Sim: ಹೆಚ್ಚು 'ಮೊಬೈಲ್ ನಂಬರ್' ಹೊಂದಿರುವವರಿಗೆ ಶುಲ್ಕ ಹೇರಿಕೆ?: ಕೇಂದ್ರ ಪ್ರಾಧಿಕಾರ ಸ್ಪಷ್ಟನೆ
ನವದೆಹಲಿ, ಜೂನ್ 16: ಇಂದಿನ ಮೊಬೈಲ್ ಯುಗದಲ್ಲಿ ಯಾರ ಕೈಲಿ ಎಷ್ಟು ಮೊಬೈಲ್ ಗಳಿವೆ, ಎಷ್ಟು ಸಿಮ್ ಕಾರ್ಡ್‌ಗಳಿವೆ (ನಂಬರ್) ಎಂಬುದೇ ಗೊತ್ತಿರಲ್ಲ. ಇದೇ ವಿಚಾರವಾಗಿ ಸುದ್ದಿಯೊಂದು ಹರಿದಾಡುತ್ತಿದ್ದು, ಹೆಚ್ಚು ಸಿಮ್‌ಗಳನ್ನು ಇಟ್ಟುಕೊಂಡವರಿಗೆ ಶುಲ್ಕ ವಿಧಿಸಲಾಗುವುದು ಎಂಬ ಮಾತುಗಳು ಕೇಳಿ ಬಂದಿವೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಓಡಾಡುತ್ತಿದ್ದಂತೆ ಇದನ್ನು ಕೇಳಿದ ಮೊಬೈಲ್ ಬಳಕೆದಾರರು ಆಶ್ಚರ್ಯಗೊಂಡಿದ್ದಾರೆ. ಈ ಕುರಿತು ಟೆಲಿಕಾಂ ಆಪರೇಟರ್‌ಗಳನ್ನು ಸಂಪರ್ಕಿಸಿ ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಕುರಿತು TRAI ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದೆ.

ಹೆಚ್ಚು ಸಿಮ್ ಕಾರ್ಡ್‌ಗಳು ಅಥವಾ ಬಹು ಸಂಖ್ಯೆಯ ಮೊಬೈಲ್ ಸಂಖ್ಯೆ ಹೊಂದಿರುವ ಗ್ರಾಹಕರ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂಬ ಮಾಹಿತಿ ಸಂಪೂರ್ಣ ಸುಳ್ಳು. ಇದೊಂದು ಆಧಾರ ರಹಿತವಾದದ್ದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಸ್ಪಷ್ಟನೆ ನೀಡಿದೆ.
ಇಂತಹ ಮಾಹಿತಿಗಳು, ವದಂತಿಗಳನ್ನು ಹರಿಬಿಡುವುದುದರಿಂದ ಜನರನ್ನು ತಪ್ಪು ದಾರಿಗೆ ಎಳೆದಂತಾಗುತ್ತದೆ ಎಂದು ಪ್ರಾಧಿಕಾರ ಅಭಿಪ್ರಾಯ ಹೊರ ಹಾಕಿದೆ.
TRAI ಸಂಪರ್ಕಿಸಿದ ಟೆಲಿಕಮ್ಯುನಿಕೇಶನ್, ದೂರಸಂಪರ್ಕ ಅಧಿಕಾರಿಗಳು ಈ ಮಾಹಿತಿ ಬಗ್ಗೆ ಟೆಲಿಕಮ್ಯುನಿಕೇಶನ್ ಇಲಾಖೆ (DoT), ದೂರಸಂಪರ್ಕ ಗುರುತಿಸುವಿಕೆ (TI) ಸಂಪನ್ಮೂಲಗಳ ವಿಭಾಗವು TRAI ಅನ್ನು ಸಂಪರ್ಕಿಸಿದೆ. ನಿರ್ವಹಣೆ ಮತ್ತು ವಿವೇಚನಾಶೀಲ ಬಳಕೆಯ ಭಾಗವಾಗಿ ಪರಿಷ್ಕೃತ ರಾಷ್ಟ್ರೀಯ ಸಂಖ್ಯಾ ಯೋಜನೆ ಹಾಗೂ ಅದರ ಶಿಫಾರಸುಗಳನ್ನು ತಿಳಿಸಬೇಕು. 2022 ಸೆಪ್ಟಂಬರ್ 29ರವರೆಗಿನ ದಿನಾಂಕದವರಗಿನ ಮಾಹಿತಿ ಕೇಳಲಾಗಿದೆ.

ಇನ್ನೂ ರಾಷ್ಟ್ರೀಯ ಸಂಖ್ಯಾ ಯೋಜನೆ (NNP) ಪರಿಷ್ಕರಣೆ ಕುರಿತು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಈ ಸಮಾಲೋಚನಾ ಕಾಗದವನ್ನು (CP) ಪ್ರಸ್ತುತ TI ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆಯ ಮೇಲೆ ಪರಿಣಾಮ ಬೀರುವ ಎಲ್ಲಾ ಅಂಶಗಳನ್ನು ನಿರ್ಣಯಿಸಲು ನೀಡಲಾಗಿದೆ.
ತಪ್ಪು ಮಾಹಿತಿ ರವಾನೆ ಆಗದಂತೆ ಜಾಗೃತಿ ವಹಿಸಿ
ಈ ವಲಯದಲ್ಲಿನ ನಿರಂತರವಾಗಿ ಸಹಿಷ್ಣುತೆ ಮತ್ತು ಮಾರುಕಟ್ಟೆ ಶಕ್ತಿಗಳ ಸ್ವಯಂ ನಿಯಂತ್ರಣವನ್ನು ಪ್ರೋತ್ಸಾಹಿಸಲು ಕನಿಷ್ಠ ನಿಯಂತ್ರಕ ಮಧ್ಯಸ್ಥಿಕೆಯನ್ನು ದೂರಸಂಪರ್ಕ ನಿಯಂತ್ರಕ ಪ್ರತಿಪಾದಿಸಿದೆ. ಅಲ್ಲದೇ ಇಂತಹ ತಪ್ಪು ಮಾಹಿತಿ ಪ್ರಸಾರಗೊಳ್ಳುವ, ಇಲ್ಲವೇ ಶಾಶ್ವತಗೊಳಿಸುವ ಯಾವುದೇ ನಕಲಿ ವದಂತಿಗಳನ್ನು ನಾವು ನಿಸ್ಸಂದೇಹವಾಗಿ ನಿರಾಕರಿಸಬೇಕು. ನಾವು ತಪ್ಪು ಮಾಹಿತಿಯನ್ನು ಖಂಡಿಸುದ್ದೇವೆ ಎಂದು ಪ್ರಾಧಿಕಾರದ ಮುಖ್ಯಸ್ಥರು ಹೇಳಿದ್ದಾರೆ.
ಈ ಕುರಿತು ಪ್ರಾಧಿಕಾರವು ನಿಖರವಾದ ಮಾಹಿತಿಯನ್ನು ತನ್ನ ವೆಬ್‌ಸೈಟ್ ನಲ್ಲಿ ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ತಿಳಿಸಿದೆ. ಈ ಕುರಿತು ಜಾಗೃತಿ ವಹಿಸುವಂತೆ TRAI ಎಲ್ಲ ಮಧ್ಯಸ್ಥಗಾರರು ಮತ್ತು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದೆ.












Click it and Unblock the Notifications