ತೆಲಂಗಾಣ ಸಚಿವರ ಪಿಎ ಪುತ್ರ ವಂಚನೆ ಆರೋಪಕ್ಕೆ ಒಳಗಾಗಿ ಆತ್ಮಹತ್ಯೆ
ಹೈದರಾಬಾದ್, ನ.21: ತೆಲಂಗಾಣ ಸಚಿವ ಶ್ರೀನಿವಾಸ್ ಗೌಡ್ ಅವರ ಮಾಜಿ ಪಿಎ ಅವರ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ಫ್ಲ್ಯಾಟ್‌ಗಳನ್ನು ವಿತರಣ ಮಾಡಲು ಹಣ ಪಡೆದು ವಂಚಿಸಿದ ಆರೋಪ ಹೊತ್ತುಕೊಂಡಿದ್ದರು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶ್ರೀನಿವಾಸಗೌಡ ಅವರ ಮಾಜಿ ಆಪ್ತ ಸಹಾಯಕ ದೇವೆಂದರ್ ಅವರ ಪುತ್ರ ಅಕ್ಷಯ್ ಕುಮಾರ್ (23) ಸೋಮವಾರ ಕೊಂಡಾಪುರದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಗಚ್ಚಿಬೌಲಿ ಇನ್ಸ್‌ಪೆಕ್ಟರ್ ಜಿ ಸುರೇಶ್ ಪ್ರಕಾರ, ಎರಡು ತಿಂಗಳ ಹಿಂದೆ ಅಕ್ಷಯ್ ವಿರುದ್ಧ ಮದ್ಬೂಬನಗರದಲ್ಲಿ ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಯಡಿ ಡಬಲ್ ಬೆಡ್‌ರೂಮ್ ಫ್ಲ್ಯಾಟ್‌ಗಳನ್ನು ಮಂಜೂರು ಮಾಡುವ ನೆಪದಲ್ಲಿ ಹಣ ಪಡೆದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

ಸೋಮವಾರ ಕೊಂಡಾಪುರದಲ್ಲಿರುವ ಸಹೋದರಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಕ್ಷಯ್ ಶವ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications