ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ ಪಿವಿ6 ಪ್ರಥಮ ಹಾರಾಟ ಯಶಸ್ವಿ

By Dr Anantha Krishnan M
|
Google Oneindia Kannada News

ಬೆಂಗಳೂರು, ನ. 11: ಹಗುರ ಯುದ್ಧ ವಿಮಾನ ತೇಜಸ್‌ನ ನೂತನ ರೂಪಾಂತರ ಪಿವಿ6 (Prototype Vehicle 6) ಬೆಂಗಳೂರಿನ ಹಾಲ್ ವಿಮಾನ ನಿಲ್ದಾಣದಲ್ಲಿ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಮುಗಿಸಿದೆ. ಪೈಲಟ್ ಆಗಿ ಗ್ರೂಪ್ ಕ್ಯಾಪ್ಟನ್ ವಿವರ್ಟ್ ಸಿಂಗ್ ಹಾಗೂ ಸಹ ಪೈಲಟ್ ಆಗಿ ಗ್ರೂಪ್ ಕ್ಯಾಪ್ಟನ್ ಅನೂಪ್ ಕಬಡ್ವಾಲ್ ವಿಮಾನವನ್ನು ಮುನ್ನಡೆಸಿದರು. ಇವರಿಬ್ಬರೂ ರಾಷ್ಟ್ರೀಯ ವಿಮಾನ ಪರೀಕ್ಷಾ ಕೇಂದ್ರದವರು ಎಂಬುದು ಗಮನಾರ್ಹ ಅಂಶ.

ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ನಿರ್ದೇಶಕ ಪಿ.ಎಸ್. ಸುಬ್ರಹ್ಮಣ್ಯಂ ಒನ್ ಇಂಡಿಯಾ ಜತೆ ಮಾತನಾಡಿ, "ವಿಮಾನವು ಸುಮಾರು 35 ನಿಮಿಷಗಳ ಕಾಲ ಹಾರಾಟ ನಡೆಸಿದೆ. ಪೈಲಟ್‌ಗಳು ಯೋಜಿಸಿದ್ದ ಕೌಶಲ್ಯವನ್ನು ಸುಲಭವಾಗಿ ಮಾಡಿ ಮುಗಿಸಿದ್ದಾರೆ. ಹೊಸ ಇಂಜಿನ್‌ನ ಸಂಪೂರ್ಣ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದೆ" ಎಂದು ತಿಳಿಸಿದ್ದಾರೆ.

tejas-flight

30,000 ಅಡಿ ಎತ್ತರ ತಲುಪಿದ ಪಿವಿ6
ಪಿವಿ6 ತನ್ನ ಗರಿಷ್ಠ ಸಾಮರ್ಥ್ಯವಾದ 30,000 ಅಡಿಗಳಷ್ಟು ಎತ್ತರಕ್ಕೆ ಹಾರಿದ್ದು, 0.7 ಮ್ಯಾಕ್ ವೇಗವನ್ನು ತಲುಪಿದೆ ಹಾಗೂ 14 ಡಿಗ್ರಿಗಳಷ್ಟು ದಾಳಿ ನಡೆಸುವ ಕೋನಕ್ಕೆ ತಿರುಗಿದೆ. ಇದು ತೇಜಸ್‌ ಕಾರ್ಯಕ್ರಮದ 15ನೇ ರೂಪಾಂತರವಾಗಿದೆ. ಹಿಂದಿನ ರೂಪಾಂತರಗಳೆಂದರೆ ಟಿಡಿ1, ಟಿಡಿ2, ಪಿವಿ1, ಪಿವಿ2, ಪಿವಿ3, ಪಿವಿ5 (ತರಬೇತುದಾರ), ಎಲ್‌ಎಸ್‌ಪಿ1, ಎಲ್ಎಸ್‌ಪಿ2, ಎಲ್ಎಸ್‌ಪಿ3, ಎಲ್ಎಸ್‌ಪಿ4, ಎಲ್ಎಸ್‌ಪಿ5, ಎಲ್ಎಸ್‌ಪಿ7, ಎಲ್ಎಸ್‌ಪಿ8 ಮತ್ತು ಎಸ್‌ಪಿ1. ಎಲ್ಎಸ್‌ಎಯ ನೌಕಾ ರೂಪಾಂತರವು ಶೀಘ್ರ ಪ್ರಯೋಗಕ್ಕೆ ಒಳಗಾಗಲಿದೆ ಎಂದು ವಿವರಿಸಿದರು.

