Get Updates
Get notified of breaking news, exclusive insights, and must-see stories!

Telangana Poll: 'ತೆಲುಗು' ಪತ್ರಿಕೆಗಳಲ್ಲಿ 'ಕರ್ನಾಟಕ ಸರ್ಕಾರ'ದ 'ಗ್ಯಾರಂಟಿಗಳ' ಜಾಹೀರಾತು ವಿವಾದ?

ಬೆಂಗಳೂರು, ನವೆಂಬರ್ 27: ಕರ್ನಾಟಕದಲ್ಲಿ ಚುನಾವಣೆಗೂ ಮೊದಲು ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಸಂಪೂರ್ಣವಾಗಿ ಜಾರಿ ಮಾಡಲಾಗಿದೆ. ಹೀಗೆಂಬ ಜಾಹೀರಾತುಗಳು ಚುನಾವಣೆ ಕಾವು ಹೆಚ್ಚಾಗಿರುವ ತೆಲಂಗಾಣದಲ್ಲಿ 'ತೆಲುಗು ಪತ್ರಿಕೆಗಳಲ್ಲಿ' ರಾರಾಜಿಸುತ್ತಿವೆ. ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಕರ್ನಾಟಕದಲ್ಲಿ ಉಚಿತ ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿಗೆ ಹಣ ಇಲ್ಲ ಎಂದು ಸಬೂಬು ಹೇಳುತ್ತಿದೆ. ಬರಗಾಲ ತಾಂಡವವಾಡುತ್ತಿದ್ದರೂ ಸಹಿತ ಸಂತ್ರಸ್ತರಿಗೆ, ರೈತರಿಗೆ ಪರಿಹಾರ ನೀಡಲು ಮನಸ್ಸು ಮಾಡದೇ ಕೇಂದ್ರದತ್ತ ಬೆಟ್ಟು ಮಾಡುತ್ತಿದೆ. ಆದರೆ ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ತೆಲುಗು ಪತ್ರಿಕೆಗಳಲ್ಲಿ ಫ್ರಂಟ್ ಪೇಜಿನಲ್ಲಿ ಉಚಿತ ಯೋಜನೆಗಳ ಬಗ್ಗೆ ಜಾಹೀರಾತು ನೀಡಿದೆ. ಇದು ಇದೀಗ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

Telangana Polls:Congress Bought Telugu Newspaper Ads in Telangana Using Karnatakas Taxpayers Money

ತೆಲಂಗಾಣದಲ್ಲಿ ಈಗಾಗಲೇ ಕರ್ನಾಟಕ ಮಾದರಿಯನ್ನು ಕಾಂಗ್ರೆಸ್ ಸರ್ಕಾರ ಪರಿಚಯಿಸಿದೆ. ಅಲ್ಲಿ ಸಹ ಚುನಾವಣೆ ಸಂಬಂಧ ಆರು ಗ್ಯಾರಂಟಿಗಳನ್ನು ಪ್ರಣಾಳಿಕೆಯ ಮುಖ್ಯ ಅಂಶಗಳನ್ನಾಗಿಸಿದೆ. ಹೀಗಾಗಿ ಅಲ್ಲಿ ಪ್ರಚಾರ ಪಡೆಯುವ ಸಂಬಂಧ ತೆಲುಗು ಭಾಷೆಯ ಪತ್ರಿಕೆಗಳಾದ ''ಈ ನಾಡು, ಆಂಧ್ರಜ್ಯೋತಿ ಮತ್ತು ಸಾಕ್ಷಿ' ಪತ್ರಿಕೆಗಳಲ್ಲಿ ಫ್ರಂಟ್ ಫೇಜ್ ತುಂಬ ಜಾಹೀರಾತು ನೀಡಲಾಗಿದೆ.

