Telangana Poll: ಎಲ್ಲ ಪಕ್ಷಗಳಿಂದ ಸಲ್ಲಿಕೆಯಾದ ನಾಮಪತ್ರಗಳೆಷ್ಟು? ಕಡಿಮೆ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ
ಹೈದರಾಬಾದ್, ನವೆಂಬರ್ 13: ತೆಲಂಗಾಣದಲ್ಲಿ ಒಟ್ಟು 119 ಸ್ಥಾನಗಳಿಗೆ ಇದೇ ನವೆಂಬರ್ 30 ರಂದು ಏಕ ಕಾಲಕ್ಕೆ ಮತದಾನ ನಡೆಯಲಿದೆ. ಎಲ್ಲ ಸ್ಥಾನಗಳಲ್ಲಿನ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ ಒಟ್ಟು 5,716 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ತೆಲಂಗಾಣ ರಾಜ್ಯದ ರಾಜಕೀಯ ಪಕ್ಷಗಳ ಒಟ್ಟು ಅಭ್ಯರ್ಥಿಗಳ ಸಂಖ್ಯೆ ಒಟ್ಟು 4,798 ಇದ್ದು, ಅವರೆಲ್ಲ 4,798 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನವೆಂಬರ್ 3 ರಂದು ಚುನಾವಣೆಗೆ ನೋಟಿಫಿಕೇಷನ್ ಹೊರಡಿಸಿದ ದಿನದಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಯಿತು. ಅಲ್ಲಿಂದ ನವೆಂಬರ್ 10 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಯಿತು.

ನಾಳೆ ಮಂಗಳವಾರ ನವೆಂಬರ್ 13ಕ್ಕೆ ಚುನಾವಣಾಧಿಕಾರಿಗಳು ನಾಮಪತ್ರಗಳನ್ನು ಪರಿಶೀಲಿಸುತ್ತಾರೆ. ನಾಮಪತ್ರ ಹಿಂಪಡೆಯಲು ನವೆಂಬರ್ 15 ಕೊನೆಯ ದಿನವಾಗಿದೆ. ಬಿಆರ್‌ಎಸ್ ನಾಯಕ ಕೆಟಿ ರಾಮರಾವ್ ಗಜ್ವೇಲ್ ವಿಧಾನಸಭಾ ಕ್ಷೇತ್ರದ ಗರಿಷ್ಠ 145 ಅಭ್ಯರ್ಥಿಗಳು ಒಟ್ಟು 154 ಉಮೇದುವಾರಿಕೆ ಸಲ್ಲಿಸಿದ್ದಾರೆ.
ತೆಲಂಗಾಣ ಸಿಎಂ ಕ್ಷೇತ್ರದಲ್ಲಿ 90 ಮಂದಿ ಸ್ಫರ್ಧೆ
ತೆಲಂಗಾಣ ಮುಖ್ಯಮಂತ್ರಿ ಬಿಆರ್ ಎಸ್ ನಾಯಕ ಕೆಚಂದ್ರಶೇಖರ್ ರಾವ್ ಅವರು ಮತ್ತೆ ಗೆಜ್ವೇಲ್ ನಿಂದ ಆಯ್ಕೆ ಬಯಸಿ ಅಲ್ಲಿಯೂ ನಾಮಪತ್ರ ಸಲ್ಲಿಸಿದ್ದಾರೆ. ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದ್ದಾರೆ. ಈ ಕ್ಷೇತ್ರದಲ್ಲಿ ಸಿಎಂ ವಿರುದ್ಧ ಬಿಜೆಪಿ ನಾಯಕ ಈಟಾಲ ರಾಜೇಂದರ್ ಕಣಕ್ಕಿಳಿದಿದ್ದಾರೆ. ಸಿಎಂ ರಾವ್ ಅವರು ಕಾಮರೆಡ್ಡಿಯಲ್ಲಿ ಸಹ ಸ್ಪರ್ಧೆಗೆ ನಿಂತಿದ್ದು, ಅಲ್ಲಿ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸೇರಿ 90ಕ್ಕೂ ಹೆಚ್ಚು ಮಂದಿ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗಿದೆ.
ಐಟಿ ಸಚಿವ ಕೆಟಿ ರಾಮರಾವ್ ಪ್ರತಿನಿಧಿಸುವ ಸಿರ್ಸಿಲ್ಲಾ ಭಾಗದಲ್ಲಿ 36 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಸಿದ್ದಿಪೇಟೆಯಲ್ಲಿ ಹಾಲಿ ಶಾಸಕ ಮತ್ತು ಹಣಕಾಸು ಸಚಿವ ಟಿ ಹರೀಶ್ ರಾವ್ ಸೇರಿದಂತೆ 62 ಅಭ್ಯರ್ಥಿಗಳು ಪೈಪೋಟಿ ಒಡ್ಡಲಿದ್ದಾರೆ.

ಕಾಂಗ್ರೆಸ್ 118 ಮಂದಿ ಕಣಕ್ಕೆ, ಬಿಜೆಪಿ 111 ಮಂದಿ ಸ್ಪರ್ಧೆ
ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದ ಆಡಳಿತಾರೂಢ BRS ಎಲ್ಲ 119 ವಿಧಾನಸಭಾ ಕ್ಷೇತ್ರಗಳಿಂದಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ 118 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತೆಲಂಗಾಣದಲ್ಲಿ ಬಿಆರ್‌ಎಸ್‌ನ ಸ್ನೇಹಿ ಮಿತ್ರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆ ಹಾದುಲ್ ಮುಸ್ಲಿಮೀನ್ (AIMIM) 9 ವಿಭಾಗಗಳಲ್ಲಿ ತನ್ನ ಅಭ್ಯರ್ಥಿಗಳಿಂದ ನಾಮ ಪತ್ರ ಸಲ್ಲಿಸಿದೆ.
ಒಟ್ಟು ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ 111 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಈ ಮೂಲಕ ಉಳಿದ ಕ್ಷೇತ್ರಗಳನ್ನು ಬಿಜೆಪಿಯು ತನ್ನ ಮಿತ್ರ ಪಕ್ಷ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನಾಗೆ ಬಿಟ್ಟು ಕೊಟಿದ್ದಾರೆ.
ಕೋಟ್ಯಂತರ ನಗದು, ಚಿನ್ನಾಭರವಣ ಜಪ್ತಿ
ತೆಲಂಗಾಣದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಆದಾಗಿನಿಂದ ಕಟ್ಟೆಚ್ಚರ ವಹಿಸಲಾಗಿದೆ. ಮತದಾರರನ್ನು ಸೆಳೆಯಲು ಮದ್ಯ ಸಾಗಾಣೆ ಮಾಡದಂತೆ,ಹಣ , ಗಿಫ್ಟ್ ಹಂಚಿಕೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಹೀಗಿದ್ದರು ನಿತ್ಯ ನಗದು, ಮದ್ಯ ಜಪ್ತಿ ಆಗಿದೆ.
ನವೆಂಬರ್ 11 ರಂದು 544 ಕೋಟಿ ರೂಪಾಯಿ ನಗದು ಹಣ ವಶಕ್ಕೆ ಪಡೆಯಲಾಗಿದೆ. ಒಟ್ಟು 186.8 ಕೋಟಿ ರೂಪಾಯಿ ನಗದು, 178 ಕೋಟಿ ಮೌಲ್ಯದ 292 ಕೆಜಿ ಚಿನ್ನ, 1,172 ಕೆಜಿ ಬೆಳ್ಳಿ ಹಾಗೂ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications