9 ವರ್ಷದವನ ಕೊಂದು, ರಕ್ತ ಕುಡಿದು, ಮಾಂಸ ತಿಂದ 16ರ ಬಾಲಕ

Posted By:
Subscribe to Oneindia Kannada

ಲೂಧಿಯಾನ, ಜನವರಿ 21: ಹದಿನಾರು ವರ್ಷದವನೊಬ್ಬ ಒಂಬತ್ತು ವರ್ಷದ ಬಾಲಕನನ್ನು ಕೊಂದು, ಆತನ ಮಾಂಸವನ್ನು ತಿಂದಿದ್ದಾನೆ. ಹೀಗೆ ಮಾಡಿದ ಆರೋಪಿ ಹೆಸರು ವಿಕೇಶ್ ಕುಮಾರ್. ಪಂಜಾಬ್ ನ ಲೂಧಿಯಾನದಲ್ಲಿ ಈ ಘಟನೆ ನಡೆದಿದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ದೀಪು ಎಂಬ 9 ವರ್ಷದ ಬಾಲಕನನ್ನು ಕೊಂದು, ಆತನ ಮಾಂಸವನ್ನು ತಿಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆರಂಭದಲ್ಲಿ ಆರೋಪಿಯು ಹಣಕ್ಕಾಗಿ ಬೇಡಿಕೆ ಇಡಲು ಯೋಜನೆ ಹಾಕಿಕೊಂಡಿದ್ದಾನೆ. ಆ ನಂತರ ಯೋಜನೆ ವಿಫಲವಾಗಿದ್ದರಿಂದ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ತೊಡೆಯ ಭಾಗದ ಮಾಂಸವನ್ನು ತಿಂದಿರುವ ವಿಕೇಶ್ ಕುಮಾರ್, ಮೃತನ ರಕ್ತವನ್ನು ಸಹ ಕುಡಿದಿದ್ದಾನೆ.[ತಂದೆಯ ಮರ್ಮಾಂಗಕ್ಕೆ ಇರುವೆ ಬಿಟ್ಟು ಹಿಂಸಿಸಿದ ಮಗ]

Teen Killed 9-Year-Old Boy In Ludhiana, Drank His Blood

ಮೃತನ ದೇಹದಿಂದ ಹೃದಯವನ್ನು ಹೊರ ತೆಗೆದಿರುವ ಆರೋಪಿ, ಅದನ್ನು ಲೂಧಿಯಾನದಲ್ಲಿರುವ ಆತನ ಶಾಲೆ ಕಾಂಪೌಂಡ್ ನಲ್ಲಿ ಹಾಕಿದ್ದಾನೆ. ಶಾಲೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾನೆ. ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಶಾಲೆ ಮುಚ್ಚುತ್ತದೆ ಎಂಬ ಹವಣಿಕೆಯಲ್ಲಿ ಹೀಗೆ ಮಾಡಲು ಆಲೋಚಿಸಿದೆ ಎಂದು ತಿಳಿಸಿದ್ದಾನೆ.

ಪೊಲೀಸರ ಪ್ರಕಾರ ವಿಕೇಶ್ ಕುಮಾರ್ ಗೆ ಮಾನಸಿಕ ಸಮಸ್ಯೆ ಇದ್ದಂತಿದೆ. ಆದ್ದರಿಂದಲೇ ಈ ರೀತಿ ಮಾಂಸವನ್ನು ತಿಂದಿದ್ದಾನೆ. ವಿಕೇಶ್ ಕುಮಾರ್ ನ ಶಾಲೆಯ ಕಾಂಪೌಂಡ್ ನಲ್ಲಿದ್ದ ಮೃತನ ಹೃದಯವನ್ನು ಪೊಲೀಸರು ಹುಡುಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The police on Friday arrested a 16-year-old boy for murdering a nine-year-old and then eating his flesh in Ludhiana, Punjab.
Please Wait while comments are loading...