The Kerala Story: ದಿ ಕೇರಳ ಸ್ಟೋರಿ ಬಿಡುಗಡೆಗೆ ತಮಿಳುನಾಡಿನಲ್ಲಿ ಭಾರೀ ಕಟ್ಟೆಚ್ಚರ!

ಚೆನ್ನೈ, ಮೇ. 05: ಭಾರಿ ವಿವಾದಕ್ಕೆ ಕಾರಣವಾಗಿರುವ ದಿ ಕೇರಳ ಸ್ಟೋರಿ ಚಲನಚಿತ್ರವು ಶುಕ್ರವಾರದಂದು ಬಿಡುಗಡೆಯಾಗಲಿದೆ. ಹೀಗಾಗಿ ಹಲವು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಮೇಲೆ ನಿಗಾ ಇಡಲು ತಮಿಳುನಾಡು ಸರ್ಕಾರವು ಎಲ್ಲಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.

ಈ ಚಲನಚಿತ್ರವು ಕೇರಳ ಮತ್ತು ಇತರ ಹಲವೆಡೆಗಳಲ್ಲಿ ಅನೇಕ ಪಕ್ಷಗಳು ಮತ್ತು ಇತರ ಗುಂಪುಗಳ ನಡುವೆ ವಿವಾದವನ್ನು ಹುಟ್ಟುಹಾಕಿದೆ. ಇದೆ ಕಾರಣಕ್ಕೆ ಸಂಘರ್ಷಗಳು ಉಂಟಾಗುವ ಕಾರಣ ತಮಿಳುನಾಡು ಸರ್ಕಾರ ಮುನ್ನೆಚ್ಚರಿಕರ ತೆಗೆದುಕೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ತಮಿಳುನಾಡು ಸರ್ಕಾರವು ಎಲ್ಲಾ ಜಿಲ್ಲಾ ಕಲೆಕ್ಟರ್‌ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದೆ.

Tamil Nadu government asks DC, SPs to be alert over release of The Kerala Story

ದಿ ಕೇರಳ ಸ್ಟೋರಿ ಚಿತ್ರ ಮೇ 5 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಈ ಚಲನಚಿತ್ರವನ್ನು ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬರಲಿದೆ. ಚಲನಚಿತ್ರಗಳ ಬಿಡುಗಡೆ ಸೇರಿದಂತೆ ಕೆಲವು ಘಟನೆಗಳ ಕಾರಣದಿಂದ ಯಾವುದೇ ತೊಂದರೆ ಉಂಟಾಗುವ ಸಾಧ್ಯತೆಯಿರುವ ಕಾರಣ ಸರ್ಕಾರ ಎಚ್ಚರಿಕೆ ವಹಿಸಿದೆ.

ರಾಜ್ಯದಲ್ಲಿ ಪೊಲೀಸರ ಗುಪ್ತಚರ ವಿಭಾಗದ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಚಿತ್ರವನ್ನು ನಿಷೇಧಿಸಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿಲ್ಲ. ನಮಗೆ ಅಂತಹ ಯಾವುದೇ ವಿನಂತಿ ಬಂದಿಲ್ಲ. ಕೇರಳದಲ್ಲಿಯೂ ಇಂತಹ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Tamil Nadu government asks DC, SPs to be alert over release of The Kerala Story

2011 ರ ಕೊನೆಯಲ್ಲಿ, ಜಯಲಲಿತಾ ನೇತೃತ್ವದ ಸರ್ಕಾರವು ಇಂಗ್ಲಿಷ್ ಚಲನಚಿತ್ರ ಡ್ಯಾಮ್ 999 ನ ಪ್ರದರ್ಶನವನ್ನು ನಿಷೇಧಿಸಿತ್ತು. ಅದರ ಶೀರ್ಷಿಕೆಯು ಪರೋಕ್ಷವಾಗಿ ತಮಿಳುನಾಡು ಮತ್ತು ಕೇರಳ ನಡುವಿನ ಮುಲ್ಲಪೆರಿಯಾರ್ ಅಣೆಕಟ್ಟು ವಿವಾದವನ್ನು ಸೂಚಿಸುತ್ತದೆ ಎನ್ನಲಾಗಿತ್ತು. ನಿಷೇಧವು ಇನ್ನೂ ಒಂದು ವರ್ಷದವರೆಗೆ ಜಾರಿಯಲ್ಲಿದೆ.

ಇನ್ನು, 2013 ರ ಆರಂಭದಲ್ಲಿ, ಕಮಲ್ ಹಾಸನ್ ಅಭಿನಯದ ವಿಶ್ವರೂಪಂ ಚಿತ್ರಕ್ಕೆ ಮುಸ್ಲಿಂ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆರಂಭದಲ್ಲಿ ಅಧಿಕಾರಿಗಳು ಚಿತ್ರಕ್ಕೆ ನಿಷೇಧ ಹೇರಿದ್ದರು. ಆದರೆ, ಚಲನಚಿತ್ರ ನಿರ್ಮಾಪಕರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ನಂತರ ಚಿತ್ರಕ್ಕೆ ಹಾಕಿದ್ದ ನಿಷೇಧವನ್ನು ತೆಗೆದುಹಾಕಲಾಯಿತು.

2006 ರಲ್ಲಿ, ದಿ ಡಾ ವಿನ್ಸಿ ಕೋಡ್ ಎಂಬ ಚಲನಚಿತ್ರದ ಪ್ರದರ್ಶನವನ್ನು ಕರುಣಾನಿಧಿ ನೇತೃತ್ವದ ಸರ್ಕಾರವು ನಿಷೇಧಿಸಿತು, ಆದರೆ ಮದ್ರಾಸ್ ಹೈಕೋರ್ಟ್ ಅದರ ಪ್ರದರ್ಶನಕ್ಕೆ ಅನುಮತಿ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+