Telangana Poll: ಸಿಎಂ ಕೆಸಿಆರ್ ವಿರುದ್ಧ ಕಾಂಗ್ರೆಸ್ ರೇವಂತ್ ರೆಡ್ಡಿ ಸ್ಪರ್ಧೆ: ರೆಡ್ಡಿ ಆಯ್ಕೆ ಹಿಂದೆ ಡಿಕೆಶಿ?
ನವದೆಹಲಿ, ನವೆಂಬರ್ 07: ತೆಲಂಗಾಣದಲ್ಲಿ ಚುನಾವಣೆ ಕಣ ಮತ್ತಷ್ಟು ರಂಗೇರುವ ಸಾಧ್ಯತೆಗಳಿವೆ. ಕಾರಣ ಇಲ್ಲಿ ಕಾಂಗ್ರೆಸ್ ತನ್ನ ಪ್ರತಿಸ್ಪರ್ಧಿ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ (KCR) ವಿರುದ್ಧ ಸಂಸದ ಮತ್ತು ಪಕ್ಷದ ತೆಲಂಗಾಣ ಮುಖ್ಯಸ್ಥ ರೇವಂತ್ ರೆಡ್ಡಿಯನ್ನು ಕಣಕ್ಕಿಳಿಸಿದೆ. ಇಲ್ಲಿ ಸಹ ಕರ್ನಾಟಕದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ನಾಯಕರೊಬ್ಬರ ರಾಜಕೀಯ ತಂತ್ರಗಾರಿಕೆ ಕೆಲಸ ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸೋಮವಾರ ರಾತ್ರಿ ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 16 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಿಂದ ರೆಡ್ಡಿ ಮತ್ತು ರಾವ್ ಇಬ್ಬರೂ ಎರಡು ಸ್ಥಾನಗಳಲ್ಲಿ ಸ್ಪರ್ಧೆ ಖಚಿತಗೊಂಡಿದೆ.

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರು ಕಾಮರೆಡ್ಡಿ ಕ್ಷೇತ್ರದಲ್ಲಿ ರೇವಂತ್ ರೆಡ್ಡಿಯವರು ಕೆಸಿಆರ್ ಅವರಿಗೆ ಸವಾಲು ಹಾಕಲಿದ್ದಾರೆ . ಅವರು ಇದರೊಂದಿಗೆ ಕೊಡಂಗಲ್ ನಲ್ಲೂ ಸಹ ಅವರು ಸ್ಪರ್ಧಿಸಲಿದ್ದಾರೆ. ಇವರು ಲೋಕಸಭೆ ಸ್ಥಾನವನ್ನು ಗೆಲ್ಲುವ ಮೊದಲು 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಎದುರಿಸಿದರು.
2 ಕ್ಷೇತ್ರದಲ್ಲಿ ಕಣಕ್ಕಿಳಿದ ನಾಯಕರು
ಮುಖ್ಯಮಂತ್ರಿ ಕೆಸಿಆರ್ ಅವರ ಎರಡನೇ ಸ್ಥಾನವಾದ ಗಜ್ವೇಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಕೆಸಿಆರ್ ಅವರ ಸಚಿವ ಸಂಪುಟದಿಂದ ವಜಾಗೊಳಿಸಿದ್ದ ನಂತರ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಈಟಾಲ ರಾಜೇಂದರ್ ಅವರು ಈ ಕ್ಷೇತ್ರದಲ್ಲಿ ಕೆಸಿಆರ್ ಅವರನ್ನು ಮಣಿಸಲು ಸಜ್ಜಾಗಿದ್ದಾರೆ. ಈ ರಾಜೇಂದರ್ ಸಹ ಮತ್ತೊಂದು ಹುಜೂರಾಬಾದ್ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲಿದ್ದಾರೆ.

ಬಿಆರ್‌ಎಸ್ ವಿರುದ್ಧ ಫೈರ್‌ಬ್ರಾಂಡ್ ನಾಯಕ ಎನ್ನಲಾಗುವ ರೇವಂತ್ ರೆಡ್ಡಿ ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ತನ್ನ ನಡೆಯ ಕುರಿತು ಮತದಾರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಗೆಲುವಿನ ರಣತಂತ್ರ ರೂಪಿಸಿದೆ. ಲೋಕಸಭೆ ಚುನಾವಣೆಗು ಮುನ್ನ ಈ ನಿರ್ಧಾರಗಳು ಸಂಭವನೀಯ ಮೈತ್ರಿಗೆ ತೆರೆ ಎಳೆಯಲು ನಾಂದಿ ಹಾಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕೆಸಿಆರ್ ಕಟ್ಟಿ ಹಾಕಲು ಕಾಂಗ್ರೆಸ್ ಯತ್ನ
ಬಿಆರ್‌ಎಸ್ ಪಕ್ಷವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಡು ಕೊಂಡಿದ್ದರೂ ಸಹಿತ ಕಾಮರೆಡ್ಡಿ ಕ್ಷೇತ್ರದ ರೇವಂತ್ ಪ್ರವೇಶವು ಕೆಸಿಆರ್ ರನ್ನು ಕಟ್ಟು ಹಾಕುವ ಉತ್ತಮ ಪ್ರಯತ್ನ ಅಂತಲೂ ಪಕ್ಷ ಭಾವಿಸಿದೆ.
