Breaking; ಸಿಹಿ ಸುದ್ದಿ; ದೇಶದ ವಿವಿಧ ರಾಜ್ಯದಲ್ಲಿ ಉಷ್ಣಾಂಶ ಕುಸಿತ

ನವದೆಹಲಿ, ಮೇ 01; ಬಿಸಿಗಾಳಿಯ ವಾತಾವರಣದಿಂದ ಕಂಗೆಟ್ಟಿದ್ದ ಜನರಿಗೆ ಸಿಹಿಸುದ್ದಿ. ದೇಶದ ಹಲವು ರಾಜ್ಯಗಳಲ್ಲಿ ಭಾನುವಾರ ಉಷ್ಣಾಂಶ ಕುಸಿತವಾಗಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದೆ.

ಭಾನುವಾರ ಭಾರತೀಯ ಹವಾಮಾನ ಇಲಾಖೆ ಹಿರಿಯ ವಿಜ್ಞಾನಿ ಆರ್. ಕೆ. ಜಿನಮಣಿ ಈ ಕುರಿತು ಮಾತನಾಡಿದರು, "ದೇಶದ ಹಲವು ಪ್ರದೇಶಗಳಲ್ಲಿ ಉಷ್ಣಾಂಶ ಕುಸಿತವಾಗಿದೆ. ಪೂರ್ವ ಭಾರತದ ಪ್ರದೇಶಗಳಲ್ಲಿ ಇಂದು ಬಿಸಿಗಾಳಿಯ ವಾತಾವರಣ ಇಲ್ಲ" ಎಂದರು.

"ಉತ್ತರ ಪ್ರದೇಶದ ಉತ್ತರ ಭಾಗ, ದೆಹಲಿ, ಉತ್ತರ ಪಂಜಾಬ್ ಮತ್ತು ಉತ್ತರ ಹರ್ಯಾಣದಲ್ಲಿ ಬಿಸಿಗಾಳಿಯ ಪ್ರಭಾವಿಲ್ಲ. ಮೇ 1 ರಿಂದ 5ರ ತನಕ ತಾಪಮಾನ ಸಾಮಾನ್ಯವಾಗಿರುತ್ತದೆ" ಎಂದು ಆರ್. ಕೆ. ಜಿನಮಣಿ ಹೇಳಿದರು.

Temperature Come Down At Few Locations Says IMD

"ಪಂಜಾಬ್, ರಾಜಸ್ಥಾನ, ದೆಹಲಿ, ಹರ್ಯಾಣ, ಉತ್ತರ ಪ್ರದೇಶದಲ್ಲಿ ಮಳೆಯ ಮುನ್ಸೂಚನೆ ಇದೆ. ಈ ಪ್ರದೇಶಗಳಲ್ಲಿ ಗುಡುಗು ಮತ್ತು ದೂಳಿನ ಗಾಳಿಯ ಮುನ್ಸೂಚನೆ ನೀಡಲಾಗಿದೆ" ಎಂದು ತಿಳಿಸಿದರು.

ವಾಯುಭಾರ ಕುಸಿತ; ಅಂಡಮಾನ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮೇ 4ರಂದು ಚಂಡಮಾರುತ ರೂಪಗೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಮೇ 6ರ ಬಳಿಕ ಹವಾಮಾನದಲ್ಲಿ ಬದಲಾವಣೆಯಾಗಬಹುದು. ಮೇ 6 ರಿಂದ 24 ಗಂಟೆಗಳ ಅವಧಿಯಲ್ಲಿ ವಾಯುಭಾರ ಕುಸಿತದ ಪ್ರಭಾವ ತಿಳಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+