ಮುಂದಿನ ಯೋಜನೆಗಳಿಗೆ ವೇಗ
ಹಿಂದೂಸ್ತಾನ್ ಏರೋನಾಟಿಕಲ್ ಲಿ. (ಹ್ಯಾಲ್) ನ ಅಧ್ಯಕ್ಷ ಆರ್.ಕೆ. ತ್ಯಾಗಿ ಅವರು ದೆಹಲಿಯಿಂದ ಒನ್ಇಂಡಿಯಾ ಜತೆ ದೂರವಾಣಿಯಲ್ಲಿ ಮಾತನಾಡಿ, ಪಿವಿ6 ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ಯೋಜನೆಗಳು ವೇಗ ಪಡೆಯಲಿವೆ. ಇದು ನನ್ನ ತಂಡ ಹಾಗೂ ಇತರ ಮಧ್ಯಸ್ಥಿಕೆದಾರರ ಮತ್ತೊಂದು ಯಶಸ್ಸಾಗಿದೆ. ನಮ್ಮ ಕಾರ್ಖಾನೆಯಿಂದ ಹೊರಬರುವ ತೇಜಸ್ ವಿಮಾನದ ಪ್ರತಿ ರೂಪಾಂತರವೂ ನಮ್ಮ ರಾಯಭಾರಿಯಂತೆ ಕೆಲಸ ಮಾಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಿವಿ6 ವಿಮಾನದ ಎಲ್ಲ ಯಂತ್ರಗಳೂ ಹಾರಾಟದ ಸಂದರ್ಭದಲ್ಲಿ ನಿರೀಕ್ಷೆಯಂತೆ ಸ್ಪಂದಿಸಿದವು. ಇದು ಗಗನದಿಂದ ಗಗನಕ್ಕೆ ಹಾಗೂ ಗಗನದಿಂದ ಭೂಮಿಗೆ ಶಸ್ತ್ರಾಸ್ತ್ರಗಳನ್ನು ವರ್ಗಾಯಿಸುವ ಸಾಮರ್ಥ್ಯ ಹೊಂದಿರುವ ಎರಡು ಆಸನ ಸಾಮರ್ಥ್ಯದ ದ್ವಿತೀಯ ವಿಮಾನವಾಗಿದೆ. ಇದು ಬಹಳ ದಿನಗಳಿಂದ ಕಾಯುತ್ತಿದ್ದ ಫೈನಲ್ ಆಪರೇಶನಲ್ ಕ್ಲಿಯರೆನ್ಸ್‌ ಕಾರ್ಯಕ್ರಮಕ್ಕಾಗಿ ಭಾರತೀಯ ವಾಯು ಸೇನೆ ನೀಡಿದ್ದ ಆದೇಶದಂತೆ ಎಲ್ಲ ಗುಣಗಳನ್ನೂ ಹೊಂದಿದೆ ಎಂದು ತಿಳಿಸಿದರು.

ಅವಳಿ ಕಾಕ್‌ಪಿಟ್‌ಗಳು ಹಾಗೂ ಅದರ ವೈಶಿಷ್ಠ್ಯಗಳು ಪಿವಿ6 ಜತೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಪರೀಕ್ಷಿಸಬೇಕಾಗಿತ್ತು. ಈ ಮೂಲಕ ಎರಡು ಆಸನಗಳ ವಿಮಾನಗಳಲ್ಲಿ ಯಾವುದು ಉತ್ತಮ ಎಂಬುದನ್ನು ತೀರ್ಮಾನಿಸಬೇಕಿತ್ತು. ಪಿವಿ6ನ ಮುಂದಿನ ಹಾರಾಟಗಳಿಂದ ಪೈಲಟ್‌ಗಳು ನೀಡಿರುವ ಅಭಿಪ್ರಾಯಗಳನ್ನು ದೃಢಪಡಿಸಿಕೊಳ್ಳಲಿದ್ದೇವೆ ಎಂದು ತ್ಯಾಗಿ ಹೇಳಿದರು.

ಅಪಘಾತವಿಲ್ಲದೆ 2,700ಕ್ಕೂ ಹೆಚ್ಚು ಹಾರಾಟ
ತೇಜಸ್ ವಿಮಾನದ ವಿವಿಧ ರೂಪಾಂತರಗಳು 2001ರ ಜನವರಿ 4ರಿಂದ ಇಲ್ಲಿಯವರೆಗೆ 2,772 ಹಾರಾಟಗಳನ್ನು ನಡೆಸಿದ್ದು, 1,800 ಗಂಟೆಗಳ ಕಾಲ ಗಗನದಲ್ಲಿ ಸುತ್ತಾಡಿವೆ. ಇಂದಿನವರೆಗೂ ಒಂದೂ ಅಪಘಾತ ಸಂಭವಿಸಿಲ್ಲ. ಈ ಕಾರ್ಯಕ್ರಮಕ್ಕೆ ಎಚ್ಎಎಲ್-ಎಡಿಎ-ಐಎಎಫ್ ಸಂಯುಕ್ತವಾಗಿ ಹೊಸ ನೂಕುಬಲವನ್ನು ನೀಡಿವೆ. ಹೊಸ ಇಂಜಿನ್‌ಗೆ ಹೆಚ್ಚುವರಿಯಾಗಿ ಪಿವಿ6 ಬೋರ್ಡ್‌ನಲ್ಲಿ ಹೊಸ ಸಂಪರ್ಕ ವ್ಯವಸ್ಥೆ ಇತ್ತು. ಸ್ವಯಂಚಾಲಿತ ಲ್ಯಾಂಡಿಂಗ್‌ಗಾಗಿ ರಾಡಾರ್, ಇಡಬ್ಲ್ಯೂ ಸೆನ್ಸಾರ್‌ಗಳು ಹಾಗೂ ನೇವಿಗೇಶನ್ ವ್ಯವಸ್ಥೆಗಳನ್ನು ಹೊಂದಿತ್ತು. ಮುಂದಿನ ಹಾಗೂ ಹಿಂದಿನ ಕಾಕ್‌ಪಿಟ್‌ಗಳಿಂದ ಕಾರ್ಯನಿರ್ವಹಣೆಯನ್ನು ಸಂಪೂರ್ಣ ಬದಲಾಯಿಸಬಹುದಾಗಿತ್ತು.

English summary
PV6 the new variant of the Light Combat Aircraft Tejas completed its first flight successfully. The PV-6 climbed to a maximum altitude of 30,000 feet, touched 0.7 Mach (speed) and pitched up to 14 degrees angle of attack (AoA). The PV6 is the second two-seater having the capability to deliver all air-to-air and air-to-ground weapons as mandated by the Indian Air Force (IAF) for the programme's much-awaited Final Operational Clearance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X