ಈ ಮೂಲಕ ತೆಲಗು ಜನರ ಮನವೊಲಿಕೆ ಮಾಡಿ ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ ಕರ್ನಾಟಕದಲ್ಲಿ ಪೂರ್ಣವಾಗಿ ಯೋಜನೆ ಮಾಡಿಲ್ಲ ಎಂಬ ಹಣೆಪಟ್ಟಿ ಸಹ ಕಾಂಗ್ರೆಸ್‌ಗೆ ಇದೆ. ಇತ್ತ ಇಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಕಾರಣ ಖಜಾನೆಯಲ್ಲಿ ಹಣ ಇಲ್ಲ. ಇಂತದ್ದೇ ಸ್ಥಿತಿ ನಾಳೆ ತೆಲಂಗಾಣಕ್ಕೆ ಬರಬಹುದು? ಅಂತಲೂ ಮತ್ತೊಂದು ವರ್ಗದವರು ವಿಶ್ಲೇಷಿಸುತ್ತಿದ್ದಾರೆ.

Telangana Polls:Congress Bought Telugu Newspaper Ads in Telangana Using Karnatakas Taxpayers Money

ಜಾಹೀರಾತಿನಲ್ಲಿ ಏನಿದೆ?

ಈ ಜಾಹೀರಾತಿನ ಒಂದು ಬದಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಮತ್ತೊಂದು ಬದಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಭಾವಚಿತ್ರ ಇದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು ಆರೇ ತಿಂಗಳಲ್ಲಿ ''ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ'' ಯೋಜನೆಯನ್ನು ಜಾರಿ ಮಾಡಿದ್ದೇವೆ ಎಂದು ಕಾಂಗ್ರೆಸ್ ಜಾಹೀರಾತಿನಲ್ಲಿ ಹೇಳಿಕೊಂಡಿದೆ. ಇದರಿಂದ ಜನಸಾಮಾನ್ಯರಿಗೆ, ವಿದ್ಯಾರ್ಥಿಯರಿಗೆ, ಮಹಿಳೆಯರಿಗೆ ಸಹಾಯವಾಗಿದೆ ಎಂದು ತಿಳಿಸಿದೆ.

ಆದರೆ ಬಿಜೆಪಿಯ ನಾಯಕರು ರಾಜ್ಯದಲ್ಲಿ ಸರ್ಕಾರ ಉಚಿತ ಯೋಜನೆಗಳ ಮೂಲಕ ಸರ್ಕಾರದ ಭೊಕ್ಕಸ ಬರಿದು ಮಾಡಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿಗಳು ಆಗುತ್ತಿಲ್ಲ. ಬರ ಪರಿಹಾರ ನೀಡದೇ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ ಎಂದು ಆರೋಪಿಸಿದೆ. ಆದರೆ ಸರ್ಕಾರ ಮಾತ್ರ ಖಜಾನೆಯಲ್ಲಿ ಹಣ ಇದೆ ಎಂದು ಸುಳ್ಳು ಹೇಳುತ್ತಿದೆ. ಹಣ ಇದ್ದರೆ ಪರಿಹಾರ ನೀಡಬೇಕಲ್ಲವೇ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.

ತೆಲಂಗಾಣದಲ್ಲಿನ ಕಾಂಗ್ರೆಸ್ ಜಾಹೀರಾತಿಗೆ ಆಕ್ರೋಶ

ಇದೇಲ್ಲ ಬೆಳವಣಿಗೆ ಮಧ್ಯೆ ಆಂಗ್ಲ ಭಾಷೆ ದಿ ಹಿಂದು ಪತ್ರಿಕೆ ಸೇರಿದಂತೆ ತೆಲುಗು ಭಾಷೆಯ ಪತ್ರಿಕೆಗಳಲ್ಲಿ ಕರ್ನಾಟಕದ ಮಾದರಿಯನ್ನು ಪರಿಚಯಿಸಲು ಜನರ ತೆರಿಗೆ ಹಣ ಪೋಲು ಮಾಡಿದೆ ಎಂದು ಕರ್ನಾಟಕ ಬಿಜೆಪಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ತೆಲುಗು ಜಾಹೀರಾತುಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ಕೈತೊಳೆದುಕೊಂಡಿರುವ ಕಾಂಗ್ರೆಸ್ ಸರ್ಕಾರ ಕರ್ನಾಟಕದ ತೆರಿಗೆದಾರರ ಹಣದಲ್ಲಿ ತೆಲಂಗಾಣದಲ್ಲಿ ಚುನಾವಣೆಗೆ ಮಣಿದು ಫುಲ್ ಪೇಜ್ ನ್ಯೂಸ್ ಪೇಜ್ ಜಾಹೀರಾತುಗಳನ್ನು ಖರೀದಿಸಿದೆ. ಎಲ್ಲವನ್ನು ಜಾರಿಗೆ ತಂದಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಅವರು ದೂರಿದರು.

ರಾಜ್ಯವನ್ನು ದಿವಾಳಿ ಮಾಡಿ ಜನರನ್ನು ಅಭಿವೃದ್ಧಿಯಿಂದ ವಂಚಿತರನ್ನಾಗಿಸಿರುವ ಕಾಂಗ್ರೆಸ್ ಭರವಸೆಗಳನ್ನು ತನ್ನ 'ಕರ್ನಾಟಕ ಮಾದರಿ' ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಗುಡುಗಿದ್ದಾರೆ.

ಕನ್ನಡಿಗರು ಕ್ಷಮಿಸುವುದಿಲ್ಲ ಎಂದು ಸುಧಾಕರ್

ಕರ್ನಾಟಕದ ಶ್ರಮಜೀವಿಗಳ ತೆರಿಗೆದಾರರ ಹಣ ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ಹಣದ ಎಟಿಎಂ ಆಗಿರುವುದು ಬೇಸರದ ಸಂಗತಿ. ಈ ದ್ರೋಹವನ್ನು ಕನ್ನಡಿಗರು ಕ್ಷಮಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರ ಈ ಜಾಹೀರಾತು ನೀಡಿ ಪೇಚಿಗೆ ಸಿಲುಕಿತೆ?, ಈ ಮೂಲಕ ಮತ್ತೊಂದು ಹೊಸ ವಿವಾದಕ್ಕೆ ನಾಂದಿ ಹಾಡಿತೆ ಎಂಬ ಅನುಮಾನಗಳು ಕಾಡುತ್ತಿವೆ. ಸದ್ಯ ಕಾಂಗ್ರೆಸ್ ಮೇಲಿನ ಜಾಹೀರಾತು ಆರೋಪಗಳಿಗೆ ಪ್ರತ್ಯುತ್ತರ ಬರಬೇಕಿದೆ.

ಡಿಸೆಂಬರ್ ಮೊದಲ ವಾರವೇ ಫಲಿತಾಂಶ

ತೆಲಂಗಾಣದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಎಲ್ಲ ಪಕ್ಷಗಳು ಮತದಾನ ಎದುರು ನೋಡುತ್ತಿವೆ. ಗೆಲ್ಲುವ ತವಕದಲ್ಲಿವೆ. ನವೆಂಬರ್ 30ರಂದು ಮಿಜೋರಾಂ, ಮಧ್ಯಪ್ರದೇಶ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಏಕಕಾಲಕ್ಕೆ ಮತದಾನ ನಡೆಯಲಿದೆ. ರಾಜಸ್ಥಾನದಲ್ಲಿ ನ.25ರಂದು ಚುನಾವಣೆ ನಡೆದಿದೆ. ಈ ಎಲ್ಲ ಐದು ರಾಜ್ಯಗಳ ಚುನಾವಣೆ ಫಲಿತಾಂಶವು ಡಿಸೆಂಬರ್ 3ರಂದು ಪ್ರಕಟಗೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+