಮಾಶಂಕರ್ ಗೆ ಲಂಕಾದಲ್ಲಿ ಗುಡಿ

ಕರ್ನಾಟಕದ ಶೃಂಗೇರಿ ಮೂಲದ ತಮಿಳು ಹಾಗೂ ಸಿಂಹಳೀಸ್ ನಟಿ ಪೂಜಾ ಉಮಾಶಂಕರ್ ಅವರಿಗೆ ಅವರ ಅಭಿಮಾನಿಗಳು ಶ್ರೀಲಂಕಾದಲ್ಲಿ ಗುಡಿ ಕಟ್ಟಿದ್ದರು.

ನಟ, ತಮಿಳುನಾಡು ಮಾಜಿ ಸಿಎಂ ಎಂಜಿಆರ್

ನಟ, ತಮಿಳುನಾಡು ಮಾಜಿ ಸಿಎಂ ಎಂಜಿಆರ್

ನಟ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಮರತ್ತೂರು ಗೋಪಾಲನ್ ರಾಮಚಂದ್ರನ್ ಹೆಸರಿನಲ್ಲಿ ಚೆನ್ನೈನಿಂದ 40ಕಿ.ಮೀ ದೂರದಲ್ಲಿರುವ ತಿರುವಣಿರವೂರ್ ದೇಗುಲ ಸ್ಥಾಪಿಸಲಾಯಿತು. ಪುರಚ್ಚಿ ತಲೈವರ್ ಎಂಜಿಆರ್ ಹೆಸರಿನಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗಿದೆ.

ಬಾಲಿವುಡ್ ನಟಿ ಮಮತಾ ಕುಲಕರ್ಣಿ

ಬಾಲಿವುಡ್ ನಟಿ ಮಮತಾ ಕುಲಕರ್ಣಿ

ಬಾಲಿವುಡ್ ನಟಿ ಮಮತಾ ಕುಲಕರ್ಣಿ ಅವರ ಡಬ್ ಆದ ಚಿತ್ರ ಪ್ರೇಮ್ ಶಿಖರಂ ನೋಡಿ ಮರುಳಾದ ಆಂಧ್ರಪ್ರದೇಶದ ಅಭಿಮಾನಿಗಳು ನೆಲ್ಲೂರಿನಲ್ಲಿ ಮಮತಾ ಹೆಸರಿನಲ್ಲಿ ದೇಗುಲ ನಿರ್ಮಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಮತಾ, ತೆಲುಗು ಭಾಷಿಕರಿಂದ ಸಿಕ್ಕಿರುವ ಅಭಿಮಾನಕ್ಕೆ ನಾನು ಋಣಿ ಎಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
When fans build Temples for their favourite Politicians, Cricketers and Movie Magnets. These are the ways people worship their deities. Take a look at some of the temples dedicated or under construction.
Please Wait while comments are loading...