ತಮಿಳುನಾಡು ಚುನಾವಣೆಯಲ್ಲಿ ಉಚಿತ ಯೋಜನೆಗಳ ಪೈಪೋಟಿ, ಗೆಲುವಿಗಾಗಿ ಭರ್ಜರಿ ಹೋರಾಟ ಶುರು | Tamil Nadu Election
ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ಈ ಚುನಾವಣೆ ಗೆದ್ದು ಬೀಗಲು ರಾಜಕೀಯ ಪಕ್ಷಗಳ ನಾಯಕರು ನಾನಾ ರೀತಿಯ ರಣತಂತ್ರ ಹೆಣೆಯುತ್ತಾ ಇದ್ದಾರೆ. ತಮಿಳುನಾಡು ಸೇರಿದಂತೆ ಕೇರಳ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆ ಕೂಡ ಒಟ್ಟಿಗೆ ಬರಲಿದೆ. ಹೀಗಿದ್ದರೂ ತಮಿಳುನಾಡು ರಾಜ್ಯದ ಚುನಾವಣೆ ಮಾತ್ರ ಇದೀಗ ಭಾರಿ ಕುತೂಹಲ ಕೆರಳಿಸಿದೆ. ಇಲ್ಲಿ ಗೆಲುವಿಗಾಗಿ ಒಂದು ಕಡೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್ ಮತ್ತು ಡಿಎಂಕೆ ನೇತೃತ್ವದ ಒಕ್ಕೂಟದ ನಡುವೆ ಭಾರಿ ಸ್ಪರ್ಧೆ ಶುರುವಾಗಿದೆ. ಇದೇ ಸಮಯದಲ್ಲಿ ತಮಿಳುನಾಡು ಚುನಾವಣೆಯಲ್ಲಿ ಉಚಿತ ಯೋಜನೆಗಳ ಪೈಪೋಟಿ ಇಡೀ ದೇಶದ ಗಮನ ಸೆಳೆಯುತ್ತಿದೆ ಈಗ.
ದಕ್ಷಿಣ ಭಾರತದಲ್ಲಿ ಪ್ರಭಾವಿ ರಾಜ್ಯವಾಗಿರುವ ಕಾರಣಕ್ಕೆ ತಮಿಳುನಾಡು ಗೆಲ್ಲುವುದು ಎಲ್ಲಾ ಪಕ್ಷ & ರಾಜಕೀಯ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆ. ಆದರೆ ಎನ್ಡಿಎ ಒಕ್ಕೂಟಕ್ಕೆ ತಮಿಳುನಾಡು ರಾಜ್ಯ ಪದೇ ಪದೇ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆ ಕೂಡ ಈ ವಿಚಾರದಲ್ಲಿ ಎನ್ಡಿಎ ಒಕ್ಕೂಟಕ್ಕೆ ಸಾಕಷ್ಟು ಸವಾಲು ತಂದೊಡ್ಡಿತ್ತು. ಅದನ್ನೆಲ್ಲಾ ಎದುರಿಸಿ ಇನ್ನೇನು ಗೆದ್ದು ಬೀಗುವ ಲೆಕ್ಕಾಚಾರ ಹಾಕಿಕೊಂಡ ಸಮಯದಲ್ಲೇ ದೊಡ್ಡ ಸೋಲು ಎದುರಾಗಿತ್ತು. ಆದರೆ ಈ ಬಾರಿ ಗೆದ್ದೇ ಗೆಲ್ಲಬೇಕು ಎಂಬ ಹಠದಲ್ಲಿ ಎನ್ಡಿಎ ಇದೆ.

ಉಚಿತ ಯೋಜನೆಗಳ ಮಹಾಪೂರ
ಒಂದು ಕಡೆ ಡಿಎಂಕೆ ಸರ್ಕಾರ ಈಗ ಮಹಿಳೆಯರಿಗೆ ನೇರವಾಗಿ ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ ಅಡಿ, 1.31 ಕೋಟಿ ಮಹಿಳೆಯರ ಖಾತೆಗೆ ತಲಾ 5,000 ರೂ. ಜಮೆ ಮಾಡಿದೆ. ಹೀಗೆ ಇದರ ಜೊತೆಯಲ್ಲೇ ಇನ್ನಷ್ಟು ಉಚಿತ ಯೋಜನೆಗಳನ್ನು ಜಾರಿಗೆ ತರುವ ಚಿಂತನೆಯಲ್ಲಿ ಇದೆ. ಚುನಾವಣೆ ಘೋಷಣೆಯ ಮೊದಲು ಈ ಯೋಜನೆಗಳು ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಇದೇ ಸಮಯದಲ್ಲಿ ಮತ್ತೊಂದು ಕಡೆ ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಕೂಡ ಉಚಿತ ಯೋಜನೆ ಪೈಪೋಟಿಗೆ ಇಳಿದಿದೆ. ಈಗಾಗಲೇ ಪುರುಷರಿಗೆ ಉಚಿತ ಬಸ್ ಸೇವೆ ಜೊತೆಯಲ್ಲಿ 25,000 ರೂಪಾಯಿ ಮಹಿಳೆಯರಿಗೆ ಭರ್ಜರಿ ಆಫರ್ ಕೊಡಲಾಗಿದ್ದು, ಸ್ಕೂಟರ್ ಖರೀದಿಗೆ ಈ ಹಣ ಕೊಡುವ ಭರವಸೆ ನೀಡಿದೆ ಎನ್ಡಿಎ ಒಕ್ಕೂಟ.
ಉಚಿತ ಯೋಜನೆಗಳ ಭಾರಿ ಪೈಪೋಟಿ
ತಮಿಳನಾಡು ರಾಜ್ಯದಲ್ಲಿ ಉಚಿತ ಯೋಜನೆಗಳು ಹಾಗೂ ಜನರನ್ನು ಸೆಳೆಯುವ ಈ ರೀತಿಯ ತಂತ್ರ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದರಲ್ಲೂ ಕೇಂದ್ರದಲ್ಲಿ ಯಾವುದೇ ಸರ್ಕಾರವು ಅಧಿಕಾರಕ್ಕೆ ಬರಲಿ, ತಮಿಳುನಾಡು ರಾಜ್ಯಕ್ಕೆ ಅನುಕೂಲ ಆಗುತ್ತಲೇ ಬಂದಿದೆ ಎಂಬ ಚರ್ಚೆ ಕೂಡ ಇದೆ. ಹೀಗಿದ್ದಾಗ ಕಳೆದ ಬಾರಿ ಚುನಾವಣೆ ಗೆದ್ದಿರುವ ಡಿಎಂಕೆ ಪಕ್ಷಕ್ಕೆ ಈ ಬಾರಿ ಸೋಲು ತೋರಿಸಿ ಅಧಿಕಾರ ಪಡೆಯಲು ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟವು ಸಜ್ಜಾಗಿದೆ. ಆದರೆ ಇದು ಫಲ ನೀಡುತ್ತಾ? ಎಂಬುದನ್ನ ಕಾದು ನೋಡಬೇಕಿದೆ. ಅಲ್ಲಿಯ ತನಕ ಈ ರೀತಿ ಉಚಿತ ಯೋಜನೆ ವಾರ್ ನಿಲ್ಲುವುದು ಅನುಮಾನವೇ ಸರಿ ಎನ್ನಬಹುದು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications