ತಮಿಳುನಾಡು: ದಲಿತ ಯುವಕನ ಮೇಲೆ ಮೂತ್ರ ವಿಜರ್ಸನೆ ಮಾಡಿ ಥಳಿಸಿದ ಮೇಲ್ಜಾತಿಯವರು, ಬಂಧನ
ಚೆನ್ನೈ, ನವೆಂಬರ್ 2: ಮಧ್ಯಪ್ರದೇಶದ ಮಾದರಿ ಘಟನೆ ಮತ್ತೆ ನಡೆದಿದೆ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ಇಬ್ಬರು ದಲಿತ ಯುವಕರಿಗೆ ಬಟ್ಟೆ ಬಿಚ್ಚಿ ಹೊಡೆದು ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿ, ನಗದು ಮತ್ತು ಮೊಬೈಲ್ ಫೋನ್‌ಗಳನ್ನು ಕಸಿದುಕೊಳ್ಳುವ ಮೂಲಕ ಚಿತ್ರಹಿಂಸೆ ನೀಡಲಾಗಿದೆ.
ಈ ಸಂಬಂಧ ತಿರುನಲ್ವೇಲಿ ಜಿಲ್ಲೆಯ ಪ್ರಬಲ ಜಾತಿಯಾದ ಅತ್ಯಂತ ಹಿಂದುಳಿದ ಸಮುದಾಯದ (ಎಂಬಿಸಿ) ಆರು ಜನರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 30 ರಂದು (ಸೋಮವಾರ) ರಾತ್ರಿ 7.45 ರಿಂದ ಮಧ್ಯರಾತ್ರಿ 1 ಗಂಟೆಯ ನಡುವೆ ಥಾಮಿರಬರಾಣಿ ನದಿಪಾತ್ರದಲ್ಲಿ ಮನೋಜ್ ಮತ್ತು ಮರಿಯಪ್ಪನ್ ಎಂಬ ಇಬ್ಬರು ಯುವಕರು ಸ್ನಾನ ಮಾಡಲು ಹೋದಾಗ ಈ ಘಟನೆ ಸಂಭವಿಸಿದೆ. ಮನೆಗೆ ಮರಳುತ್ತಿದ್ದಾಗ ಮದ್ಯ ಹಾಗೂ ಗಾಂಜಾ ಸೇವಿಸಿದ್ದ ತಂಡವೊಂದು ಯುವಕರಿಬ್ಬರ ಮೇಲೆ ಹೊಂಚು ಹಾಕಿ ದಾಳಿ ನಡೆಸಿದೆ.

ಇಬ್ಬರು ದಲಿತ ಸಮುದಾಯದ ಯುವಕರು ಎಂದು ತಿಳಿದ ಗ್ಯಾಂಗ್ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದೆ. ಆಯುಧಗಳಿಂದ ಹಲ್ಲೆ ನಡೆಸಿ ಇಬ್ಬರನ್ನು ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ಪ್ರದೇಶದ ಪ್ರಬಲ ಜಾತಿಗೆ ಸೇರಿದ ಆರು ಸದಸ್ಯರ ಗುಂಪು ಮಧ್ಯರಾತ್ರಿಯವರೆಗೂ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದೆ. ದಲಿತ ಯುವಕರನ್ನು ಬೆದರಿಸಿ ಹಣ, ಸೆಲ್ ಫೋನ್ ಗಳು, ಐದು ಸಾವಿರ ರೂಪಾಯಿ ಹಾಗೂ ಎಟಿಎಂ ಕಾರ್ಡ್ ಗಳನ್ನು ಕಿತ್ತುಕೊಂಡಿತ್ತು.
ಇಬ್ಬರು ಯುವಕರು ಗ್ಯಾಂಗ್‌ನಿಂದ ಬೆತ್ತಲೆಯಾಗಿ ತಪ್ಪಿಸಿಕೊಂಡು ರಾತ್ರಿ 1.30 ರ ಸುಮಾರಿಗೆ ತಮ್ಮ ಮನೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರೂರ ಕೃತ್ಯದ ಬಗ್ಗೆ ತಿಳಿದ ಸಂಬಂಧಿಕರು ಮತ್ತು ಸ್ನೇಹಿತರು ಬೆಚ್ಚಿಬಿದ್ದು, ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣ ಚಿಕಿತ್ಸೆಗಾಗಿ ತಿರುನಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು.
ದೂರಿನ ಆಧಾರದ ಮೇಲೆ ಜಿಲ್ಲೆಯ ತಚನಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗ್ಯಾಂಗ್ ಅನ್ನು ಕ್ರೌರ್ಯ, ಹಲ್ಲೆ ಮತ್ತು ಆಯುಧಗಳಿಂದ ಗಾಯಗೊಳಿಸುವುದು, ದರೋಡೆಯಲ್ಲಿ ತೊಡಗಿರುವುದು ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಿದ್ದಾರೆ.
ತಮಿಳುನಾಡು ಮೂಲದ ದಲಿತ ಪರ ಪಕ್ಷ ವಿಸಿಕೆ ಪೊಲೀಸರು ಘಟನೆಯನ್ನು ಸರಳ ಘಟನೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಎಫ್‌ಐಆರ್‌ನಲ್ಲಿ ಸಂತ್ರಸ್ತರ ದೂರಿನಿಂದ ಹಲವಾರು ಅಂಶಗಳನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದೆ. ಆದಾಗ್ಯೂ, ತಿರುನಲ್ವೇಲಿಯ ಪೊಲೀಸ್ ಆಯುಕ್ತರು ಅವರ ಆರೋಪಗಳನ್ನು ಅಲ್ಲಗಳೆದಿದ್ದಾರೆ.












Click it and Unblock the Notifications