ಕಾಂಗ್ರೆಸ್‌ನಿಂದ ಪ್ರಕಟಗೊಂಡಿರುವ ಮೂರನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ರೇವಂತ್ ರೆಡ್ಡಿಗೆ ಸ್ಪರ್ಧೆ ಜೊತೆಗೆ ಈ ಹಿಂದೆ ಘೋಷಣೆಯಾಗಿದ್ದ ಇಬ್ಬರು ಅಭ್ಯರ್ಥಿಗಳನ್ನು ಕಾಂಗ್ರೆಸ್ ಬದಲಾವಣೆ ಮಾಡಿದೆ. ವನಪರ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಜಿ ಚಿನ್ನಾರೆಡ್ಡಿ ಬದಲಿಗೆ ತುದಿ ಮೇಘಾ ರೆಡ್ಡಿ, ಬೋತ್ ಕ್ಷೇತ್ರದಿಂದ ವೆನ್ನಲ ಅಶೋಕ್ ಬದಲಿಗೆ ಅಡೆ ಗಜೇಂದರ್ ಅವರನ್ನು ಕಣಕ್ಕಿಳಿಸಿದೆ.
ಐದು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಬಾಕಿ
ಕಾಂಗ್ರೆಸ್ ನಿಂದ ಇನ್ನೂ ಐದು ಸ್ಥಾನಗಳಿಗೆ ಹೆಸರು ಘೋಷಣೆ ಆಗಬೇಕಿದೆ. ಈ ಪೈಕಿ ಒಂದು ಅಥವಾ ಎರಡು ಸ್ಥಾನಗಳನ್ನು ಕಾಂಗ್ರೆಸ್ ಸಿಪಿಐಗೆ ಹಂಚಿಕೆ ಮಾಡಬಹುದು ಎಂಬ ನಿರೀಕ್ಷೆಗಳಿವೆ. ಸಿಪಿಐ(ಎಂ) ಈಗಾಗಲೇ ಮೈತ್ರಿ ಮಾತುಕತೆ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ.
ಕಾಂಗ್ರೆಸ್ ರೇವಂತ್ ರೆಡ್ಡಿ, ಎನ್ ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಸೇರಿದಂತೆ ಮೂವರು ಹಾಲಿ ಸಂಸದರನ್ನು ಚುನಾವಣೆಗೆ ಅಖಾಡಕ್ಕೆ ಇಳಿಸಿದೆ. ಸಾಲದೆಂಬಂತೆ ಕಾಂಗ್ರೆಸ್ ತನ್ನ ಹಾಲಿ ಐವರು ಶಾಸಕರನ್ನು ಮತ್ತೆ ಸ್ಪರ್ಧೆಗೆ ಅವಕಾಶ ನೀಡಿದೆ. ಈ ಹಿಂದೆ ಹಲವಾರು ಕಾಂಗ್ರೆಸ್ ಶಾಸಕರು ಬಿಆರ್‌ಎಸ್ ಮತ್ತು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ತೆಲಂಗಾಣದಲ್ಲಿ ಬಿಜೆಪಿಗೆ ಪಕ್ಷಾಂತರ ಬಿಸಿ ತಟ್ಟಿದೆ.
ರೇವಂತ್ ರೆಡ್ಡಿ ನಾಮ ನಿರ್ದೇಶನ ಹಿಂದೆ ಡಿಕೆಶಿ?
ಸದ್ಯ ಕೆಸಿಆರ್ ಅವರ ವಿರುದ್ಧ ತೊಡೆ ತಟ್ಟಿರುವ ಕಾಂಗ್ರೆಸ್ ರೇವಂತ್ ರೆಡ್ಡಿ ಕರ್ನಾಟಕದ ಹಾಲಿ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಉತ್ತಮ ಒಡನಾಟ ಇಟ್ಟುಕೊಂಡ ನಾಯಕರ ಪೈಕಿ ಒಬ್ಬರು. ಈ ಹಿಂದೆ ಕರ್ನಾಟಕದ ನಾಯಕರು ಚುನಾವಣೆ ಸಂಬಂಧ ತೆಲಂಗಾಣಕ್ಕೆ ತೆರಳಿದ್ದರು. ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕದಲ್ಲಿ ಪ್ರಚಂಡ ಬಹುಮತ ಗಳಿಸಿರುವ ಕಾಂಗ್ರೆಸ್ ರೂವಾರಿ ಡಿಕೆ ಶಿವಕುಮಾರ್ ಅವರು ರಾಜಕೀಯ ತಂತ್ರಗಳು ಈ ಬಾರಿ ತೆಲಂಗಾಣದಲ್ಲಿ ಕೆಲಸ ಮಾಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಸಂಬಂಧವೇ ಪ್ರಬಲ ನಾಯಕ ಮುಖ್ಯಮಂತ್ರಿ ಕೆಸಿಆರ್ ಅವರ ವಿರುದ್ಧ ಪ್ರಭಾವಿ ನಾಯಕ ರೇವಂತ್ ರೆಡ್ಡಿ ಅವರನ್ನು ನಾಮ ನಿರ್ದೇಶಿಸಲಾಗಿದೆ.
-
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications