Get Updates
Get notified of breaking news, exclusive insights, and must-see stories!

ಕರುಣಾನಿಧಿ ಮರಿ ಮೊಮ್ಮಗ ರಾಜಕೀಯ ಎಂಟ್ರಿಗೆ ಚರ್ಚೆ ಜೋರು!

ಕುಟುಂಬ ರಾಜಕೀಯ ಎನ್ನುವುದು ಭಾರತದಲ್ಲಿ ಹೊಸದೇನು ಅಲ್ಲ. ಆದರೆ ಮೂರು ತಲೆಮಾರು ನಾಲ್ಕನೇ ತಲೆಮಾರಿನವರು ಸಹ ರಾಜಕೀಯಕ್ಕೆ ಎಂಟ್ರಿ ಕೊಡುವುದು ಬಹುಶಃ ಭಾರತದಲ್ಲಿ ಅಪರೂಪ. ಇಂತಹ ಮತ್ತೊಂದು ಅಪರೂಪದ ರಾಜಕೀಯಕ್ಕೆ ತಮಿಳುನಾಡಿನ ಜನ ಸಾಕ್ಷಿಯಾಗುತ್ತಿದ್ದಾರೆ. ತಮಿಳುನಾಡಿನ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದಲ್ಲಿ ಈ ರೀತಿಯ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡಿನಲ್ಲಿ ಇದೀಗ ಡಿಎಂಕೆ ಪಕ್ಷ ಅಧಿಕಾರದಲ್ಲಿದ್ದು, ಮಾಜಿ ಮುಖ್ಯಮಂತ್ರಿ ದಿ. ಕರುಣಾನಿಧಿ ಅವರ ಪುತ್ರ ಎಂ.ಕೆ ಸ್ಟಾಲಿನ್‌ ಅವರು ಮುಖ್ಯಮಂತ್ರಿಯಾಗಿದ್ದರೆ. ಎಂ.ಕೆ ಸ್ಟಾಲಿನ್‌ ಅವರ ಪುತ್ರ ಉದಯನಿಧಿ ಸ್ಟಾಲಿನ್ ಉಪಮುಖ್ಯಮಂತ್ರಿಯಾಗಿದ್ದಾರೆ. ಕಡಿಮೆ ಅವಧಿಯಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಉದಯನಿಧಿಗೆ ಕೊಟ್ಟಿರುವುದಕ್ಕೇ ಭಾರೀ ಚರ್ಚೆಯಾಗುತ್ತಿದೆ. ಆದರೆ ಇಲ್ಲಿ ನಾಲ್ಕನೇ ತಲೆಮಾರಿನ ರಾಜಕೀಯ ಲೆಕ್ಕಾಚಾರಗಳು ಈಗ ಜೋರಾಗಿವೆ!

ಹೌದು ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಸಂಚಲನ ಪ್ರಾರಂಭವಾಗಿದೆ. ತಮಿಳುನಾಡಿನಲ್ಲಿ ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ಶುರುವಾಗಲಿದೆಯೇ ಅಥವಾ ಉದಯನಿಧಿ ಸ್ಟಾಲಿನ್‌ ಅವರ ಪುತ್ರ ಸಹ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಎಂಟ್ರಿಕೊಡಲಿದ್ದಾರೆಯೇ ಎನ್ನುವ ವಿಷಯ ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಈಚೆಗೆ ತಮಿಳುನಾಡು ರಾಜಕೀಯದಲ್ಲಿ ನಡೆದಿರುವ ಘಟನೆ. ಈಚೆಗಷ್ಟೇ ಉದಯನಿಧಿ ಸ್ಟಾಲಿನ್‌ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

Tamil Nadu Dcm Udhayanidhi Stalin s son Inbanidhi Stalin likely to Enter Politics

ಉದಯನಿಧಿ ಸ್ಟಾಲಿನ್‌ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಸ್ಥಾನದಂತಹ ಪ್ರಮುಖ ಜವಾಬ್ದಾರಿಗಳನ್ನು ಕೊಟ್ಟಿದ್ದಕ್ಕೆ ವಿರೋಧ ಪಕ್ಷಗಳು ಮಾತ್ರವಲ್ಲ. ಡಿಎಂಕೆಯ ಕಾರ್ಯಕರ್ತರಲ್ಲೂ ಅಸಮಾಧಾನ ಮೂಡಿತ್ತು. ಇದು ತಣ್ಣಗಾಗುವ ಮೊದಲೇ ಉದಯನಿಧಿ ಸ್ಟಾಲಿನ್‌ ಅವರ ಮಗ ಇನ್ಬನಿಧಿ ಸ್ಟಾಲಿನ್‌ ಅವರು ಸರ್ಕಾರಿ ಕಾರ್ಯಕ್ರಮಗಳ ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

Tamil Nadu Dcm Udhayanidhi Stalin s son Inbanidhi Stalin likely to Enter Politics

ರಾಜಕೀಯಕ್ಕೆ ಬರ್ತಾರಾ ಇನ್ಬನಿಧಿ ಸ್ಟಾಲಿನ್ ?

ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ಸ್ಟಾಲಿನ್‌ ಅವರು ಸಹ ರಾಜಕೀಯಕ್ಕೆ ಬರಲಿದ್ದಾರೆಯೇ ಎನ್ನುವ ವಿಷಯ ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಉದಯನಿಧಿ ಅವರೊಂದಿಗೆ ಅವರ ಪುತ್ರ ಸಹ ಕಾರ್ಯಕ್ರಮವೊಂದರ ವೇದಿಕೆ ಹಂಚಿಕೊಂಡಿರುವುದು. ತಮಿಳುನಾಡಿನ ಅಲಂಗನಲ್ಲೂರು ಎನ್ನುವಲ್ಲಿ ನಡೆದ ಜಲ್ಲಿಕಟ್ಟು ಸಮಾರಂಭದಲ್ಲಿ ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ಸ್ಟಾಲಿನ್ ಕಾಣಿಸಿಕೊಂಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಇದೇ ಸಮಾರಂಭದಲ್ಲಿ ಮಧುರೈ ಜಿಲ್ಲಾಧಿಕಾರಿಯನ್ನೇ ಸೈಡ್ ಮಾಡಿ ಇನ್ಬನಿಧಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಈ ಬೆಳವಣಿಗೆ ನಡೆದ ಮೇಲೆ ಇನ್ಬನಿಧಿ ಸಹ ರಾಜಕೀಯಕ್ಕೆ ಬರಲಿದ್ದಾರೆಯೇ ಎನ್ನುವ ಚರ್ಚೆ ಶುರುವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+