Get Updates
Get notified of breaking news, exclusive insights, and must-see stories!

Telangana Election 2023: ತೆಲಂಗಾಣ ಬಿಆರ್‌ಎಸ್ ಅಭ್ಯರ್ಥಿ, ಸಂಸದ ಪ್ರಭಾಕರ್ ರೆಡ್ಡಿಗೆ ಚಾಕುವಿನಿಂದ ಇರಿದ ಬಿಜೆಪಿ ಕಾರ್ಯಕರ್ತ

ಹೈದರಾಬಾದ್‌, ಅಕ್ಟೋಬರ್‌ 30: ಮುಂಬರುವ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಭಾರತ್ ರಾಷ್ಟ್ರ ಸಮಿತಿ ( ಬಿಆರ್‌ಎಸ್‌ ) ಅಭ್ಯರ್ಥಿಗೆ ಚಾಕು ಇರಿಯಲಾಗಿದೆ. ಈ ಘಟಣೆಯು ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ದೌಲತಾಬಾದ್ ತಾಲ್ಲೂಕಿನ ಸೂರಂಪಲ್ಲಿ ಗ್ರಾಮದಲ್ಲಿ ನಡೆದಿದೆ.

ಬಿಆರ್‌ಎಸ್ ಅಭ್ಯರ್ಥಿ ಹಾಗೂ ಮೇದಕ್‌ನ ಲೋಕಸಭಾ ಸಂಸದ ಕೋತ ಪ್ರಭಾಕರ್ ರೆಡ್ಡಿ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

Telangana BRS Dubbaka candidate Kotha Prabhakar Reddy stabbed with knife by alleged BJP sympathiser

ದಾಳಿಕೋರನನ್ನು ಚೆಪ್ಪಳ ಗ್ರಾಮದ ಘಟಾನಿ ರಾಜು ಎಂದು ಗುರುತಿಸಲಾಗಿದೆ. ಸಂಸದರ ಮೇಲೆ ಹಲ್ಲೆ ನಡೆಸಿದಾಗ ಆತ ಕುಡಿದ ಮತ್ತಿನಲ್ಲಿದ್ದ ಸ್ಥಿತಿಯಲ್ಲಿದ್ದನೆಂದು ತಿಳಿದುಬಂದಿದೆ.

ದಾಳಿಯ ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದನು. ಆತ ಇತ್ತೀಚೆಗೆ ಬಿಜೆಪಿ ಸೇರಿದ್ದನೆಂಬ ಮಾಹಿತಿ ಲಭ್ಯವಾಗಿದೆ.

ಘಟನೆ ನಡೆದ ತಕ್ಷಣ ಪ್ರಭಾಕರ ರೆಡ್ಡಿ ಅವರನ್ನು ಗಜ್ವೇಲ್‌ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತು. ಹೆಚ್ಚಿನ ಚಿಕಿತ್ಸೆಗಾಗಿ ಸಿಕಂದರಾಬಾದ್‌ನ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದಿಪೇಟೆ ಪೊಲೀಸ್ ಕಮಿಷನರ್ ಶ್ವೇತಾ ರೆಡ್ಡಿ, ನಾವು ರಾಜುವನ್ನು ನಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಕುಡಿದ ಮತ್ತಿನಲ್ಲಿದ್ದ ಆತನಿಗೆ ಕೌಟುಂಬಿಕ ಸಮಸ್ಯೆಗಳೂ ಇದ್ದವು. ನಾವು ಆತನನ್ನು ಬಿಜೆಪಿ ಬೆಂಬಲಿಗನೆಂದು ಗುರುತಿಸಿದ್ದೇವೆ.

'ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಸುರಕ್ಷಿತವಾಗಿದ್ದಾರೆ. ದೌಲತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅವರನ್ನು ಗಜ್ವೇಲ್‌ಗೆ ಸ್ಥಳಾಂತರಿಸಲಾಗಿದೆ. ಆರೋಪಿ ಬಂಧಿತನಾಗಿದ್ದು, ಈ ಕುರಿತು ತನಿಖೆ ನಡೆಸುತ್ತಿದ್ದೇವೆ' ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+