Telangana: ಮದ್ಯ ಮಾರಾಟ ಮಾಡದೆಯೂ ₹ 2,600 ಕೋಟಿ ಗಳಿಸಿದ ಅಬಕಾರಿ ಇಲಾಖೆ: ಹೇಗೆ ಗೊತ್ತಾ?
ಕುಡುಕರ ಹಣದಿಂದಲೇ ಸರ್ಕಾರ ನಡೆಯೋದು ಎನ್ನುವ ಮಾತಿದೆ. ಅಬಕಾರಿ ಇಲಾಖೆ ಯಾವುದೇ ರಾಜ್ಯಕ್ಕೆ ಉತ್ತಮ ಆದಾಯದ ಮೂಲವಾಗಿದೆ. ಮದ್ಯ ಮಾರಾಟದಿಂದ ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತದೆ. ಆದರೆ, ತೆಲಂಗಾಣ ಸರ್ಕಾರ ಮದ್ಯ ಮಾರಾಟ ಮಾಡದೇ ಇದ್ದರೂ ಬರೋಬ್ಬರಿ ₹ 2639 ಕೋಟಿ ಸಂಗ್ರಹಿಸಿದೆ.
ಮದ್ಯ ಮಾರಾಟ ಮಾಡದಿದ್ದರೂ ಇಷ್ಟೊಂದು ಆದಾಯ ಹೇಗೆ ಗಳಿಸದೆ ಎಂದರೆ, ಅದು ಅರ್ಜಿ ಶುಲ್ಕದ ಮೂಲಕ! ಹೌದು, ಮದ್ಯದಂಗಡಿ ತೆರೆಯಲಿ ಪರವಾನಗಿ ನೀಡಲು ಸ್ವೀಕರಿಸಿದ ಅರ್ಜಿಗಳ ಶುಲ್ಕದಿಂದಲೇ ತೆಲಂಗಾಣ ಅಬಕಾರಿ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಬಂದಿದೆ.

2,620 ಮದ್ಯದಂಗಡಿಗಳ ಹಂಚಿಕೆಗಾಗಿ ಅರ್ಜಿ ಆಹ್ವಾನಿಸಿತ್ತು, ಇದಕ್ಕೆ ರಾಜ್ಯಾದ್ಯಂತ 1.32 ಲಕ್ಷ ಅರ್ಜಿಗಳು ಬಂದಿದೆ. ಒಂದು ಅರ್ಜಿಯ ಶುಲ್ಕ 2 ಲಕ್ಷ ರೂಪಾಯಿ, ಈ ಅರ್ಜಿಯ ಹಣ ಮರುಪಾವತಿಸಲಾಗದ ಷರತ್ತಿನಲ್ಲಿ ವಸೂಲಿ ಮಾಡಲಾಗಿದೆ. ಸೋಮವಾರ ಲಾಟರಿ ಮೂಲಕ ಅರ್ಜಿದಾರರನ್ನು ಆಯ್ಕೆ ಮಾಡಲಾಗುತ್ತದೆ.
ಪರವಾನಗಿ ಪಡೆದವರು ಮಳಿಗೆ ಮಂಜೂರು ಮಾಡಿರುವ ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ ವಾರ್ಷಿಕ ₹ 50 ಲಕ್ಷದಿಂದ ₹ 1.1 ಕೋಟಿ ಶುಲ್ಕ ಪಾವತಿಸಬೇಕು. ವಾರ್ಷಿಕ ಪರವಾನಗಿ ಶುಲ್ಕದ ಆರನೇ ಒಂದು ಭಾಗವನ್ನು ಆಗಸ್ಟ್ 23 ರೊಳಗೆ ಪಾವತಿಸಬೇಕು.
ನಿಯಮಗಳ ಪ್ರಕಾರ, 5000 ವರೆಗಿನ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಪರವಾನಿಗೆ ಶುಲ್ಕ 50 ಲಕ್ಷ ರೂಪಾಯಿ ಆಗಿದ್ದು, 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ಚಿಲ್ಲರೆ ಅಂಗಡಿಗೆ ಪರವಾನಗಿ ಹೊಂದಿರುವ ವ್ಯಕ್ತಿ ವರ್ಷಕ್ಕೆ ₹ 1.1 ಕೋಟಿ ಪಾವತಿಸಬೇಕಾಗುತ್ತದೆ.
ವ್ಯಾಪಾರಿಗಳಿಗೆ ಶುಲ್ಕವು ಕಡಿಮೆ ಎಂದು ಹೇಳಲಾಗುತ್ತದೆ. ಅವರು ಸಾಮಾನ್ಯ ಬ್ರಾಂಡ್‌ಗೆ 27 ಪ್ರತಿಶತ ಮತ್ತು ಪ್ರೀಮಿಯಂ ಪ್ರಭೇದಗಳಿಗೆ 20 ಪ್ರತಿಶತವನ್ನು ಲಾಭವನ್ನು ಪಡೆಯುತ್ತಾರೆ. ಪರವಾನಗಿ ಹಂಚಿಕೆಯಲ್ಲಿಯೂ ಮೀಸಲಾತಿ ಇದೆ, 786 ಪರವಾನಗಿಗಳು ಅಥವಾ ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗಿದೆ. ಇದರಲ್ಲಿ ಪಾರಂಪರಿಕವಾಗಿ ಕಳ್ಳಬಟ್ಟಿ ಮತ್ತು ಮದ್ಯ ಮಾರಾಟ ಮಾಡುವ ಗೌಡರಿಗೆ ಶೇ.15, ಪರಿಶಿಷ್ಟ ಜಾತಿಯವರಿಗೆ ಶೇ.10 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.5ರಷ್ಟು ಮೀಸಲಿಡಲಾಗಿದೆ.
ಆಗಸ್ಟ್ 4ರಿಂದ ಅರ್ಜಿ ಸ್ವೀಕಾರ
ಮರುಪಾವತಿಸಲಾಗದ ₹ 2 ಲಕ್ಷ ಅರ್ಜಿ ಶುಲ್ಕದೊಂದಿಗೆ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯು ಆಗಸ್ಟ್ 4 ರಂದು ಪ್ರಾರಂಭವಾಯಿತು ಮತ್ತು ಶುಕ್ರವಾರ ಮಧ್ಯರಾತ್ರಿ ಮುಕ್ತಾಯವಾಯಿತು. ಅಸ್ತಿತ್ವದಲ್ಲಿರುವ ಪರವಾನಗಿಗಳು ಅಲ್ಲಿಯವರೆಗೆ ಮಾನ್ಯವಾಗಿರುವ ಕಾರಣ ಅಂಗಡಿಗಳು ಡಿಸೆಂಬರ್ 1 ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು.
ಆರ್ಥಿಕ ಬೆಳವಣಿಗೆಯ ಜೊತೆಗೆ ವ್ಯಾಪಾರ, ಆತಿಥ್ಯ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ, ಮದ್ಯದ ಸೇವನೆಯು ಸಹ ಬೆಳೆದಿದೆ, ಆದ್ದರಿಂದ ಹೆಚ್ಚಿನ ಜನರು ವ್ಯಾಪಾರಕ್ಕೆ ಬರಲು ಉತ್ಸುಕರಾಗಿದ್ದಾರೆ.
ಹೈದರಾಬಾದ್‌ನಲ್ಲಿ 615 ಮದ್ಯದ ಅಂಗಡಿಗಳನ್ನು ಹೊಂದಿರುತ್ತದೆ. ಹೈದರಾಬಾದ್‌ನ ಐಟಿ ಕಾರಿಡಾರ್ ನಲ್ಲಿರುವ ಸೆರಿಲಿಂಗಂಪಲ್ಲಿ ಹಾಗೂ ವಿಮಾನ ನಿಲ್ದಾಣ ಇರುವ ಶಂಶಾಬಾದ್ ಪ್ರದೇಶದಲ್ಲಿ ಅತಿ ಹೆಚ್ಚು ಅರ್ಜಿಗಳು ಬಂದಿವೆ. ಸರೂರನಗರದ ಒಂದು ಅಂಗಡಿಗೆ 10,908 ಅರ್ಜಿಗಳು ಬಂದಿವೆ ಎಂದು ಹೇಳಲಾಗಿದೆ. ತೆಲಂಗಾಣದಿಂದ ಮಾತ್ರವಲ್ಲದೆ ಆಂಧ್ರಪ್ರದೇಶದಿಂದಲೂ ಸಾಕಷ್ಟು ಸಂಖ್ಯೆಯ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ತೆಲಂಗಾಣದಲ್ಲಿ ಮದ್ಯ ಮಾರಾಟದ ಆದಾಯವು 2015-16ರಲ್ಲಿ ₹ 12,703 ಕೋಟಿಯಿಂದ 2021-22ರಲ್ಲಿ ₹ 25,585 ಕೋಟಿಗೆ ಆಗಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು ₹ 30,000 ಕೋಟಿಗಳಷ್ಟು ಮಾರಾಟವನ್ನು ಅಂದಾಜಿಸಲಾಗಿದೆ.












Click it and Unblock the Notifications