ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ವೇಗವಾಗಿ ವಾಹನ ಚಾಲನೆ ತಮಿಳುನಾಡು, ಕರ್ನಾಟಕದಲ್ಲಿ ಅತಿ ಹೆಚ್ಚು ಸಾವು!: ಎನ್‌ಸಿಆರ್‌ಬಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 25: ದೇಶದಲ್ಲಿ ಅತಿ ವೇಗದ ಚಾಲನೆಯಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, ದೇಶದಲ್ಲಿ ಅತಿ ವೇಗದ ಚಾಲನೆಯಿಂದ ಶೇ 59.7 ರಷ್ಟು ಸಾವಿನ ಪ್ರಮಾಣ ದಾಖಲಾಗಿ ಈ ಎರಡು ರಾಜ್ಯಗಳಲ್ಲಿ ಮಾತ್ರ ಅತಿ ಹೆಚ್ಚು ಸಾವು ಸಂಭವಿಸಿವೆ.

2021ರಲ್ಲಿ ಭಾರತದಲ್ಲಿ ಅಪಘಾತ-ಸಂಬಂಧಿತ ಸಾವುಗಳಿಗೆ (55.9 ಪ್ರತಿಶತ) ಸಂಬಂಧಿಸಿದ ಪ್ರಮುಖ ಸಂಚಾರ ನಿಯಮ ಉಲ್ಲಂಘನೆಯಾಗಿದೆ ಮತ್ತು ಅತೀ ವೇಗವಾದ ಚಾಲನೆಯಿಂದಾಗಿ ಕರ್ನಾಟಕ ರಾಜ್ಯವು ಎರಡನೇ ಅತಿ ಹೆಚ್ಚು ಸಾವುಗಳು ದಾಖಲೆಯ ಪ್ರಮಾಣ ವರದಿಯಾಗಿದೆ.

KSRTC ಸಿಬ್ಬಂದಿಗಳಿಗೆ 50 ಲಕ್ಷ ರೂ ಅಪಘಾತ ವಿಮಾ ಸೌಲಭ್ಯ: ಯೋಜನೆ ಏನೇನು ಒಳಗೊಂಡಿದೆ?KSRTC ಸಿಬ್ಬಂದಿಗಳಿಗೆ 50 ಲಕ್ಷ ರೂ ಅಪಘಾತ ವಿಮಾ ಸೌಲಭ್ಯ: ಯೋಜನೆ ಏನೇನು ಒಳಗೊಂಡಿದೆ?

ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (NCRB)ಯ ಇತ್ತೀಚಿನ ವರದಿಯ ಪ್ರಕಾರ, 2021ರಲ್ಲಿ ಭಾರತದಲ್ಲಿ ಅಪಘಾತದಿಂದ ಸಂಭವಿಸಿರುವ ಸಾವುಗಳು ಹೆಚ್ಚಿನ ರಸ್ತೆ ಅಪಘಾತಗಳು ಅತಿ ವೇಗದ ಕಾರಣದಿಂದಾಗಿವೆ, ಇದು ಒಟ್ಟು ಅಪಘಾತಗಳಲ್ಲಿ 59.7 ಪ್ರತಿಶತದಷ್ಟಿದೆ. ಹೆಚ್ಚಿನ ರಸ್ತೆ ಅಪಘಾತಗಳು ಮಿತಿಮೀರಿದ ವೇಗದ ಕಾರಣದಿಂದಾಗಿವೆ. ಇದು ಒಟ್ಟು ಅಪಘಾತಗಳಲ್ಲಿ 59.7 ಪ್ರತಿಶತದಷ್ಟಿದೆ, ಒಟ್ಟು 4,03,116 ರಸ್ತೆ ಅಪಘಾತ ಪ್ರಕರಣಗಳಲ್ಲಿ 2,40,828 ರಷ್ಟಿದೆ. ಒಟ್ಟು 87,050 ಜನರು ಸಾವನ್ನಪ್ಪಿದ್ದಾರೆ (ಶೇ 55.9) ಮತ್ತು 2,28,274 ಜನರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

Tamil Nadu, Karnataka top over-speeding deaths in India

ಕರ್ನಾಟಕದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ!

ಅತಿ ವೇಗದ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವು ತಮಿಳುನಾಡಿನಲ್ಲಿ ವರದಿಯಾಗಿದೆ (11,419 ಸಾವುಗಳು ಶೇಕಡಾ 13.1), ನಂತರದ 2ನೇ ಸ್ಥಾನದಲ್ಲಿ ಕರ್ನಾಟಕ (8,797 ಸಾವುಗಳು ಶೇಕಡಾ 10.1 ರಷ್ಟಿದೆ). ರಸ್ತೆ ಅಪಘಾತ ಪ್ರಕರಣಗಳು 2020ರಲ್ಲಿ 3,54,796 ರಿಂದ 2021ರಲ್ಲಿ 4,03,116ಕ್ಕೆ ಏರಿದೆ ಕಂಡಿದೆ ಎಂದು ವರದಿ ತಿಳಿಸಿದೆ. ಸಾವು-ನೋವುಗಳು ಶೇಕಡಾ 16.8 ರಷ್ಟು ಹೆಚ್ಚಾಗಿದ್ದು, 2020ರಲ್ಲಿ 1,33,201ರಿಂದ 2021ರಲ್ಲಿ ಇದು 1,55,622ಕ್ಕೆ ಏರಿದೆ. ಇದಲ್ಲದೆ, ಪ್ರತಿ ಸಾವಿರ ವಾಹನಗಳಿಗೆ ಸಾವಿನ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕದಲ್ಲಿ ಕಳೆದ ವರ್ಷ ಒಟ್ಟು 34,647 ಅಪಘಾತಗಳು ವರದಿಯಾಗಿದ್ದು, ಇದರಲ್ಲಿ 40,754 ಜನರು ಗಾಯಗೊಂಡಿದ್ದಾರೆ ಮತ್ತು 10,038 ಜನರು ಸಾವನ್ನಪ್ಪಿದ್ದಾರೆ!

ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವೆಂದರೆ ಅಪಾಯಕಾರಿ ಅಥವಾ ಅಜಾಗರೂಕ ಚಾಲನೆ ಮತ್ತು ಓವರ್‌ಟೇಕಿಂಗ್, ಇದು ದೇಶದಲ್ಲಿ 27.5ರಷ್ಟು ಸಾವುಗಳಿಗೆ ಕಾರಣವಾಗಿದೆ.

ರಸ್ತೆ ಸುರಕ್ಷತೆ ಕುರಿತು ಪ್ರತಿಕ್ರಿಯಿಸಿದ ಇನ್‌ಸ್ಟಿಟ್ಯೂಟ್ ಆಫ್ ರೋಡ್ ಟ್ರಾಫಿಕ್ ಎಜುಕೇಶನ್ (ಐಆರ್‌ಟಿಇ) ಅಧ್ಯಕ್ಷ ರೋಹಿತ್ ಬಲೂಜಾ, "ಟ್ರಾಮಾ ಕೇರ್ ಸೆಂಟರ್, ಏರ್ ಆಂಬ್ಯುಲೆನ್ಸ್, ಹೆದ್ದಾರಿ ಕಣ್ಗಾವಲು ವ್ಯವಸ್ಥೆ ಸೇರಿದಂತೆ ಇ-ವೇಗಳಲ್ಲಿ ಹಲವಾರು ಇತರ ರಸ್ತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

Tamil Nadu, Karnataka top over-speeding deaths in India

ಪ್ರತಿ ಗಂಟೆಗೆ 18 ಪ್ರಯಾಣಿಕರು ಸಾವು

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳ ಪ್ರಕಾರ, 2021 ರಲ್ಲಿ ಭಾರತದಾದ್ಯಂತ 1.55 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದರ ಪ್ರಕಾರ ಪ್ರತಿದಿನ 426 ಜನರು ಸಾವನ್ನಪ್ಪುತ್ತಾರೆ ಮತ್ತು ಪ್ರತಿ ಒಂದು ಗಂಟೆಗೆ 18 ಜನರು ಸಾವನ್ನಪ್ಪುತ್ತಾರೆ. ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ದಾಖಲಾದ ಅತಿ ಹೆಚ್ಚು ಸಾವಿನ ಸಂಖ್ಯೆ ಇದಾಗಿದೆ ಎಂದು ಬ್ಯೂರೋ ಹೇಳಿದೆ. ವರದಿಯ ಪ್ರಕಾರ, ಶೇಕಡಾ 11 ಕ್ಕಿಂತ ಹೆಚ್ಚು ಸಾವುಗಳು ಮತ್ತು ಗಾಯಗಳು ಸೀಟ್ ಬೆಲ್ಟ್ ಬಳಸದ ಕಾರಣ.

English summary
Tamil Nadu, Karnataka top over-speeding deaths in India: NCRB report Read more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X